ಚಲಿಸುವ ಕಾರಿನಲ್ಲೇ ದುಷ್ಟರ ಕ್ರೌರ್ಯ: ಅಪ್ರಾಪ್ತೆಯ ಮೇಲೆ ಅತ್ಯಾಚಾರ!

ಚಂಡೀಘರ್, ಜನವರಿ.25: ದೇಶವನ್ನೇ ಬೆಚ್ಚಿ ಬೀಳಿಸಿದ ನವದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲುಶಿಕ್ಷೆಗೆ ದಿನಗಣನೆ ಶುರುವಾಗಿದೆ. ಚಲಿಸುವ ಬಸ್ ನಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದವರಿಗೆ ಬಂದ ಸ್ಥಿತಿ ಎಂಥದ್ದು ಎಂದ ನಿದರ್ಶನ ಕಣ್ಣು ಎದುರಿಗಿದೆ.

ನಿರ್ಭಯಾ ಪ್ರಕರಣದ ನೀಚರಿಗೆ ದೇಶವೇ ಹಿಡಿಶಾಪ ಹಾಕಿದೆ. ಹೀಗಿದ್ದರೂ ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಪ್ರಮಾಣ ಕಡಿಮೆಯಾಗುತ್ತಲೇ ಇಲ್ಲ. ಮುಗ್ಧ ಯುವತಿ ಮೇಲೆ ಇಬ್ಬರು ದುಷ್ಟರು ಚಲಿಸುವ ಕಾರಿನಲ್ಲೇ ಅತ್ಯಾಚಾರ ನಡೆಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ 15 ವರ್ಷದ ಯುವತಿ ಮೇಲೆ ಇಬ್ಬರು ದುಷ್ಟರು ಅತ್ಯಾಚಾರ ನಡೆಸಿರುವ ಬಗ್ಗೆ ವರದಿಯಾಗಿದೆ. ಪ್ರಜ್ಞೆ ಕಳೆದುಕೊಂಡ ಯುವತಿಗೆ ಚಂಢೀಘರ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪಾರ್ಕ್ ಬದಿಯಲ್ಲಿ ಯುವತಿಯನ್ನು ಎಸೆದ ದುಷ್ಟರು

ಪಾರ್ಕ್ ಬದಿಯಲ್ಲಿ ಯುವತಿಯನ್ನು ಎಸೆದ ದುಷ್ಟರು

ಚಲಿಸುವ ಕಾರಿನಲ್ಲಿ 15 ವರ್ಷದ ಯುವತಿ ಮೇಲೆ ಇಬ್ಬರು ಅತ್ಯಾಚಾರ ನಡೆಸಿದ್ದಾರೆ. ನೀಚಕೃತ್ಯದ ಬಳಿಕ ಪ್ರಜ್ಞೆ ಕಳೆದುಕೊಂಡ ಯುವತಿಯನ್ನು ಬೀದಿ ಬದಿಯ ಪಾರ್ಕ್ ನಲ್ಲಿ ಎಸೆದು ಹೋಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನೀಚಕೃತ್ಯ ಎಸಗಿದ ಇಬ್ಬರು ಆರೋಪಿಗಳ ಬಂಧನ

ನೀಚಕೃತ್ಯ ಎಸಗಿದ ಇಬ್ಬರು ಆರೋಪಿಗಳ ಬಂಧನ

ಯುವತಿ ಮೇಲೆ ಅತ್ಯಾಚಾರ ನಡೆಸಿದ ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿರ್ಜೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ. ಇನ್ನು, ಆರೋಪಿಗಳು ಬಳಸಿದ್ದ ಕಾರ್ ನ್ನು ಕೂಡಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಗೊತ್ತಿರುವ ವ್ಯಕ್ತಿಗಳಿಂದಲೇ ಯುವತಿ ಮೇಲೆ ಅತ್ಯಾಚಾರ

ಗೊತ್ತಿರುವ ವ್ಯಕ್ತಿಗಳಿಂದಲೇ ಯುವತಿ ಮೇಲೆ ಅತ್ಯಾಚಾರ

ಕಳೆದ ಜನವರಿ.24ರಂದು ಟ್ಯೂಶನ್ ಗೆ ತೆರಳಿದ್ದ ಮಗಳು ಮನೆಗೆ ವಾಪಸ್ ಬರದೆ ಇದ್ದಾಗ ಪೋಷಕರು ಗಾಬರಿಗೊಂಡು ಪೊಲೀಸರಿಗೆ ದೂರು ನೀಡಿದ್ದರು. ಪ್ರಾಥಮಿಕ ತನಿಖೆ ವೇಳೆ ಯುವತಿಗೆ ಪರಿಚಯವಿದ್ದ ಯುವಕರಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹುಟ್ಟುಹಬ್ಬ ಆಚರಿಸಲು ಯುವತಿಯನ್ನು ಕರೆದುಕೊಂಡ ಹೋದ ನಾಲ್ವರು ಕಾರಿನಲ್ಲೇ ಮದ್ಯಪಾನ ಮಾಡುವಂತೆ ಬಲವಂತ ಮಾಡಿದ್ದಾರೆ. ನಂತರ ಇಬ್ಬರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಅಸ್ವಸ್ಥಗೊಂಡ ಯುವತಿಗೆ ಐಸಿಯುನಲ್ಲಿ ಚಿಕಿತ್ಸೆ

ಅಸ್ವಸ್ಥಗೊಂಡ ಯುವತಿಗೆ ಐಸಿಯುನಲ್ಲಿ ಚಿಕಿತ್ಸೆ

ಚಂಡೀಘರ್ ನ ಖಾಸಗಿ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಪ್ರಜ್ಞೆ ಕಳೆದುಕೊಂಡಿರುವ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯುವತಿಯ ಹೇಳಿಕೆಯನ್ನು ಆಧರಿಸಿ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+