ಹನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಮೊದಲ ಬಾರಿ ಗದ್ದುಗೆ ಏರಿದ ತೆನೆ ಹೊತ್ತ ಮಹಿಳೆ

ಚಾಮರಾಜನಗರ, ಆಗಸ್ಟ್‌, 29: ಹನೂರು ಪಟ್ಟಣ ಪಂಚಾಯಿತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಂದನೇ ವಾರ್ಡಿನ ಮಮ್ತಾಜ್ ಭಾನು ಅವರು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಇವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಎಂದು ಘೋಷಣೆ ಮಾಡಲಾಯಿತು.

ಉಪಾಧ್ಯಕ್ಷ ಸ್ಥಾನಕ್ಕೆ ಜನತಾ ದಳದ ಎಂಟನೇ ವಾರ್ಡ್‌ನ ಸದಸ್ಯ ಆನಂದ್ ಕುಮಾರ್ ಹಾಗೂ ಎರಡನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಸುದೇಶ್ ಅವರು ನಾಮಪತ್ರ ಸಲ್ಲಿಸಿದ್ದರು. ಆನಂದ್ ಅವರಿಗೆ ಶಾಸಕ ಎಂ.ಆರ್.ಮಂಜುನಾಥ್, ಬಿಜೆಪಿ ಸದಸ್ಯೆ ರೂಪ, ಜೆಡಿಎಸ್ ಪಕ್ಷದ 6 ಸದಸ್ಯರು ಸೇರಿದಂತೆ 8 ಎಂಟು ಮತಗಳು ಸುದೇಶ್ ಅವರಿಗೆ ಕಾಂಗ್ರೆಸ್ ಪಕ್ಷದ 5 ಮತಗಳು ಬಿದ್ದಿದ್ದು, ಮೂರು ಮತಗಳ ಅಂತರದಿಂದ ಪರಾಭವಗೊಂಡರು‌.

Mumtaz Banu elected as president of Hanur Pattana Panchayat

ಅಂತಿಮವಾಗಿ ಅಧ್ಯಕ್ಷರಾಗಿ ಮುಮ್ತಾಜ್ ಬಾನು, ಉಪಾಧ್ಯಕ್ಷರಾಗಿ ಆನಂದ್ ಕುಮಾರ್ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ವೈ.ಕೆ.ಗುರುಪ್ರಸಾದ್ ಘೋಷಣೆ ಮಾಡಿದರು. ಹನೂರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ 18 ವರ್ಷಗಳ ಬಳಿಕ ಪಟ್ಟಣ ಪಂಚಾಯಿತಿಯಲ್ಲಿ ಜಾ.ದಳ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಮೊದಲ ಎರಡು ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರುಗಳೇ ಬಹುಮತ ಪಡೆದುಕೊಂಡಿದ್ದರಿಂದ ಅಧಿಕಾರ ಪಡೆದುಕೊಂಡಿತ್ತು. ಮೂರನೇ ಅವಧಿಗೆ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಗಳಿಗೆ ಸ್ಪಷ್ಟ ಬಹುಮತ ಬಾರದೆ ಇದ್ದಿದ್ದರಿಂದ ಮೂರನೇ ಚುನಾವಣೆಯ ಮೊದಲ ಅವಧಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಅಧ್ಯಕ್ಷರಾಗಿ ಬಿಜೆಪಿ ಸದಸ್ಯೆ ಚಂದ್ರಮ್ಮ, ಉಪಾಧ್ಯಕ್ಷರಾಗಿ ಹರೀಶ್ ಕುಮಾರ್ ಆಯ್ಕೆಯಾಗಿದ್ದರು.

ಎರಡನೇ ಅವಧಿಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸದಸ್ಯರುಗಳು 7 ಶಾಸಕ ಎಂ.ಆರ್ ಮಂಜುನಾಥ್ ಸೇರಿದಂತೆ 8 ಸದಸ್ಯರು ಇರುವುದರಿಂದ ಮೊಟ್ಟ ಮೊದಲ ಬಾರಿಗೆ ಪಟ್ಟಣ ಪಂಚಾಯಿತಿ ಅಧಿಕಾರವನ್ನು ಜಾ.ದಳ ಪ್ರಪ್ರಥಮ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಮೊಟ್ಟ ಮೊದಲ ಬಾರಿಗೆ ಹನೂರು ಪಟ್ಟಣದ ಇತಿಹಾಸದಲ್ಲಿಯೇ ಮಂಡಲ ಪಂಚಾಯಿತಿ, ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಲ್ಲಿ ಜಾ.ದಳ ಅಧಿಕಾರ ಪಡೆದಿರಲಿಲ್ಲ. ಮೊದಲ ಬಾರಿಗೆ ಜಾ.ದಳದ ಸದಸ್ಯರು ಪಟ್ಟಣ ಪಂಚಾಯಿತಿ ಚುಕ್ಕಾಣಿ ಅಲಂಕರಿಸಿದ ಹಿನ್ನೆಲೆ ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗ ಕಾರ್ಯಕರ್ತರು, ಮುಖಂಡರುಗಳು ಪಟಾಕಿ ಸಿಡಿಸಿ ಸಂಭ್ರಮಿಸಿ ಸಿಹಿ ವಿತರಣೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+