ಬೆಂಗಳೂರು-ದಿಂಡುಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ 3 ತಾಸು ಟ್ರಾಫಿಕ್ ಜಾಮ್-ಕಾರಣ ಏನು?
ಚಾಮರಾಜನಗರ, ಮೇ, 03: ಭಾರೀ ವಾಹನಗಳಿಗೆ ತಮಿಳುನಾಡು ಅರಣ್ಯ ಇಲಾಖೆಯು ದಂಡ ವಿಧಿಸುತ್ತಿದ್ದು, ಪ್ರತಿ ಲಾರಿ, ಟ್ರಕ್‌ಗಳ ತೂಕ ಅಳೆಯುತ್ತಿರುವುದರಿಂದ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಂ ಉಂಟಾಗಿದೆ. ಇದರಿಂದ ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.
ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರದ ಗಡಿಯಲ್ಲಿರುವ ಅಸನೂರಲ್ಲಿ ತಮಿಳುನಾಡಿನ ಅರಣ್ಯ ಇಲಾಖೆಯು ಅತಿಭಾರ ಹೊತ್ತ ವಾಹನಗಳಿಗೆ ದಂಡ ವಿಧಿಸುತ್ತಿರುವ ಹಿನ್ನೆಲೆ ಉಳಿದ ವಾಹನಗಳಾದ ಬಸ್, ಕಾರು, ಬೈಕ್ ಸವಾರರು ಗಂಟೆಗಟ್ಟಲೇ ಟ್ರಾಫಿಕ್ ಜಾಂನಲ್ಲಿ ಸಿಲುಕಿ ಪರದಾಡಿದರು.

ದಿಂಬಂ ಘಟ್ಟ ಪ್ರದೇಶದಲ್ಲಿ ಸರಕು ತುಂಬಿದ ವಾಹನಗಳು 16 ಟನ್ ಅಷ್ಟೇ ಹೊತ್ತು ಸಾಗಬೇಕು ಎಂದು ಹೈಕೋರ್ಟ್ ಆದೇಶ ಹಿನ್ನೆಲೆ ಗಡಿಯಲ್ಲಿ ಸರಕುಗಳ ತೂಕ ಪರೀಕ್ಷಿಸಿ ಅನುಮತಿ ನೀಡುತ್ತಿರುವ ಹಿನ್ನೆಲೆ ಉಳಿದ ವಾಹನಗಳು ಕಿಮೀಗಟ್ಟಲೇ ಟ್ರಾಫಿಕ್‌ನಲ್ಲಿ ಸಿಲುಕುವಂತಾಗಿದೆ.
6 ಮತ್ತು 10 ಚಕ್ರದ ಲಾರಿಗಳು, ಟ್ರಕ್‌ಗಳು ಕೇವಲ 16.2 ಟನ್‌ನಷ್ಟು ಮಾತ್ರ ಸರಕು ತುಂಬಿ ಸಾಗಾಟ ನಡೆಸಬಹುದಾಗಿದೆ. ಆದರೆ, ಬಹುತೇಕ ಲಾರಿಗಳು 20-25 ಟನ್‌ನಷ್ಟು ತೂಕ ಹೊತ್ತು ಸಾಗುತ್ತಿರುವುದು ಕಂಡುಬಂದಿದ್ದರಿಂದ ಅರಣ್ಯ ಇಲಾಖೆ ಈ ಕ್ರಮ ತೆಗೆದುಕೊಂಡಿದೆ. ಒಟ್ಟಿನಲ್ಲಿ ಆ್ಯಂಬುಲೆನ್ಸ್‌ಗಳು ಸೇರಿದಂತೆ ಹಲವು ವಾಹನಗಳು ಕಿಲೋ ಮೀಟರ್‌ಗಟ್ಟಲೇ ವಾಹನಗಳು ತಮಿಳುನಾಡು ಗಡಿಯಲ್ಲಿ ನಿಂತು ಫಜೀತಿ ಅನುಭವಿಸುವಂತಾಗಿದೆ.
ವಂದೇ ಮೆಟ್ರೋ ಸೇವೆ ಯಾವಾಗಿನಿಂದ ಆರಂಭ?: ಈಗಾಗಲೇ ಐಷಾರಾಮಿ ವಂದೇ ಭಾರತ್ ರೈಲುಗಳು ದೇಶಾದ್ಯಂತ ಸಂಚಾರಿಸುತ್ತಿವೆ. ಅಲ್ಲದೆ, ಜನಮನ್ನಣೆಯನ್ನು ಪಡೆಯುತ್ತಲೇ ಇವೆ. ಉತ್ತಮ ದರ್ಜೆಯ ಸೌಲಭ್ಯಗಳನ್ನು ಒಳಗೊಂಡಿರುವುದರಿಂದ ಈ ರೈಲಿನಲ್ಲಿ ಪ್ರಯಾಣ ಮಾಡಲು ಹೆಚ್ಚು ಜನರು ಇಷ್ಟಪಡುತ್ತಾರೆ. ಹಾಗೆಯೇ ಇದೀಗ ಇದೇ ಮಾದರಿಯಲ್ಲಿ ವಂದೇ ಮೆಟ್ರೋ ಕೂಡ ಇದೇ ಜುಲೈನಲ್ಲಿ ಸಂಚಾರ ಶುರು ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದು ಏನೆಲ್ಲ ಸೌಲಭ್ಯಗಳನ್ನು ಒಳಗೊಂಡಿರುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ದೇಶದ ಮೊಟ್ಟ ಮೊದಲ ವಂದೇ ಮೆಟ್ರೋ ರೈಲು ಜುಲೈನಲ್ಲಿ ಸಂಚಾರ ಶುರು ಮಾಡಲಿದೆ ಎಂದು ರೈಲ್ವೆ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ. ಇದು ಮೆಟ್ರೋ ಮಾದರಿಯ ಸೀಟುಗಳನ್ನು ಹೊಂದಿರುವ ರೈಲಾಗಿದ್ದು, 250 ಕಿಲೋ ಮೀಟರ್ ಅಂತರದಲ್ಲಿರುವ ನಗರಗಳಿಗೂ ಸಂಚಾರ ಮಾಡಲಿದೆ.
"ಈ ಮೆಟ್ರೋ ರೈಲು ಸಂಪೂರ್ಣವಾಗಿ ಹವಾನಿಯಂತ್ರಿತ ಆಗಿದ್ದು, ಗರಿಷ್ಠ 130 ಕಿಲೋ ಮೀಟರ್ ವೇಗದಲ್ಲಿ ಸಂಚಾರಚ ಮಾಡಲಿದೆ. ಬೆಂಚ್ ಮಾದರಿಯ ಸೀಟಿಂಗ್ ಹೊಂದಿರುವ ಇದು ಸ್ವಲ್ಪ ದೂರದ ನಗರಗಳ ನಡುವೆ ಸಂಚರಿಸಲು ತುಂಬಾ ಸಹಾಯಕವಾಗಲಿದೆ. ಮುಂದಿನ 2 ತಿಂಗಳ ಕಾಲ ವಂದೇ ಮೆಟ್ರೋ ರೈಲುಗಳ ಪ್ರಾಯೋಗಿಕ ಸಂಚಾರ ನಡೆಯಲಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ರೈಲಿನ ಬೋಗೊಗಳು ಪಂಜಾಬ್‌ನ ಕಪುರ್ತಲ ರೈಲ್ವೇ ಕೋಚ್ ಕಾರ್ಖಾನೆಯಲ್ಲಿ ನಿರ್ಮಾಣ ಆಗುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇದರ ವಿಶೇಷತೆಗಳನ್ನು ನೋಡುವುದಾದರೆ, ಇದು ಹವಾನಿಯಂತ್ರಿತ ವ್ಯವಸ್ಥೆ ಹೊಂದಿರಲಿದ್ದು, ಪ್ರತೀ ಬೋಗಿಯಲ್ಲಿ ಬೆಂಕಿಯನ್ನು ಗುರುತಿಸುವ ಸೆನ್ಸರ್‌ಗಳಿವೆ. ಸ್ವಯಂಚಾಲಿತ ಬಾಗಿಲುಗಳು, ಗಾಲಿ ಕುರ್ಚಿ ವ್ಯವಸ್ಥೆ, ಪ್ರತೀ ರೈಲಿನಲ್ಲಿ ಕನಿಷ್ಠ 12 ಬೋಗಿಗಳು, ಗರಿಷ್ಠ 16 ಇರಲಿವೆ ಎಂದು ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications