ಚಾಮರಾಜನಗರ: ಅಮ್ಮನ‌ ಅರಸುತ್ತಾ ನಾಡಿಗೆ ಬಂದ ಆನೆ ಮರಿಗೆ ಅರಣ್ಯ ಇಲಾಖೆ ಆರೈಕೆ

ಚಾಮರಾಜನಗರ, ಮಾರ್ಚ್‌, 08: ಅಂದಾಜು 3-4 ತಿಂಗಳ‌ ಆನೆ ಮರಿಯೊಂದು ಅಮ್ಮನನ್ನು ಅರಸುತ್ತಾ ನಾಡಿಗೆ ಬಂದ ಪ್ರಸಂಗ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ‌ ಆಸನೂರಿನ ಅರೆಪಾಳ್ಯದಲ್ಲಿ ನಡೆದಿದೆ.

ಕಳೆದ 5 ದಿನಗಳ ಹಿಂದೆ ತಮಿಳುನಾಡಿನ ಬಣ್ಣಾರಿ ಸಮೀಪ ಅನಾರೋಗ್ಯದಿಂದ ಹೆಣ್ಣಾನೆ ಅಸುನೀಗಿದ್ದು, ಆ ತಾಯಿ ಆನೆಯ ಮರಿ ಇದಾಗಿಬಹುದು ಎಂದು ಅರಣ್ಯ ಇಲಾಖೆ ಶಂಕಿಸಿದೆ. ತಾಯಿ ಅರಸುತ್ತಾ ಬಂದ ಆನೆಮರಿ ಅರೆಪಾಳ್ಯ ಗ್ರಾಮದಲ್ಲಿ ಅಡ್ಡಾಡಿದ್ದು, ಅಲ್ಲಿನ ಜನರು ಆನೆ ಕಂಡು ಚಿನ್ನಾಟ ಆಡಿದ್ದಾರೆ. ಬಳಿಕ ಮಾಹಿತಿ ಆಧರಿಸಿ ಆಸನೂರು ಅರಣ್ಯಾಧಿಕಾರಿಗಳು ಮರಿಯನ್ನು ರಕ್ಷಿಸಿ ತಮ್ಮ ಕಚೇರಿಗೆ ಕರೆತಂದು ವೈದ್ಯರಿಂದ ಆರೈಕೆ ಮಾಡಿಸಿದ್ದಾರೆ.

Forest department care to baby elephant came to Arepalya

ಇನ್ನು, ಆನೆಮರಿಯನ್ನು ಬೇರೆ ಆನೆ ಗುಂಪಿಗೆ ಬಿಡುವುದೋ ಇಲ್ಲವೇ ಮೃಗಾಲಯಕ್ಕೆ ರವಾನೆ ಮಾಡುವ ಬಗ್ಗೆ ನಿರ್ಧರಿಸಿಲ್ಲ ಎಂದು ತಿಳಿದುಬಂದಿದೆ.

25,000 ರೂಪಾಯಿ ದಂಡ: ಇತ್ತೀಚೆಗಷ್ಟೇ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮ ಮೀರಿ ಕಾರು ನಿಲ್ಲಿಸಿ ಕೆಳಗಿಳಿದು ಆನೆ ದಾಳಿಗೆ ಒಳಗಾಗಿದ್ದ ಪ್ರವಾಸಿಗರಿಗೆ ಅರಣ್ಯ ಇಲಾಖೆ ವಿಚಾರಣೆ ನಡೆಸಿ 25,000 ರೂಪಾಯಿ ದಂಡ ವಿದ್ಯಾರ್ಥಿಗಳು ವಿಧಿಸಿತ್ತು.

ಬಂಡೀಪುರ‌ ಹುಲಿ ಸಂರಕ್ಷಿತ ಪ್ರದೇಶ ಮೂಲೆಹೊಳೆ ವಲಯದಲ್ಲಿ ಫೆಬ್ರವರಿ 1ರಂದು ಕಾರು ಬಿಟ್ಟು ಮೂತ್ರ ವಿಸರ್ಜನೆಗೆಂದು ಇಳಿದಿದ್ದ ಇಬ್ಬರ ಮೇಲೆ ಏಕಾಏಕಿ ಕಾಡಾನೆ ಅಟ್ಟಾಡಿಸಿದ ಘಟನೆ ನಡೆದಿತ್ತು.

ಕಾರೊಂದರಿಂದ ಇಳಿದ ಇಬ್ಬರನ್ನು ಹೆಣ್ಣಾನೆಯೊಂದು ಅಟ್ಟಿಸಿಕೊಂಡು ಬರುತ್ತದೆ. ಇಬ್ಬರ ಪೈಕಿ ಒಬ್ಬರು ಕೆಳಗೆ ಬೀಳುತ್ತಾರೆ. ಆನೆ, ಅವರನ್ನು ಕಾಲಿನಲ್ಲಿ ತುಳಿಯಲು ಯತ್ನಿಸುತ್ತದೆ. ಅದೃಷ್ಟವಶಾತ್‌ ಅದರ ಕಾಲು ಅವರ ದೇಹಕ್ಕೆ ತಾಗುವುದಿಲ್ಲ. ಹೆದ್ದಾರಿಯಲ್ಲಿ ಸಂಚರಿಸುವಾಗ ಆನೆ ಸೇರಿದಂತೆ ಇತರ ಪ್ರಾಣಿಗಳು ರಸ್ತೆ ಬದಿಯಲ್ಲಿ ಕಾಣಸಿಗುತ್ತವೆ. ಆಗ ವಾಹನಗಳನ್ನು ನಿಲ್ಲಿಸಬಾರದು ಎಂಬ ಸೂಚನೆ ಇದ್ದರೂ, ನಿಯಮ ಮೀರಿ ವಾಹನಗಳ ನಿಲ್ಲಿಸಿ ಪ್ರಾಣಿ ಪೋಟೋ ತೆಗೆಯಲು ಮುಂದಾಗುತ್ತಾರೆ. ಈ ಹಿಂದೆಯೂ ಈ ಹೆದ್ದಾರಿಯಲ್ಲಿ ಇಂತಹ ಪ್ರಕರಣಗಳು ನಡೆದಿವೆ.

ಮಾಧ್ಯಮದಲ್ಲಿ ವರದಿ ಆಧರಿಸಿ ಬಂಡೀಪುರ ಎ.ಸಿ.ಎಫ್ ಹಾಗೂ ಮೂಲೆಹೊಳೆ ಆರ್.ಎಫ್.ಓ ವಿಚಾರಣೆ ನಡೆಸಿ ಆಂದ್ರಪ್ರದೇಶದ ವಿಶಾಖಪಟ್ಟಣಂ ನಿವಾಸಿಗಳಿಗೆ 25 ಸಾವಿರ ರೂಪಾಯಿ ದಂಡ ಹಾಕಿದ್ದಾರೆ ಎಂದು ಸಿ.ಎಫ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಭೂಪೇಂದ್ರ ಯಾದವ್ ಹೇಳಿದ್ದೇನು?: ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಮಾನವ ಹಾಗೂ ವನ್ಯಜೀವಿ ಸಂಘರ್ಷ ಕುರಿತು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅರಣ್ಯಧಿಕಾರಿಗಳಿಂದ ಮಾಹಿತಿ ಪಡೆದರು. ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಅರಣ್ಯ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾಹಿತಿ ಪಡೆದ ನಂತರ ಮಾತನಾಡಿದ ಅವರು, ಅರಣ್ಯ ಸಚಿವರು, ಕಾಡು ಪ್ರಾಣಿಗಳಿಗೆ ಕರ್ನಾಟಕ, ಕೇರಳ, ತಮಿಳುನಾಡಿ ಎಂಬ ಎಲ್ಲೇ‌ ಇರುವುದಿಲ್ಲ.

ಹಾಗಾಗಿ ಆನೆಗಳನ್ನು ‌ ಯಾವ ಪ್ರದೇಶದಲ್ಲಿ ಬಿಟ್ಟಿದ್ದೇವೆ ಎಂಬುದನ್ನು ಪರಿಗಣಿಸದೆ, ವನ್ಯ ಪ್ರಾಣಿಗಳನ್ನು ಅರಣ್ಯಧಿಕಾರಿಗಳು ರಕ್ಷಿಸುವ ಕೆಲಸ ಮಾಡಬೇಕು. ಜೊತೆಗೆ ವನ್ಯಜೀವಿಗಳು ಅರಣ್ಯದಿಂದ ನಾಡಿನತ್ತ ಬರದಂತೆ ರೈಲ್ವೆ ‌ಬ್ಯಾರಿಕೇಡ್‌ಗಳನ್ನು ಸಮರ್ಪಕವಾಗಿ ನಿರ್ಮಾಣ ಮಾಡಬೇಕೆಂದು ಸೂಚಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+