ತಮಿಳುನಾಡು; ಕೋವಿಡ್ ಸೋಂಕಿನಿಂದ 4 ದಿನದ ಮಗು ಸಾವು
ಚೆನ್ನೈ, ಆಗಸ್ಟ್ 06: ತಮಿಳುನಾಡಿನ ಮಧುರೈನಲ್ಲಿ 4 ದಿನದ ಮಗು ಕೊರೊನಾ ವೈರಸ್ ಸೋಂಕಿನಿಂದಾಗಿ ಮೃತಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,73,460.
ಮಧುರೈನ ರಾಜಾಜಿ ಆಸ್ಪತ್ರೆಯಲ್ಲಿ 4 ದಿನದ ಮಗು ಉಸಿರಾಟದ ಸಮಸ್ಯೆಯಿಂದಾಗಿ ಆಗಸ್ಟ್ 2ರಂದು ಮೃತಪಟ್ಟಿದೆ. ಮಗುವಿಗೆ ಸೋಂಕು ತಗುಲಿದ ಬಗ್ಗೆ ಬುಧವಾರ ಸಂಜೆ ಅಧಿಕೃತ ಘೋಷಣೆ ಮಾಡಲಾಗಿದೆ.
ಜುಲೈ 29ರಂದು ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಮಗುವಿನ ತಾಯಿಗೆ ಕೋವಿಡ್ ಸೋಂಕು ತಗುಲಿದ್ದರಿಂದ ನಾಲ್ಕು ದಿನಗಳ ಮುಂಚೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹುಟ್ಟಿದ ಮಗುವಿಗೂ ಕೋವಿಡ್ ಪರೀಕ್ಷೆ ಮಾಡಲಾಗಿತ್ತು.

ದಕ್ಷಿಣ ಆಫ್ರಿಕಾದಲ್ಲಿ 2 ದಿನದ ಮಗುವೊಂದು ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟಿದ್ದು. ಭಾರತದಲ್ಲಿ ಕೋವಿಡ್‌ಗೆ ಬಲಿಯಾದ ಅತಿ ಕಿರಿಯ ರೋಗಿ ಈ ಮಗುವಾಗಿದೆ.
ಜೈಪುರದಲ್ಲಿ 20 ದಿನದ ಮಗು, ಗುಜರಾತ್‌ನಲ್ಲಿ 42 ದಿನದ ಮಗು ಕೋವಿಡ್‌ನಿಂದಾಗಿ ಮೃತಪಟ್ಟಿದ್ದವು. ಚೀನಾದಲ್ಲಿ ಹುಟ್ಟಿದ 30 ಗಂಟೆಯಲ್ಲಿಯೇ ಮಗುವಿಗೆ ಕೋವಿಡ್ ಸೋಂಕು ತಗುಲಿತ್ತು. ಆದರೆ, ಅದು ಚೇತರಿಸಿಕೊಂಡಿತ್ತು.
ಕೊರೊನಾ ವೈರಸ್ ಸೋಂಕಿತರು ಹೆಚ್ಚು ಇರುವ ರಾಜ್ಯಗಳಲ್ಲಿ ತಮಿಳುನಾಡು ಸಹ ಸೇರಿದೆ. ದೇಶದಲ್ಲಿ 2ನೇ ಸ್ಥಾನದಲ್ಲಿರುವ ರಾಜ್ಯದಲ್ಲಿ 2,73,460 ಕೋವಿಡ್ ಸೋಂಕಿತರು ಇದ್ದಾರೆ. ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 54,184.












Click it and Unblock the Notifications