Year Ender 2024: ಚಿನ್ನ ಪ್ರಿಯರಿಗೆ ಈ ವರ್ಷವೆಲ್ಲಾ ಶಾಕ್, ಚಿನ್ನ ಖರೀದಿ ಯಾವಾಗ ಮಾಡಿದರೆ ಬೆಸ್ಟ್ ?
2024ನೇ ಸಾಲಿನಲ್ಲಿ ಚಿನ್ನದ ಬೆಲೆ ಹಲವು ಬಾರಿ ಏರಿಳಿತ ಕಂಡಿದೆ. ಬುಧವಾರ (ಡಿಸೆಂಬರ್ 18ಕ್ಕೆ) ಚಿನ್ನದ 24 ಕ್ಯಾರೆಟ್ ಬೆಲೆಯು ಪ್ರತಿ ಒಂದು ಗ್ರಾಂ 7,784 ರೂ. ಆಗಿದೆ. 22 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ 1 ಗ್ರಾಂ 7,135 ರೂಪಾಯಿ ಆಗಿದೆ. ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಹೆಚ್ಚಳವಾಗುತ್ತಲ್ಲೇ ಇದೆ. ಕಳೆದ ಎರಡು ವರ್ಷಗಳ ಹಿಂದಷ್ಟೇ ಚಿನ್ನದ ಬೆಲೆಯು ಪ್ರತಿ ಹತ್ತು ಗ್ರಾಂಗೆ 50,000ರಿಂದ 55,000 ಸಾವಿರ ರೂಪಾಯಿ ಇತ್ತು. ಆದರೆ, ಇದೀಗ ಪ್ರತಿ ಹತ್ತುಗ್ರಾಂ ಚಿನ್ನದ ಬೆಲೆಯು 77,840 ರೂಪಾಯಿಗೆ ಬಂದು ತಲುಪಿದೆ. ಅಂದರೆ ಬರೋಬ್ಬರಿ 20 ಸಾವಿರ ಆಸುಪಾಸು ಹೆಚ್ಚಳವಾಗಿದೆ. ಇನ್ನು ಈ ವರ್ಷ ಹಲವು ಬಾರಿ ಚಿನ್ನದ ಬೆಲೆ ಹೆಚ್ಚಳ ಹಾಗೂ ಏಕಾಏಕಿ ಕಡಿಮೆಯೂ ಆಗಿದೆ.
2024ನೇ ಸಾಲಿನ ವರ್ಷಾರಂಭದಲ್ಲಿ ಚಿನ್ನದ ಬೆಲೆಯು 24 ಕ್ಯಾರೆಟ್‌ನ ಒಂದು ಗ್ರಾಂಗೆ 6,409 ರೂಪಾಯಿ ಇತ್ತು. 22 ಕ್ಯಾರೆಟ್‌ನ ಚಿನ್ನದ ಬೆಲೆಯು 5,875 ರೂಪಾಯಿನಲ್ಲಿತ್ತು. ಇನ್ನು ಈ ವರ್ಷ ಜೂನ್‌ನಲ್ಲಿ ಚಿನ್ನದ ಬೆಲೆಯು ಗಣನೀಯವಾಗಿ ಕುಸಿದಿತ್ತು. ಆ ಸಂದರ್ಭದಲ್ಲಿ ಚಿನ್ನ ಪ್ರಿಯರು ಸಂತೋಷಗೊಂಡಿದ್ದರು. ಆದರೆ, ಆ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ. ಅಕ್ಟೋಬರ್ ವೇಳೆಗೆ ಚಿನ್ನದ ಬೆಲೆಯು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಯ್ತು.

ಚಿನ್ನ ಪ್ರಿಯರಿಗೆ ಶಾಕ್: ಇನ್ನು 2024ನೇ ಸಾಲಿನ ವರ್ಷ ಪೂರ್ತಿ ಚಿನ್ನ ಪ್ರಿಯರಿಗೆ ಒಂದಿಲ್ಲೊಂದು ಶಾಕ್ ಎದುರಾಗುತ್ತಲ್ಲೇ ಇತ್ತು. ಚಿನ್ನದ ಬೆಲೆ ಕಡಿಮೆಯಾಗುತ್ತಿದೆ. ಇನ್ನೇನು ಚಿನ್ನ ಖರೀದಿ ಮಾಡಬೇಕು ಅಂತ ಅಂದುಕೊಳ್ಳುವಾಗಲೇ ಚಿನ್ನದ ಬೆಲೆಯು ದಿಢೀರ್ ಅಂತ ಹೆಚ್ಚಳವಾಗುತ್ತಿತ್ತು. ಇದೀಗ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 77, 840 ರೂಪಾಯಿ ಆಗಿದೆ. ವರ್ಷದ ಪ್ರಾರಂಭದಲ್ಲಿ ಇದು 65 ಸಾವಿರದ ಸಮೀಪದಲ್ಲಿ ಇತ್ತು. ಆಗ ಚಿನ್ನ ಖರೀದಿ ಮಾಡಿದವರು ಹೆಚ್ಚುಕಡಿಮೆ 15,000 ಸಾವಿರ ರೂಪಾಯಿ ಉಳಿಸಿದಂತೆ ಆಗಿದೆ. ಇನ್ನು ಮುಂದಿನ ದಿನಗಳಳ್ಲಿ ಚಿನ್ನದ ಬೆಲೆ ಹೆಚ್ಚಾಗಬಹುದು ಎನ್ನುವ ಅನುಮಾನದಲ್ಲಿ ಹಲವರು ಚಿನ್ನ ಖರೀದಿ ಮಾಡುತ್ತಿದ್ದಾರೆ.
ಚಿನ್ನದ ಬೆಲೆಯು ಕಳೆದ ಮೂರು ತಿಂಗಳಿನಿಂದಲೂ 80,000 ಸಾವಿರ ರೂಪಾಯಿಯ ಆಸುಪಾಸು ಇದೆ. ಕೆಲವೊಮ್ಮೆ 80 ಸಾವಿರ ತಲುಪೇ ಬಿಟ್ಟಿತ್ತು ಎನ್ನುವಾಗಲೇ ಚಿನ್ನದ ಬೆಲೆ ಇಳಿಕೆಯಾಗಿದೆ. ಈಗಲೂ 80,000 ಸಾವಿರ ರೂಪಾಯಿಗೆ ಕೇವಲ 2,000 ಸಾವಿರ ರೂಪಾಯಿ ಮಾತ್ರ ಕಡಿಮೆ ಇದೆ.
10 ವರ್ಷಗಳಲ್ಲಿ ದಾಖಲೆಯ ಏರಿಳಿತ: ಚಿನ್ನದ ಮೇಲೆ ಹೂಡಿಕೆ ಯಾಕೆ ಮಾಡಬೇಕು ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಚಿನ್ನ ಯಾವ ರೀತಿ ಲಾಭ ತಂದು ಕೊಡುತ್ತದೆ ಎನ್ನುವುದಕ್ಕೆ ಕಳೆದ 10 ವರ್ಷಗಳಲ್ಲಿ ಚಿನ್ನದ ಬೆಲೆಯಲ್ಲಿ ಆಗಿರುವ ಬದಲಾವಣೆಗಳೇ ಸಾಕ್ಷಿ. ಕಳೆದ 9 ವರ್ಷದ ಅವಧಿಯಲ್ಲಿ ಚಿನ್ನದ ಬೆಲೆಯು ಚಿನ್ನ ಪ್ರಿಯರು ನಿರೀಕ್ಷೆಯೂ ಮಾಡದಷ್ಟು ಬದಲಾಗಿದೆ. ಇನ್ನು 2024ನೇ ಸಾಲಿನಲ್ಲಂತೂ ಚಿನ್ನದ ಬೆಲೆ ಹೆಚ್ಚಳವಾಗಿದ್ದೇ ಜಾಸ್ತಿ.

ಚಿನ್ನದ ಬೆಲೆಯು 9 ವರ್ಷಗಳ ಹಿಂದೆ ಪ್ರತಿ 1 ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆಯು 4,619.74 ರೂಪಾಯಿ ಇತ್ತು. ಇದೀಗ ಇದಕ್ಕಿಂತ ಮೂರರಿಂದ ನಾಲ್ಕು ಸಾವಿರ ರೂಪಾಯಿ ಹೆಚ್ಚಳವಾಗಿದೆ. ಇನ್ನು ಹತ್ತು ಗ್ರಾಂ ಹಾಗೂ ಆಭರಣ ಅದರ ಮೇಕಿಂಗ್ ಚಾರ್ಜ್‌ಗಳಲ್ಲಿ ಹಲವು ಪಟ್ಟು ಹೆಚ್ಚಳವಾಗಿದೆ. ಹೀಗಾಗಿ, ದುಡ್ಡು ಇರುವಾಗಲೇ ಸಣ್ಣ ಸಣ್ಣ ಪ್ರಮಾಣದಲ್ಲಿ ಚಿನ್ನ ಖರೀದಿ ಮಾಡುವುದು ಉತ್ತಮ ಇದರಿಂದ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯಾದರೆ, ಲಾಭವೇ ಆಗಲಿದೆ.
2025ನೇ ಸಾಲಿನಲ್ಲಿ ಚಿನ್ನದ ಬೆಲೆಯು ಇನ್ನಷ್ಟು ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ. ವರ್ಷಾಂತ್ಯವಾಗಿರುವುದರಿಂದ ಈ ಸಂದರ್ಭದಲ್ಲಿ ಚಿನ್ನದ ಖರೀದಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯೂ ಇದೆ.












Click it and Unblock the Notifications