ಭಾರತದ ಮೂಲಸೌಕರ್ಯ ಯೋಜನೆಗಳಲ್ಲಿ, ಅಮೆರಿಕಾದ ಹಣಕಾಸು ನಿಗಮದಿಂದ 54 ಮಿಲಿಯನ್ ಡಾಲರ್ ಹೂಡಿಕೆ
ನವದೆಹಲಿ, ಡಿಸೆಂಬರ್ 23: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಭಾರತದಲ್ಲಿ ಅತ್ಯಂತ ನಿರ್ಣಾಯಕ ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿಗೆ ಬೆಂಬಲಿಸಲು ಅಮೆರಿಕಾದ ಹಣಕಾಸು ಸಂಸ್ಥೆ ಮುಂದಾಗಿದ್ದು 54 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ಹಿಂದಿನ ಮೂರು ದಶಕಗಳಲ್ಲಿ ಭಾರತ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿದೆ, ಆದರೆ ಇದು ಗಮನಾರ್ಹವಾದ ಮೂಲಸೌಕರ್ಯ ಕೊರತೆಯಿಂದ ಬಳಲುತ್ತಿದೆ. ವಿಶೇಷವಾಗಿ ಕೋವಿಡ್-19 ರ ಹಿನ್ನೆಲೆಯಲ್ಲಿ ದೇಶದ ಬೆಳವಣಿಗೆಗೆ ಹಿನ್ನಡೆಯಾಗಿದೆ ಎಂದು ಅಮೆರಿಕಾದ ಇಂಟರ್‌ನ್ಯಾಷ್‌ನಲ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಡಿಎಫ್‌ಸಿ) ಹೇಳಿದೆ.
ನಿರ್ಣಾಯಕ ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿಗೆ ಬೆಂಬಲ ನೀಡಲು ಭಾರತದಲ್ಲಿನ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿಗೆ (ಎನ್‌ಐಐಎಫ್) 54 ಮಿಲಿಯನ್ ಡಾಲರ್ ಷೇರುಗಳನ್ನು ಹೂಡಿಕೆ ಮಾಡುವುದಾಗಿ ಡಿಎಫ್‌ಸಿ ಹೇಳಿದೆ. ಹಣಕಾಸು ಎನ್‌ಐಐಎಫ್‌ನ ಅಂತಿಮ ಸುತ್ತಿನ ನಿಧಿಸಂಗ್ರಹದ ಒಂದು ಭಾಗವಾಗಿದೆ.

''ಈ ಅಂತಿಮ ಸುತ್ತಿನಲ್ಲಿ ಡಿಎಫ್‌ಸಿ ಹೂಡಿಕೆ ಮಾಡುತ್ತಿರುವುದು ನಮಗೆ ಸಂತೋಷ ತಂದಿದೆ. ಅವರ ಹೂಡಿಕೆ ಭಾರತದಾದ್ಯಂತ ಮೂಲಸೌಕರ್ಯ ಹೂಡಿಕೆಯನ್ನು ಬಲಪಡಿಸುತ್ತದೆ. ಡಿಎಫ್‌ಸಿ ಅದರ ಉನ್ನತ ಗುಣಮಟ್ಟಗಳಾದ ಬ್ಲೂ ಡಾಟ್ ನೆಟ್‌ವರ್ಕ್ ಮತ್ತು ಪರಿಸರ ಮತ್ತು ಸಾಮಾಜಿಕ ಅಪಾಯಗಳ ಪಾರದರ್ಶಕತೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಉತ್ತಮ ಅಭ್ಯಾಸಗಳಿಗೆ ಬದ್ಧತೆಯನ್ನು ತರುವ ಎಲ್ಲದರ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಎಂದು ಎನ್ಐಐಎಫ್ ಸಿಇಒ ಸುಜೋಯ್ ಬೋಸ್ ಹೇಳಿದರು.
ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ಮತ್ತು ದೇಶದ ನಿರ್ಣಾಯಕ ಅಭಿವೃದ್ಧಿ ಸವಾಲುಗಳನ್ನು ಎದುರಿಸಲು ಬಂಡವಾಳವನ್ನು ಸಜ್ಜುಗೊಳಿಸಲು ಎನ್ಐಐಎಫ್ ಕೆಲಸ ಮಾಡುತ್ತದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.












Click it and Unblock the Notifications