ರೋಹ್ಟಕ್:ಕಾಲೇಜಿನ ಜಿಮ್ನಾಸ್ಟಿಕ್ ಹಾಲ್‌ನಲ್ಲಿ ಗುಂಡಿನ ದಾಳಿ, ಮೂವರು ಸಾವು

ಚಂಡೀಗಢ,ಫೆಬ್ರವರಿ 13: ಹರ್ಯಾಣದ ಕಾಲೇಜೊಂದರ ಜಿಮ್ನಾಸ್ಟಿಕ್ ಹಾಲ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ.

ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ತನಿಖೆಗೆ ತಂಡಗಳನ್ನು ರಚಿಸಿದ್ದೇವೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

firing

ಯಾರು ಗುಂಡು ಹಾರಿಸಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಗಾಯಾಳುಗಳಲ್ಲಿ ಮೂರು ವರ್ಷದ ಮಗು ಸಹ ಸೇರಿದೆ ಎಂದು ರೋಹ್ಟಕ್ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಶರ್ಮಾ ಹೇಳಿದ್ದಾರೆ.

ಘಟನೆಯಲ್ಲಿ ಮೂರು ವರ್ಷದ ಮಗುವಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ, ಯಾವ ದ್ವೇಷಕ್ಕಾಗಿ ಗುಂಡಿನ ದಾಳಿ ನಡೆದಿದೆ, ದಾಳಿ ನಡೆಸಿದ್ದು ವಿದ್ಯಾರ್ಥಿಗಳೇ ಅಥವಾ ಬೇರೆಯವರೇ ಮೃತಪಟ್ಟಿದ್ದು, ಪ್ರಾಧ್ಯಾಪಕರೇ ಅಥವಾ ವಿದ್ಯಾರ್ಥಿಗಳೇ ಎನ್ನುವುದು ತಿಳಿದುಬರಬೇಕಿದೆ.,ಯಾವ ಕಾರಣಕ್ಕೆ ಗುಂಡಿನ ದಾಳಿ ನಡೆದಿದೆ ಎಂಬುದು ಕೂಡ ಸ್ಪಷ್ಟವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+