ಶಾಲೆಯಲ್ಲೇ ಅಂಗನವಾಡಿ ಕಾರ್ಯಕರ್ತೆ ಜೊತೆ ಚಕ್ಕಂದ, ಶಿಕ್ಷಕನಿಗೆ ಗೂಸಾ

ಚೆನ್ನೈ, ಸೆಪ್ಟೆಂಬರ್ 11: ಶಾಲೆಯಲ್ಲಿಯೇ ಶಿಕ್ಷಕನೊಬ್ಬ ಅಂಗನವಾಡಿ ಶಿಕ್ಷಕಿಯೊಂದಿಗೆ ಲೈಂಗಿಕತೆಯಲ್ಲಿ ತೊಡಗಿದ್ದಾಗ ಗ್ರಾಮಸ್ಥರಿಗೆ ದೊರಕಿದ್ದು, ಗ್ರಾಮಸ್ಥರು ಶಿಕ್ಷಕನಿಗೆ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ.

ತಮಿಳುನಾಡಿನ ನಮಕ್ಕಲ್ ಬಳಿಯ ಉಡುಪ್ಪಮ್ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನೋರ್ವ ಶಾಲಾ ಕೊಠಡಿಯಲ್ಲೇ ಅಂಗನವಾಡಿ ಸಿಬ್ಬಂದಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ. ಇದನ್ನು ಕಂಡ ಗ್ರಾಮಸ್ಥರು ಶಿಕ್ಷನಿಗೆ ಥಳಿಸಿದ್ದಾರೆ.

ಶಿಕ್ಷಕ ಮತ್ತು ಅಂಗನವಾಡಿ ಕಾರ್ಯಕರ್ತೆ ಕೆಲವು ತಿಂಗಳುಗಳಿಂದ ಸಂಬಂಧದಲ್ಲಿದ್ದರು, ಶಾಲಾ ಅವಧಿ ಮುಗಿದ ನಂತರ ಅಲ್ಲಿಯೇ ತಮ್ಮ 'ಕಾರ್ಯದಲ್ಲಿ' ನಿರತರಾಗುತ್ತಿದ್ದರು. ಇದನ್ನು ಶಾಲಾ ಮಕ್ಕಳು ಗಮನಿಸಿ ತಮ್ಮ ಪೋಷಕರಿಗೆ ತಿಳಿಸಿದ್ದರು.

A Teacher Trashed By Villagers For Miss behaving In School

ನಿನ್ನೆ ಸಂಜೆ ವೇಳೆಗೆ ಕೆಲವು ಪೋಷಕರು ಶಿಕ್ಷಕನನ್ನು ರೆಡ್ ಹ್ಯಾಂಡ್‌ ಆಗಿ ಹಿಡಿಯಲೆಂದೇ ಶಾಲೆಗೆ ತೆರಳಿದ್ದರು. ಇದೇ ವೇಳೆ ಈ ಇಬ್ಬರೂ ರಾಸಲೀಲೆಯಲ್ಲಿ ತೊಡಗಿರುವುದನ್ನು ಕಂಡ ಪೋಷಕರು ಶಿಕ್ಷಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಶಿಕ್ಷನನ್ನು ಅರೆ ವಸ್ತ್ರಗೊಳಿಸಿ ಶಾಲೆಯ ಆವರಣದಲ್ಲಿ ಕುಳ್ಳಿರಿಸಿದ್ದ ಗ್ರಾಮಸ್ಥರು ಪೊಲೀಸರನ್ನು ಕರೆಸಿದ್ದಾರೆ. ಪೊಲೀಸರು ಶಿಕ್ಷಕನನ್ನು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸಿದ್ದಾರೆ.

ಶಿಕ್ಷಕನ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಶಾಲೆಯ ಮುಖ್ಯೋಪಾಧ್ಯಾಯರು ಹೇಳಿದ್ದು, ಅಂಗನವಾಡಿ ಸಿಬ್ಬಂದಿ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+