ಬ್ಯಾಂಕ್‌ ಗ್ರಾಹಕರ ಗಮನಕ್ಕೆ; ಏಪ್ರಿಲ್‌ನಿಂದ ಬ್ಯಾಂಕ್‌ಗಳಿಗೆ ವಾರದಲ್ಲಿ ಎರಡು ದಿನ ರಜೆ

Bank Holiday: ಬ್ಯಾಂಕ್‌ ನಿಯಮಗಳಲ್ಲಿ ಆಗಾಗ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಪ್ರತಿ ಹೊಸ ತಿಂಗಳು ಪ್ರಾರಂಭ ಆಗುವ ಮುನ್ನ ಆರ್‌ಬಿಐ ಬ್ಯಾಂಕುಗಳ ರಜಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದೇ ರೀತಿ ಏಪ್ರಿಲ್ ತಿಂಗಳ ಆರಂಭಕ್ಕೆ ಇನ್ನೂ ಕೆಲವೇ ದಿನಗಳ ಮಾತ್ರ ಬಾಕಿ ಇದ್ದು, ಇದೀಗ ಹೊಸ ಬದಲಾವಣೆಯ ರಜಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಹೊದ ನಿಯಮದ ಪ್ರಕಾರ, ಏಪ್ರಿಲ್ ತಿಂಗಳಿನಲ್ಲಿ ತುಂಬಾ ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. ಇನ್ನು ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರ ಕೂಡ ಬ್ಯಾಂಕುಗಳಿಗೆ ಎಂದಿನಂತೆ ರಜೆ ಇರುತ್ತದೆ. ಇನ್ನು ಏಪ್ರಿಲ್ ತಿಂಗಳು 2025-26ನೇ ಆರ್ಥಿಕ ಸಾಲಿನ ಮೊದಲ ತಿಂಗಳಾಗಿರುವ ಹಿನ್ನೆಲೆ ಕೆಲವರಿಗೆ ಹಣಕಾಸು ಸಂಬಂಧಿ ಕೆಲಸಗಳಿಗೆ ಬ್ಯಾಂಕಿಗೆ ಭೇಟಿ ನೀಡಬೇಕಾದ ಪ್ರಸಂಗ ಎದುರಾಗಬಹುದು. ಅಂತಹ ತುರ್ತು ಕೆಲಸಗಳಿದ್ದರೆ, ರಜಾಪಟ್ಟಿಯನ್ನು ನೋಡಿಕೊಂಡು ಬ್ಯಾಂಕಿಗೆ ಭೇಟಿ ನೀಡಿ.

Two Days holiday to Banks in Week from April

ಈ ಮೂದಲು ಬ್ಯಾಂಕ್‌ಗಳು ವಾರದಲ್ಲಿ ಎಡರನೇ ಹಾಗೂ ನಾಲ್ಕನೇ ಶನಿವಾರ ಹೊರತುಪಡಿಸಿ 6 ದಿನ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಈ ನಿಯಮ ಇದೀಗ ಬದಲಾಗುತ್ತಿದೆ. ಕಾರಣ ಕೇಂದ್ರ ಸರ್ಕಾರ ಇದೀಗ ನೌಕರರ ಬೇಡಿಕೆ ಒಪ್ಪಿಕೊಂಡಿದ್ದು, ಇನ್ನು ವಾರಕ್ಕೆ ಎರಡು ದಿನ ಬ್ಯಾಂಕ್ ನೌಕರರಿಗೆ ರಜೆ ಸಿಗಲಿದೆ. 5 ದಿನ ಮಾತ್ರ ಅವರಿಗೆ ಕೆಲಸ ಇರಲಿದೆ ಎಂದು ತಿಳಿಸಿದೆ.

ಮುಂದಿನ ತಿಂಗಳು ಅಂದರೆ, ಏಪ್ರಿಲ್‌ನಿಂಲದೇ ಈ ನಿಯಮ ಜಾರಿಯಾಗಲಿದೆ. ಈ ತಿಂಗಳು ವಾರಕ್ಕೆ 5 ದಿನ ಮಾತ್ರ ಬ್ಯಾಂಕ್ ತೆರೆದಿರತ್ತೆ. ಉಳಿದ ದಿನ ಬ್ಯಾಂಕ್ ಮುಚ್ಚಲ್ಪಡುತ್ತವೆ. ಶನಿವಾರ ಯಾವುದೇ ವ್ಯವಹಾರ ಇರುವುದಿಲ್ಲ. ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಬ್ಯಾಂಕ್ ಕಾರ್ಯನಿರ್ವಹಿಸಲಿವೆ. ಕಾರ್ಪೋರೇಟ್ ಕಚೇರಿಗಳ ರೀತಿಯಲ್ಲಿ ಬ್ಯಾಂಕ್ 5 ದಿನ ಕೆಲಸ, 2 ದಿನ ರಜಾ ದಿನಗಳಾಗಿರುತ್ತದೆ.

ಶನಿವಾರ ಮತ್ತು ಭಾನುವಾರ 2 ದಿನ ರಜೆ ಬೇಕು ಅಂತಾ ಬ್ಯಾಂಕ್ ನೌಕರರು ಬೇಡಿಕೆಯನ್ನು ಮುಂದಿಟ್ಟಿದ್ದರು. ಅಲ್ಲದೆ, ಪ್ರತಿಭಟನೆಗಳು, ಹೋರಾಟಗಳನ್ನು ಸಹ ನಡೆಸಿದ್ದರು. ಆರ್‌ಬಿಐಗೂ ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಕೊನೆಗೂ ನೌಕರರ ಬೇಡಿಕೆಯಂತೆ ವಾರಕ್ಕೆ 2 ದಿನ ರಜಾ ದಿನವಾಗಿ ಘೋಷಿಸಲು ಸರ್ಕಾರ ಮುಂದಾಗಿದೆ.

ಎಪ್ರಿಲ್ ತಿಂಗಳಿನಿಂದ ಹೊಸ ನಿಯಮ ಜಾರಿಯಾಗುತ್ತಿದೆ. ಆದ್ದರಿಂದ ಗ್ರಾಹಕರು ಬ್ಯಾಂಕ್ ಕೆಲಸಕ್ಕಾಗಿ ತೆರಳುವ ಮುನ್ನ ವಾರ ಯಾವುದು ಎಂದು ನೆನಪಿನಲ್ಲಿಟ್ಟುಕೊಳ್ಳುವುದು ಉತ್ತಮ. ಎಂದಿನಂತೆ ಶನಿವಾರ ಬ್ಯಾಂಕ್ ಕೆಲೆಸ ಕಾರ್ಯಗಳನ್ನು ಮುಗಿಸಿಕೊಳ್ಳುವ ಆಲೋಚನೆ ಇದ್ದರೆ, ಏಪ್ರಿಲ್ ತಿಂಗಳಿನಿಂದ ಸಾಧ್ಯ ಆಗುವುದಿಲ್ಲ.

ಶನಿವಾರ ಬ್ಯಾಂಕ್ ಮುಚ್ಚಿರುವುದರಿಂದ ಎರಡು ಶಿಫ್ಟ್‌ನಲ್ಲಿ ಬ್ಯಾಂಕ್ ತೆರೆಯೋಕೆ ಕೇಂದ್ರ ಸರ್ಕಾರ ಯೋಚನೆ ಮಾಡುತ್ತಿದೆ. ಅಂದ್ರೆ ಸಂಜೆ ಮೇಲೂ ವ್ಯವಹಾರ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇನ್ನು ವಾರ ಪೂರ್ತಿ ಆಫೀಸ್ ಕೆಲಸದಲ್ಲಿ ತುಂಬಾ ಜನ ಬ್ಯುಸಿ ಇರುತ್ತಾರೆ. ಆದ್ದರಿಂದ ಶನಿವಾರ ಒಂದೇ ದಿನ ಅವರಿಗೆ ವ್ಯವಹಾರ ಮಾಡುವುದಕ್ಕೆ ಸರಿ ಇರುವ ದಿನ. ಆದ್ದರಿಂದ ಗ್ರಾಹಕರನ್ನ ಗಮನದಲ್ಲಿ ಇಟ್ಟುಕೊಂಡು ಸಂಜೆ ಮೇಲೂ ಬ್ಯಾಂಕ್ ತೆರೆಯುವುದಕ್ಕೆ ಸರ್ಕಾರ ಯೋಚನೆ ಮಾಡುತ್ತಿದೆ. ವಾರಕ್ಕೆ 2 ದಿನ ರಜೆ ಸಿಗಬೇಕೆಂದರೆ, ಉಳಿದ 5 ದಿನ ಬ್ಯಾಂಕ್ ನೌಕರರು ಜಾಸ್ತಿ ಕೆಲಸ ಮಾಡಬೇಕಾಗತ್ತದೆ. ಅಷ್ಟೇ ಅಲ್ಲದೆ, ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಎರಡು ಶಿಫ್ಟ್‌ನಲ್ಲಿ ಕೆಲಸ ಮಾಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+