ಚೆನ್ನೈನಲ್ಲಿ ಚಿನ್ನದ ಜೊತೆ ಸಿಕ್ಕಿ ಬಿದ್ದ ಮೂವರು
ಚೆನ್ನೈ, ಆಗಸ್ಟ್ 24 : ರಿಯಾದ್‌ನಿಂದ ಚೆನ್ನೈಗೆ ಆಗಮಿಸಿದ ಮೂವರು ಪ್ರಯಾಣಿಕರ ಜೇಬಿನಲ್ಲಿ ಚಿನ್ನ ಪತ್ತೆಯಾಗಿದೆ. ಮೂವರಿಂದ ಒಟ್ಟು 36.8 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಿಯಾದ್‌ನಿಂದ 6ಇ 8762 ವಿಮಾನದಲ್ಲಿ ಮೂವರು ಆಗಮಿಸಿದ್ದರು. ವಿಮಾನ ನಿಲ್ದಾಣದ ಹೊರ ಹೋಗುವಾರ ಕಸ್ಟಮ್ಸ್ ಅಧಿಕಾರಿಗಳು ಮೂವರ ತಪಾಸಣೆ ನಡೆಸಿದ್ದಾರೆ.
ಪ್ರತಿಯೊಬ್ಬರ ಜೇಬಿನಲ್ಲಿಯೂ 116 ಗ್ರಾಂ ತೂಕದ 2 ಚಿನ್ನದ ಬಾರ್‌ಗಳು ಪತ್ತೆಯಾಗಿವೆ. ಮೂವರನ್ನು ವಶಕ್ಕೆ ಪಡೆದುಕೊಂಡ ಅಧಿಕಾರಿಗಳು ಅವರ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಮೂವರಿಂದ ಒಟ್ಟು 696 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಮೌಲ್ಯ ಸುಮಾರು 36.8 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರಿಂದ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಬೆಲ್ಟ್‌ನಲ್ಲಿ ಚಿನ್ನವನ್ನು ತಂದಿದ್ದ ಇಬ್ಬರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದರು. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ಸಂಚಾರ ರದ್ದಾಗಿದೆ. ಆದರೆ, ವಿಶೇಷ ವಿಮಾನದಲ್ಲಿ ಬರುವವರು ಸಹ ಚಿನ್ನವನ್ನು ತರುತ್ತಿದ್ದಾರೆ.












Click it and Unblock the Notifications