ಚಾಮರಾಜನಗರದಲ್ಲಿ ವೀಲ್ ಚೇರ್‌ನಲ್ಲಿ ಬಂದು ಮತ ಚಲಾಯಿಸಿದ 74 ವರ್ಷದ ವಿಶೇಷಚೇತನ ವ್ಯಕ್ತಿ
ಚಾಮರಾಜನಗರ, ಮೇ, 10: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಈಗಾಗಲೇ ಆರಂಭವಾಗಿದ್ದು, ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಬಿರುಸಿನಿಂದ ಮತದಾನ ನಡೆಯುತ್ತಿದೆ. ವೃದ್ಧರು, ಯುವ ಮತದಾರರು ಮತದಾನ ಮಾಡಲು ನವೋಲ್ಲಾಸದಿಂದ ದಾಂಗುಡಿ ಇಡುತ್ತಿದ್ದಾರೆ. ಚಾಮರಾಜನಗರದ 74 ವರ್ಷದ ಮಧುಸೂಧನ್ ಎನ್ನುವ ಹೆಸರಿನ ವೃದ್ಧರೊಬ್ಬರು ನಡೆಯಲಾಗದೇ ವೀಲ್ ಚೇರ್‌ನಲ್ಲಿ ಮತದಾನ ಮಾಡಿ ಗಮನ ಸೆಳೆದಿದ್ದಾರೆ.
ಚಾಮರಾಜನಗರದ ಹರ್ಷಿತಾ ಎಂಬ ಹೊಸ ವೋಟರ್ ಬೆಳಗ್ಗೆ 7 ಗಂಟೆಗೆ ಬಂದು ಮತದಾನ ಮಾಡುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಆದರೆ ಜಿಲ್ಲೆಯ ಸಂತೇಮರಹಳ್ಳಿ ವೃತ್ತ ಸಮೀಪದ ಮತಗಟ್ಟೆಯಲ್ಲಿ ಇವಿಎಂ ಕೈಕೊಟ್ಟಿದ್ದು, ಮತದಾರರು ಅಧಿಕಾರಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ.

ಮತ್ತೊಂದೆಡೆ ಉಪ್ಪಾರ ಬೀದಿಯ ಮತಗಟ್ಟೆ 69ರಲ್ಲಿ ಇವಿಎಂನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಇದರಿಂದ ಮತದಾನ ಕೆಲ ಕಾಲ ಸ್ಥಗಿತವಾಗಿದೆ. ಬಳಿಕ ಅಧಿಕಾರಿಗಳಿಂದ ಸರಿಪಡಿಸುವ ಕಾರ್ಯ ಪೂರ್ಣವಾಗಿದೆ. ಮತದಾನ ಅರ್ಧ ತಾಸು ತಡವಾದ್ದರಿಂದ ಮತ ಹಾಕಲು ಬಂದವರು ಅರ್ದ ಗಂಟೆ ಕಾದು ಅಸಮಾಧಾನ ಹೊರಹಾಕಿದ್ದಾರೆ. ಜಿಲ್ಲೆಯ ಉಳಿದೆಡೆ ಬಿರುಸಿನ ಮತದಾನ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications