ಚಂಡೀಗಢದಲ್ಲಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಪ್ರಯೋಗ ಆರಂಭ
ನವದೆಹಲಿ, ಸೆಪ್ಟೆಂಬರ್ 26: ಆಕ್ಸ್‌ಫರ್ಡ್ ಕೊರೊನಾ ಲಸಿಕೆಯ ಎರಡನೇ ಹಂತದ ಪ್ರಯೋಗ ಚಂಡೀಗಢದ ಪೋಸ್ಟ್ ಗ್ರಾಜುವೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಆಂಡ್ ರಿಸರ್ಚ್ ನಲ್ಲಿ ಆರಂಭಗೊಂಡಿದೆ.
ಲಸಿಕೆಯ ಮೊದಲ ಡೋಸ್ ಅನ್ನು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ತಯಾರಿಸಲಾಗುತ್ತಿದೆ.ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷನಿಗೆ 0.5 ಎಂಎಲ್‌ನಷ್ಟು ಡೋಸೇಜ್ ನೀಡಲಾಗಿದೆ. ಇಬ್ಬರು ಮಹಿಳೆಯರು 57 ಮತ್ತು 26 ವರ್ಷದವರಾಗಿದ್ದಾರೆ, ಪುರುಷ 33 ವರ್ಷದವರಿದ್ದಾರೆ.
ಮುಂಬೈನಲ್ಲಿ ಸರ್ಕಾರ ನಡೆಸುತ್ತಿರುವ ಕೆಇಎಂ ಆಸ್ಪತ್ರೆಯಲ್ಲಿ ಕೂಡ ಮೊದಲ ಡೋಸ್ ನೀಡಲಾಗಿದೆ. ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಕೊರೊನಾ ಲಸಿಕೆಯ ಪ್ರಯೋಗ ಮಾನವನ ಮೇಲೆಪ್ರಯೋಗ ನಡೆಯುತ್ತಿದೆ ಎಂದು ವೈದ್ಯ ಹೇಮಂತ್ ದೇಶಮುಖ್ ತಿಳಿಸಿದ್ದಾರೆ.

ಪಿಜಿಎಂಆರ್ ಚಂಡೀಗಢದಲ್ಲಿ ಲಸಿಕೆಯ ಎರಡನೇ ಹಂತದ ಪ್ರಯೋಗ ನಡೆದಿದ್ದು, 26 ದಿನಗಳ ಕಾಲ ರೋಗಿಗಳ ಮೇಲೆ ನಿಗಾ ಇಡಲಾಗುತ್ತದೆ. ಬಳಿಕ ಎರಡನೇ ಡೋಸ್ ನೀಡಲಾಗುತ್ತದೆ. ಅವರ ರಕ್ತದ ಮಾದರಿಯನ್ನು ತೆಗೆದುಕೊಳ್ಳಲಾಗುತ್ತಿದ್ದು, 6 ತಿಂಗಳ ಕಾಲ ಅವರ ಮೇಲೆ ನಿಗಾ ಇಡಲಾಗುತ್ತದೆ.
ಆಕ್ಸ್ ಆಸ್ಟ್ರಾಜೆನೆಕಾ ಕಣ್ಣುಗುಡ್ಡೆಗಳಿಗೆ ಹಾನಿಯುಂಟು ಮಾಡಿತ್ತು, ಭಾರತ ಮತ್ತು ಯುಕೆಯನ್ನು ಪ್ರಯೋಗವನ್ನು ತಡೆಹಿಡಿಯಲಾಗಿದೆ.












Click it and Unblock the Notifications