ಮೊದಲ ಮತ ಹಾಕಿದ ಅವಳಿಗಳು: ಯುವ ಜನತೆಗೆ ಮತದಾನ ಮಾಡುವಂತೆ ಕರೆ
ಚಾಮರಾಜನಗರ, ಮೇ 10: ತರಗತಿಗೆ ಬಂಕ್ ಮಾಡಿ ಸಿನಿಮಾಗೆ ಹೋದಂತೆ ಮತದಾನ ಕೂಡ ಮಾಡಿ ಎಂದು ಚಾಮರಾಜನಗರದಲ್ಲಿ ಮೊದಲ ಮತದಾನ ಮಾಡಿದ ಅವಳಿಗಳು ತಮ್ಮ ಸ್ನೇಹಿತರಿಗೆ ಹಾಗೂ ಯುವ ಜನತೆಗೆ ಮತದಾನ ಮಾಡಿ ಎಂದು ಕರೆ ನೀಡಿದ್ದಾರೆ.
ತುಮಕೂರು ನಗರದಿಂದ ಮೊದಲ ಬಾರಿ ಮತದಾನ ಮಾಡಲು ಚಾಮರಾಜನಗರಕ್ಕೆ ಆಗಮಿಸಿದ್ದ ಶಿವಾನಿ ಹಾಗೂ ಶರಣ್ ಎನ್ನುವ ಅವಳಿಗಳು ಮತ ಚಲಾಯಿಸಿ ಮಾಧ್ಯಮದವರೊಂದಿಗೆ ಖುಷಿ ಹಂಚಿಕೊಂಡರು.
ಈ ವೇಳೆ ಮಾತನಾಡಿದ ಅವಳಿಗಳು, ಕಾಲೇಜಿನಲ್ಲಿ ಕ್ಲಾಸ್ ಬಂಕ್ ಮಾಡಿ ಸಿನಿಮಾಗೆ ಹೋಗುವ ಜೋಶ್ ರೀತಿಯಲ್ಲೇ ಓಟ್ ಕೂಡ ಮಾಡಬೇಕು. ಯುವ ಜನತೆ ಯಾವಗಾಲೂ ಮತದಾನ ಮಿಸ್ ಮಾಡಬಾರದು. ನಿಮಗೆ ಇಷ್ಟಬಂದ ನಾಯಕರನ್ನು ಆಯ್ಕೆ ಮಾಡಲು ಮತದಾನ ಒಂದೇ ಪರಿಹಾರ, ಯುವರ್ ಓಟ್-ಯುವರ್ ಚಾಯ್ಸ್ ರೀತಿಯಲ್ಲಿ ಎಲ್ಲರೂ ತಪ್ಪದೇ ಮಾತದಾನ ಮಾಡಬೇಕು ಎಂದು ಅವಳಿಗಳಾದ ಶಿವಾನಿ ಮತ್ತು ಶರಣ್ ಮನವಿ ಮಾಡಿದರು.

ವನವಾಸಿ ಮತದಾರರನ್ನು ಸೆಳೆಯುತ್ತಿದೆ ಸಾಂಪ್ರದಾಯಿಕ ಮತಗಟ್ಟೆ
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿಯಲ್ಲಿ ಎಥ್ನಿಕ್ ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, ಸೋಲಿಗರು ಸಂಭ್ರಮದಿಂದ ಬಂದು ಮತ ಚಲಾವಣೆ ಮಾಡುತ್ತಿದ್ದಾರೆ.
ಮತಗಟ್ಟೆಯತ್ತ ವನವಾಸಿಗಳನ್ನು ಸೆಳೆಯುವ ಉದ್ದೇಶದಿಂದ ಸ್ವಾಗತ ಕಮಾನು, ಬಣ್ಣಬಣ್ಣದ ಬಾವುಟಗಳು, ಜನಪದ ಚಿತ್ರಗಳನ್ನು ಮತಗಟ್ಟೆಯಲ್ಲಿ ರಚಿಸಲಾಗಿದೆ. ಮತಗಟ್ಟೆಗೆ ಹೊಸ ಲುಕ್ ಕೊಟ್ಟಿದ್ದು ಸೋಲಿಗರು ಸಂಭ್ರಮದಿಂದ ಮತ ಚಲಾವಣೆ ಮಾಡುತ್ತಿದ್ದಾರೆ.

ಹಿರಿಯರು, ವಿಶೇಷ ಚೇತನರಿಗಾಗಿ ವೀಲ್ ಚೇರ್ ವ್ಯವಸ್ಥೆ ಕೂಡ ಮಾಡಿದ್ದು ಸೋಲಿಗರು ಉತ್ಸಾಹದಿಂದ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಉಳಿದಂತೆ, ಚಾಮರಾಜನಗರ ಜಿಲ್ಲಾಧ್ಯಂತ ಮತದಾನ ಬಿರುಸಿನಿಂದ ನಡೆಯುತ್ತಿದ್ದು ಮೇ 10 ಬೆಳಗ್ಗೆ 11 ಗಂಟೆ ಸುಮಾರಿಗೆ 5% ಮತದಾನ ನಡೆದಿರುವುದಾಗಿ ತಿಳಿದುಬಂದಿದೆ.












Click it and Unblock the Notifications