5 ಪ್ರಯಾಣಿಕರಿಗೆ ಕೋವಿಡ್ -19 ಸೋಂಕು; 51 ಜನರಿಗೆ ಕ್ವಾರಂಟೈನ್

ಚೆನ್ನೈ, ಮೇ 28 : ಚೆನ್ನೈ-ಸೇಲಂ ನಡುವೆ ಸಂಚಾರ ನಡೆಸಿದ್ದ ಐವರು ಪ್ರಯಾಣಿಕರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಲಾಕ್ ಡೌನ್ ಜಾರಿಯಲ್ಲಿದ್ದರೂ ಕೇಂದ್ರ ಸರ್ಕಾರ ಮೇ 25ರಿಂದ ದೇಶಿಯ ವಿಮಾನ ಸೇವೆಯನ್ನು ಆರಂಭಿಸಿದೆ.

ತಮಿಳುನಾಡಿನ ಚೆನ್ನೈನಿಂದ ಸೇಲಂಗೆ ಬುಧವಾರ ಸಂಚಾರ ನಡೆಸಿದ ಐವರು ಪ್ರಯಾಣಿಕರಿಗೆ ಸೋಂಕು ತಗುಲಿದೆ. ವಿಮಾನದಲ್ಲಿ ಪ್ರಯಾಣಿಸಿದ್ದ ಇತರ 51 ಜನರನ್ನು ಪತ್ತೆ ಮಾಡಲಾಗಿದ್ದು, ಕ್ವಾರಂಟೈನ್‌ನಲ್ಲಿಡಲಾಗಿದೆ.

ಸೋಮವಾರ ಚೆನ್ನೈ-ಕೊಯಮತ್ತೂರು ನಡುವೆ ಹಾರಾಟ ನಡೆಸಿದ್ದ ಇಂಡಿಗೋ ವಿಮಾನದಲ್ಲಿ ಸಂಚಾರ ನಡೆಸಿದ್ದ ಪ್ರಯಾಣಿಕನಿಗೆ ಸೋಂಕು ಕಾಣಿಸಿಕೊಂಡಿತ್ತು. ತಕ್ಷಣ ವಿಮಾನದ ಸಿಬ್ಬಂದಿಗಳನ್ನು 14 ದಿನಗಳ ಕ್ವಾರಂಟೈನ್‌ಗೆ ಕಳಿಸಲಾಗಿತ್ತು.

 5 Tested Positive For COVID 19 51 Passengers Sent For Quarantine

ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಲಾಕ್ ಡೌನ್ ಜಾರಿಯಲ್ಲಿದ್ದರೂ ಸೋಮವಾರ ದೇಶಿಯ ವಿಮಾನ ಹಾರಾಟ ಆರಂಭವಾಗಿತ್ತು.

ವಿಮಾನ ಸಂಚಾರ ಆರಂಭವಾದ ಬಳಿಕ 24 ವರ್ಷದ ಪ್ರಯಾಣಿಕನಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು. ಬೆಂಗಳೂರು-ಮಧುರೈ ನಡುವೆ ಬುಧವಾರ ಸಂಚಾರ ನಡೆಸಿದ ಪ್ರಯಾಣಿಕನಿಗೂ ಸೋಂಕು ತಗುಲಿದೆ.

ವಿಮಾನದಲ್ಲಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಹಲವು ಷರತ್ತುಗಳನ್ನು ಹಾಕಲಾಗಿದೆ. ಪ್ರಯಾಣಿಕರು ಆರೋಗ್ಯ ಸೇತು ಅಪ್ಲಿಕೇಶನ್ ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಂಡಿರಬೇಕು. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+