ಪಂಜಾಬ್ ಚು.ಆಯೋಗದ ನಿರ್ಲಕ್ಷ್ಯ: ಬ್ಯಾನರ್‌ನಲ್ಲಿ ಅತ್ಯಾಚಾರ ಅಪರಾಧಿಯ ಚಿತ್ರ
ಚಂಡೀಗಡ, ಜುಲೈ 21: ಪಂಜಾಬ್ ರಾಜ್ಯದ ಚುನಾವಣಾ ಆಯೋಗ ಯಾವ ಹಂತಕ್ಕೆ ನಿರ್ಲಕ್ಷ್ಯ ತೋರಿದೆ ಎಂದರೆ, ಅತ್ಯಾಚಾರ ಪ್ರಕರಣದ ಅಪರಾಧಿ ಒಬ್ಬನ ಚಿತ್ರವನ್ನು ತನ್ನ ಬ್ಯಾನರ್‌ಗಳಲ್ಲಿ ಬಳಸಿಕೊಂಡಿದೆ.
ಪಂಜಾಬ್ ಚುನಾವಣಾ ಆಯೋಗವು ಹೊರಡಿಸಿರುವ ಮತದಾನದ ಅರಿವು ಪ್ರಕಟಣೆಯಲ್ಲಿ ಸಾಮಾನ್ಯ ನಾಗರೀಕರ ಚಿತ್ರಗಳ ಜೊತೆಗೆ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಆಗಿರುವ ಅಪರಾಧಿಯನ್ನು ಚಿತ್ರವನ್ನು ಪ್ರಕಟಿಸಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದೇಶದಾದ್ಯಂತ ಆಕ್ರೋಶ ಹುಟ್ಟಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿ ಮುಖೇಶ್ ಸಿಂಗ್‌ನ ಚಿತ್ರವನ್ನು ತನ್ನ ಬ್ಯಾನರ್‌ನಲ್ಲಿ ಬಳಸಿಕೊಂಡಿದೆ.

ಅಪರಾಧಿ ಮುಖೇಶ್ ಸಿಂಗ್ ಪೋಟೋವನ್ನ ಚುನಾವಣಾ ಜಾಗೃತಿಯ ಬ್ಯಾನರ್‌ನಲ್ಲಿ ಹಾಕಲಾಗಿದೆ. ಈತ 2012ರ ನಿರ್ಭಯಾ ಕೇಸ್ನಲ್ಲಿ ಮರಣದಂಡನೆಗೆ ಒಳಗಾಗಿದ್ದು, ಈತನ ಫೋಟೋವನ್ನೇ ಮೊದಲು ಹಾಕಲಾಗಿದೆ. ಬಳಿಕ ಇಬ್ಬರು ಸಿನಿಮಾ ತಾರೆಗಳ ಫೋಟೋ ಇದೆ.
ಪ್ರಸ್ತುತ ಬ್ಯಾನರ್ ಅನ್ನು ತೆರವುಗೊಳಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಆಡಳಿತವು ಸೂಚಿಸಲಾಗಿದೆ.












Click it and Unblock the Notifications