ಚಾಮರಾಜನಗರ: ಏಕಾಏಕಿ ಮೂವ್ ಆದ ಕಾರು, ಪಾರ್ಕಿಂಗ್‌ನಲ್ಲಿ ಆಟವಾಡುತ್ತಿದ್ದ 7 ವರ್ಷದ ಬಾಲಕಿ ಸಾವು
ಚಾಮರಾಜನಗರ, ಫೆಬ್ರವರಿ, 25: ಕಾರು ಚಾಲಕಿ ನಿರ್ಲಕ್ಷ್ಯತನದಿಂದ ಆಟ ಆಡುತ್ತಿದ್ದ 7 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಮಲೆಮಾದೇಶ್ವರ ಬೆಟ್ಟದಲ್ಲಿ ನಡೆದಿದೆ.
ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಉಳ್ಳಾಂಗ ಕೊಟ್ಟಾಯ ಗ್ರಾಮದ ಸುಶ್ಮಿತಾ (7) ಮೃತಪಟ್ಟ ಬಾಲಕಿ. ತಾತಾ- ಅಜ್ಜಿ ಜೊತೆ ಬಂದಿದ್ದ ಬಾಲಕಿಯು ಪಾಲಾರ್ ರಸ್ತೆಯ ಪಾರ್ಕಿಂಗ್‌ನಲ್ಲಿ ಆಟ ಆಡುವಾವ ಈ ಅವಘಡ ನಡೆದಿದೆ.

ಕಾರ್ ಪಾರ್ಕಿಂಗ್‌ನಲ್ಲಿ ಕಾರು ನಿಲ್ಲಿಸಿಕೊಂಡಿದ್ದ ಡೈಸಿ ಎಂಬ ಮಹಿಳೆ ಏಕಾಏಕಿ ಕಾರು ಚಾಲನೆ ಮಾಡಿದ್ದರಿಂದ, ಬಾಲಕಿಯ ಎದೆಯ ಮೇಲೆ ಕಾರು ಹರಿದಿದೆ. ನಂತರ ಮುಂದೆ ನಿಂತಿದ್ದ ಶಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಹಾಗೂ ಹಿಂಭಾಗ ನಜ್ಜು ಗುಜ್ಜಾಗಿದೆ. ಮಾಹಿತಿ ತಿಳಿದ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ರಾಜಹಂಸ ಬಸ್ ಡಿಕ್ಕಿಯಾಗಿ ಟ್ರಾಕ್ಟರ್ ಪಲ್ಟಿ: ಕೆಎಸ್ಆರ್‌ಟಿಸಿ ರಾಜಹಂಸ ಬಸ್ ಡಿಕ್ಕಿಯಾಗಿ ಟ್ರಾಕ್ಟರ್ ಪಲ್ಟಿಯಾದ ಘಟನೆ ಫೆಬ್ರವರಿ 02ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿತ್ತು.
ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಬಳಿ ನಡೆದಿದೆ. ಚಲಿಸುತ್ತಿದ್ದ ಟ್ರಾಕ್ಟರ್‌ಗೆ ರಾಜಹಂಸ ಬಸ್ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ 10 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗೊಂಡಿದ್ದು, 3 ಮಂದಿ ಸ್ಥಿತಿ ಗಂಭೀರವಾಗಿತ್ತು.
ಬೆಂಗಳೂರುನಿಂದ ಕಲಬುರಗಿಗೆ ಮದುವೆ ಟ್ರಿಪ್ ಹೋಗಿದ್ದಾಗ ಅಪಘಾತವಾಗಿತ್ತು. ರಾಜಹಂಸ ಬಸ್ನಲ್ಲಿದ್ದವರು ಮದುವೆ ಮುಗಿಸಿ ವಾಪಾಸ್ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿತ್ತು. ಇಟ್ಟಿಗೆ ತುಂಬಿಕೊಂಡು ಹೋಗುತ್ತಿದ್ದ ಟ್ರಾಕ್ಟರ್‌ಗೆ ರಾಜಹಂಸ ಬಸ್ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದ್ದು, ಟ್ರಾಕ್ಟರ್ ಪಲ್ಟಿಯಾಗಿತ್ತು.
ಬಸ್ಸಿನಲ್ಲಿದ್ದ ಎಲ್ಲರೂ ಕೂಡಾ ಒಂದೇ ಕುಟುಂಬದವರಾಗಿದ್ದು, ಬಸ್ ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯಿಂದ ಅಪಘಾತ ನಡೆದಿದೆ ಎಂದು ಆರೋಪಿಸಿದ್ದರು. ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಚಳ್ಳಕೆರೆ ಮತ್ತು ಚಿತ್ರದುರ್ಗ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಪಘಾತ ಸಂಬಂಧ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನಾ ಸ್ಥಳಕ್ಕೆ ಪಿಎಸ್ಐ ಗಾದಿಲಿಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇಬ್ಬರು ಸ್ಥಳದಲ್ಲೇ ಸಾವು: ಚಲಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿಯಾದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಅಸುನೀಗಿದ ಘಟನೆ ಇತ್ತೀಚೆಗಷ್ಟೇ ನಡೆದಿತ್ತು. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಲಂಬಾಣಿಹಟ್ಟಿ ಸಮೀಪದ ಈ ಅವಘಡ ಸಂಭವಿಸಿತ್ತು. ಮೃತರನ್ನು ಚಳ್ಳಕೆರೆಯ ವೆಂಕಟೇಶ( 57 )ವರ್ಷ, ಚಿತ್ರಯ್ಯನಟ್ಟಿ ವೆಂಕಟೇಶ್ (55 )ವರ್ಷ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಟಿವಿ ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.












Click it and Unblock the Notifications