ಚಂಡೀಗಢದಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆ
ಚಂಡೀಗಢ, ಮಾರ್ಚ್ 19: ಚಂಡೀಗಢದಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ. ಲಂಡನ್‌ನಿಂದ ವಾಪಸಾಗಿರುವ 23 ವರ್ಷದ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ.
23 ವರ್ಷದ ಮಹಿಳೆಯನ್ನು ಭಾನುವಾರ ತಪಾಸಣೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಕೊರೊನಾ ವೈರಸ್ ಇದೆ ಎಂದು ವರದಿ ತಿಳಿಸಿದೆ.
ಅವರನ್ನು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ದಿಗ್ಬಂಧನದಲ್ಲಿಡಲಾಗಿದೆ. ಇದರಿಂದ ಇಡೀ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 170ಕ್ಕೆ ಏರಿಕೆಯಾಗಿದೆ. 3 ಮಂದಿ ಮೃತಪಟ್ಟಿದ್ದು, 14 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಚೀನಾದ ವುಹಾನ್ ಸಿಟಿಯಲ್ಲಿ ಹುಟ್ಟಿಕೊಂಡ ಈ ಕೊರೊನಾ ಸೋಂಕು ಒಟ್ಟು 8 ಸಾವಿರ ಮಂದಿಯನ್ನು ಬಲಿ ಪಡೆದಿದೆ. ನೂರು ದೇಶಗಳನ್ನು ಆವರಿಸಿದೆ.
ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಯಾರೂ ಕೂಡ ಮನೆಯಿಂದ ಅನವಶ್ಯಕವಾಗಿ ಓಡಾಡದಂತೆ ಎಚ್ಚರಿಕೆ ನೀಡಲಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಇಂದು ರಾತ್ರಿ 8 ಗಂಟೆಗೆ ಭಾಷಣ ಮಾಡಲಿದ್ದಾರೆ.
ಕೊರೊನಾ ಆರಂಭಗೊಂಡಿದ್ದ ವುಹಾನ್ ನಗರದಲ್ಲಿ ಬುಧವಾರ ಒಂದೂ ಹೊಸ ಪ್ರಕರಣ ಪತ್ತೆಯಾಗದಿರುವುದು ಆತಂಕವನ್ನು ಸ್ವಲ್ಪ ಕಡಿಮೆ ಮಾಡಿದೆ.












Click it and Unblock the Notifications