ಪಂಜಾಬ್ ಚುನಾವಣೆ: ಎಎಪಿ ಪ್ರಾಬಲ್ಯದ ಪ್ರದೇಶದಲ್ಲಿ ಮತದಾನದಲ್ಲಿ ಭಾರೀ ಕುಸಿತ
ಚಂಡೀಗಢ, ಫೆಬ್ರವರಿ 21: ಪಂಜಾಬ್ ವಿಧಾನಸಭೆ ಚುನಾವಣೆಗಾಗಿ ನಡೆದ ಮತದಾನದ ಕುರಿತಂತೆ ಭಾನುವಾರ ಸಂಜೆ 5 ಗಂಟೆಗೆ ಚುನಾವಣಾ ಆಯೋಗವು ಪ್ರಕಟಿಸಿದ ತಾತ್ಕಾಲಿಕ ಅಂಕಿಅಂಶಗಳಿಗಿಂತ ಈ ಬಾರಿ ಪಂಜಾಬ್‌ನಲ್ಲಿನ ಮತದಾನದ ಅಂಕಿಅಂಶಗಳು ಶೇಕಡಾ 4.3 ರಷ್ಟು ಅಧಿಕವಾಗಿದೆ. ಈ ಬಾರಿ ಆಮ್ ಆದ್ಮಿ ಪಕ್ಷವು ಯಾವ ಪ್ರದೇಶದಲ್ಲಿ ತನ್ನ ಪಕ್ಷ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ ಎಂದು ಹೇಳಿದೆಯೋ ಅಲ್ಲಿ ಮತದಾನ ಕಡಿಮೆ ಆಗಿದೆ.
ಭಾನುವಾರದ ಮತದಾನದ ಅಂತ್ಯಕ್ಕೆ ತಾತ್ಕಾಲಿಕ ಮತದಾನದ ಅಂಕಿ-ಅಂಶವು 65.32 ಶೇಕಡಾ ಆಗಿದೆ. ಇಂದು ಪ್ರಕಟಿಸಲಾದ ಪರಿಷ್ಕೃತ ಮತದಾನದ ಅಂಕಿ-ಅಂಶ ಶೇ.69.65 ಆಗಿದೆ. ಇದು 2007 ರ ನಂತರದ ಅತ್ಯಂತ ಕಡಿಮೆ ಅಂಕಿಅಂಶ ಮಾತ್ರವಲ್ಲ, ತಾತ್ಕಾಲಿಕ ಮತ್ತು ಅಂತಿಮ ಮತದಾನದ ಅಂಕಿಅಂಶಗಳಲ್ಲಿನ ಅಂತರವು ಅಧಿಕವಾಗಿದೆ.
ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ದೃಢವಾದ ಬೆಂಬಲವನ್ನು ಹೊಂದಿದೆ ಎಂದು ಹೇಳಿಕೊಂಡ ಪ್ರದೇಶಗಳಲ್ಲಿ ಮತದಾನದ ಪ್ರಮಾಣವು ವಿಶೇಷವಾಗಿ ಕಡಿಮೆಯಾಗಿದೆ ಎಂದು ಅಂಕಿಅಂಶಗಳು ಬಹಿರಂಗಪಡಿಸುತ್ತವೆ. ಎಎಪಿಯ ಹಾಲಿ ಶಾಸಕರನ್ನು ಹೊಂದಿರುವ ಕ್ಷೇತ್ರಗಳೆಲ್ಲವೂ ಮತದಾನದಲ್ಲಿ ಕುಸಿತವನ್ನು ತೋರಿಸಿದ್ದು, ಶೇಕಡಾ 2.3 ರಿಂದ ಶೇಕಡಾ 9 ಕ್ಕಿಂತ ಹೆಚ್ಚು ಕುಸಿತವನ್ನು ಕಂಡಿದೆ.

ಎಲ್ಲೆಲ್ಲಿ ಮತದಾನ ಪ್ರಮಾಣ ಇಳಿಕೆ?
ಬಲ್ಜಿಂದರ್ ಕೌರ್ ಹಾಲಿ ಶಾಸಕರಾಗಿರುವ ತಲ್ವಾಂಡಿ ಸಾಬೊದಲ್ಲಿ ಅಂಕಿಅಂಶಗಳು ಶೇಕಡಾ 83.70 ರಿಂದ ಶೇಕಡಾ 86 ಕ್ಕೆ ಇಳಿದಿದೆ. ಈ ಕ್ಷೇತ್ರದಲ್ಲಿ ಶೇಕಡಾ 2.3 ರಷ್ಟು ಕಡಿಮೆಯಾಗಿದೆ. ಕೊಟ್ಕಾಪುರದಲ್ಲಿ ಶೇ.4, ಹರ್ಪಾಲ್ ಸಿಂಗ್ ಚೀಮಾ ಸ್ಪರ್ಧಿಸಿರುವ ದಿರ್ಬಾದಲ್ಲಿ ಶೇ.4.4ರಷ್ಟು ಮತದಾನ ಪ್ರಮಾಣ ಇಳಿಕೆಯಾಗಿದೆ. ಸುನಮ್‌ನಲ್ಲಿ ಶೇಕಡ 5.4, ಬರ್ನಾಲಾ 6.6 ಪ್ರತಿಶತ, ಬುದ್ಲಾಡಾ 6.2 ಶೇಕಡಾ, ಮೆಹಲ್ ಕಲಾನ್ ಶೇಕಡಾ 9.4 ಮತ್ತು ಜಾಗರಾನ್‌ನಲ್ಲಿ ಇದು ಶೇಕಡಾ 9.8 ರಷ್ಟು ಕಡಿಮೆಯಾಗಿದೆ.
2002 ರಲ್ಲಿ ರಾಜ್ಯವು 65.14 ರಷ್ಟು ಮತದಾನವನ್ನು ದಾಖಲಿಸಿದರೆ, ಈ ಸಂಖ್ಯೆಯು ಅತೀ ಹೆಚ್ಚಿನ ಅಂಕಿ ಅಂಶವಾಗಿದೆ. 2007 ರಲ್ಲಿ 75.42 ಶೇಕಡಾ ಮತದಾನವಾಗಿದೆ. 2012 ರಲ್ಲಿ 78.3 ಶೇಕಡಾ ಮತ್ತು 2017 ರಲ್ಲಿ 77.36 ಶೇಕಡಾ ಮತದಾನವಾಗಿದೆ. ಅಮೃತಸರ ಪಶ್ಚಿಮದಲ್ಲಿ ಶೇಕಡ 55.40 ಕಡಿಮೆ ಮತದಾನವಾಗಿದೆ. ಮುಕ್ತಸರ ಜಿಲ್ಲೆಯ ಗಿಡ್ಡರ್‌ಬಾಹದಲ್ಲಿ ಅತಿ ಹೆಚ್ಚು ಅಂದರೆ 84.93 ಮತದಾನವಾಗಿದೆ.
ಕಳೆದ 20 ವರ್ಷಗಳಲ್ಲಿ ಎರಡನೇ ಬಾರಿಗೆ ಅತಿ ಕಡಿಮೆ ಮತದಾನವಾಗಿರುವುದು 2007 ರಲ್ಲಿ ಅಂದರೆ ಶೇ. 68.72 ಮತದಾನವಾಗಿತ್ತು. ಆದರೆ ಆ ವರ್ಷ ಅಕಾಲಿ-ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದಿತು. ಕಾಂಗ್ರೆಸ್ ಸರ್ಕಾರವನ್ನು ತಳ್ಳಿಹಾಕಿತು. 2017 ರಲ್ಲಿ, ಅಕಾಲಿ-ಬಿಜೆಪಿ ಸರ್ಕಾರದ 10 ವರ್ಷಗಳ ಆಡಳಿತವನ್ನು ಕಾಂಗ್ರೆಸ್ ಅಂತ್ಯ ಮಾಡಿದಾಗ, ಮತದಾನದ ಅಂಕಿ-ಅಂಶವು ಶೇಕಡಾ 77.36ರಷ್ಟು ಆಗಿತ್ತು. 2012 ಕ್ಕಿಂತ ಕಡಿಮೆ ಅಂಕಿ ಅಂಶ ಇದಾಗಿದೆ. ಈ ಸಂದರ್ಭದಲ್ಲಿ ಅಕಾಲಿ-ಬಿಜೆಪಿ ಎರಡನೇ ಬಾರಿಗೆ ಸರ್ಕಾರವನ್ನು ರಚನೆ ಮಾಡಿದೆ.
ಈ ವರ್ಷ, ಕಣದಲ್ಲಿರುವ ಎಲ್ಲಾ ಪಕ್ಷಗಳು, ಕಾಂಗ್ರೆಸ್ ಹಾಗೂ ಪ್ರಮುಖ ವಿಪಕ್ಷವಾದ ಎಎಪಿ ರಾಜ್ಯದಲ್ಲಿ ತಮ್ಮ ಪರವಾಗಿ ಅಲೆ ಇದೆ ಎಂದು ಹೇಳಿಕೊಂಡಿದೆ. ಅಂತಿಮ ಮತದಾನದ ಅಂಕಿಅಂಶಗಳಲ್ಲಿ ಭಾರಿ ಏರಿಕೆಯು ಈ ವರ್ಷ ಕಾಣಿಸಿಕೊಂಡಿದೆ. ಮತದಾನ ನಡೆದ ಇತರೆ ರಾಜ್ಯಗಳಲ್ಲಿ ಇದೇ ರೀತಿಯ ಏರಿಕೆಯನ್ನು ಡೇಟಾ ತೋರಿಸುತ್ತದೆ. ಗೋವಾದಲ್ಲಿ, ಅಂಕಿ ಅಂಶಗಳು ಸಂಜೆ 5 ಗಂಟೆಗೆ ಶೇಕಡಾ 75.29 ರಿಂದ ಕೊನೆಯದಾಗಿ ಶೇಕಡ 79.16 ಕ್ಕೆ ಜಿಗಿತ ಕಂಡಿದೆ. ಅಂದರೆ ಶೇಕಡ 4 ರಷ್ಟು ವ್ಯತ್ಯಾಸ ಕಂಡು ಬಂದಿದೆ. ಉತ್ತರಾಖಂಡದಲ್ಲಿ, ಅಂಕಿಅಂಶಗಳು 59.37 ರಿಂದ 64.29 ಕ್ಕೆ ಏರಿದೆ. (ಒನ್‌ಇಂಡಿಯಾ ಸುದ್ದಿ)
-
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ












Click it and Unblock the Notifications