ಬಜೆಟ್ 2016: ಅರುಣ್ ಜೇಟ್ಲಿ ಹೇಳಿದ ತೆರಿಗೆ ಲೆಕ್ಕವೇನು?

Subscribe to Oneindia Kannada

ನವದೆಹಲಿ, ಫೆಬ್ರವರಿ, 29: ಕೇಂದ್ರ ಸರ್ಕಾರದ ಮುಂಗಡ ಪತ್ರ ಮಂಡನೆಯಾಗಿದೆ. ತೆರಿಗೆ ಪದ್ಧತಿಯಲ್ಲೂ ಹಲವಾರು ಬದಲಾವಣೆ ಮಾಡಲಾಗಿದೆ ಅಭಿವೃದ್ಧಿಯನ್ನು ಆಧಾರವಾಗಿಟ್ಟುಕೊಂಡು ಜೇಟ್ಲಿ ತೆರಿಗೆ ಪದ್ಧತಿಯನ್ನು ಮುಂದಿಟ್ಟಿದ್ದಾರೆ. ಜೇಟ್ಲಿ ಹೇಳಿದ ತೆರಿಗೆ ಪದ್ಧತಿಯ ಹೈಲೈಟ್ಸ್....

ಬಾಡಿಗೆ ಮನೆ ವಾಸಮಾಡುತ್ತಿರುವವವರಿಗೆ, ಸಣ್ಣ ಹೂಡಿಕೆದಾರರಿಗೆ, ಗೃಹ ಸಾಲ ಮಾಡುವವರಿಗೆ, ಚಿಕ್ಕ ಉದ್ಯಮಗಳಿಗೆ ಅರುಣ್ ಜೇಟ್ಲಿ ಸಿಹಿಸುದ್ದಿ ನೀಡಿದ್ದಾರೆ.[ಕೇಂದ್ರ ಬಜೆಟ್ ಸಂಪೂರ್ಣ ವಿವರ]

budget

ಹೊಸ ಉತ್ಪಾದನಾ ಘಟಕಗಳಿಗೆ ಅರುಣ್ ಜೇಟ್ಲಿ ಅಭಯ ನೀಡಿದ್ದಾರೆ. ಶೇ. 25 ರಷ್ಟು ಕಾರ್ಪೋರೇಟ್ ಟ್ಯಾಕ್ಸ್ ಕಡಿತ ಮಾಡಲಾಗಿದೆ. ಇದನ್ನು ಉದ್ಯೋಗವಕಾಶಗಳ ಸೃಷ್ಟಿಗೆ ಬಳಸಿಕೊಳ್ಳುವಂತೆ ತಿಳಿಸಿದೆ. 5 ಕೋಟಿ ಹಣದ ವ್ಯವಹಾರ ನಡೆಸುವ ಕಂಪನಿಗಳು ಶೇ. 1 ರಷ್ಟು ಕಡಿಮೆ ತೆರಿಗೆ ನೀಡಿದರೆ ಸಾಕು. ಶೇ. 30 ರಿಂದ 29ಕ್ಕೆ ಅದನ್ನು ಇಳಿಕೆ ಮಾಡಲಾಗಿದೆ.

ಮಾರ್ಚ್ 1, 2016 ರ ನಂತರ ಸ್ಥಾಪನೆಯಾಗುವ ಕಂಪನಿಗಳಿಗೆ ಶೇ. 5 ರಷ್ಟು ತೆರಿಗೆ ವಿನಾಯಿತಿ ಲಾಭ ಸಿಗಲಿದೆ.ಹೊಸ ಕಂಪನಿಗಳ ಸ್ಥಾಪನೆಗೆ ಉತ್ತೇಜನ ಮತ್ತು ಉದ್ಯೋಗವಕಾಶ ಸೃಷ್ಟಿ ಇದರ ಮುಖ್ಯ ಉದ್ದೇಶ ಎಂದು ಜೇಟ್ಲಿ ತಿಳಿಸಿದ್ದಾರೆ.[ಕಡಿಮೆ ಗಳಿಕೆದಾರರು, ಬಾಡಿಗೆ ಮನೆಯಲ್ಲಿರುವವರಿಗೆ ಖುಷಿ]

ತೆರಿಗೆಗೆ ಸಂಬಂಧಿಸಿದ ಇತರೆ ಅಂಶಗಳು

* ಆದಾಯ ತೆರಿಗೆ ಸ್ಲಾಬ್ ನಲ್ಲಿ ಯಾವ ಬದಲಾವಣೆ ಇಲ್ಲ.

* ವಾರ್ಷಿಕ 2.5 ಲಕ್ಷ ತಲಾ ಆದಾಯಕ್ಕೆ ತೆರಿಗೆಯಿಲ್ಲ.

* 2.5 ಲಕ್ಷ ದಿಂದ 5 ಲಕ್ಷ ವಾರ್ಷಿಕ ಆದಾಯ ಶೇ. 10 ತೆರಿಗೆ

* 5 ರಿಂದ 10 ಲಕ್ಷ ರು. ವಾರ್ಷಿಕ ಆದಾಯ ಶೇ. 20 ತೆರಿಗೆ

* 10 ಲಕ್ಷ ರು. ಮೇಲ್ಪಟ್ಟು ವಾರ್ಷಿಕ ಆದಾಯ ಶೇ. 30 ತೆರಿಗೆ [ಯಾವುದು ಏರಿಕೆ? ಯಾವುದು ಇಳಿಕೆ?]

* ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಸಿಹಿಸುದ್ದಿ. 80 ಜಿಜಿ ಅನ್ವಯ ಟ್ಯಾಕ್ಸ್ ಡಿಡಕ್ಷನ್ ಮಿತಿ 24 ರಿಂದ 60 ಸಾವಿರ ಏರಿಕೆ. ಆದರೆ ಬಾಡಿಗೆ ಮನೆಯಲ್ಲಿ ವಾಸಮಾಡುತ್ ತಿರುವವರು ಸ್ವಂತ ಮನೆ ಹೊಂದಿರಬಾರದು.

* ಮೊದಲ ಸಾರಿ ಗೃಹ ಸಾಲ ಮಾಡುವವರಿಗೂ ಸಿಹಿ ಸುದ್ದಿ ಸಿಕ್ಕಿದ್ದು 35 ಲಕ್ಷ ಸಾಲ ಪಡೆದುಕೊಂಡ ವೇಳೆ ಕಟ್ಟುವ 50 ಸಾವಿರ ಹೆಚ್ಚುವರಿ ಬಡ್ಡಿಗೆ ತೆರಿಗೆ ವಿನಾಯಿತಿ ಲಭ್ಯವಾಗಲಿದೆ.

* ಚಿಕ್ಕ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ನೆರವಿಗೆ ನಿಂತಿರುವ ಜೇಟ್ಲಿ ವಾರ್ಷಿಕ 2 ಕೋಟಿ ರು. ವಹಿವಾಟು ನಡೆಸುವ ಕಂಪನಿಗಳಿಗೆ ಕೆಲ ವಿನಾಯಿತಿಗಳನ್ನು 44 ಎಡಿ ಅನ್ವಯ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Finance Minister Arun Jaitley announced two new measures to provide relief to small taxpayers in Budget 2016. Tax deduction limit for those with income less than Rs. 5 lakh, increased from 2,000 to 5,000. Here some other important points to know about tax
Please Wait while comments are loading...