ಭ್ರಷ್ಟಾಚಾರ: ಬಂಧನಕ್ಕೊಳಗಾಗಿದ್ದ ನಿಸ್ಸಾನ್ ಮಾಜಿ ಚೇರ್ಮನ್ ಗೆ ಜಾಮೀನು

ಟೋಕಿಯೋ, ಮಾರ್ಚ್ 05: ಭ್ರಷ್ಟಾಚಾರದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ನಿಸ್ಸಾನ್ ಸಂಸ್ಥೆ ಚೇರ್ಮನ್ ಕಾರ್ಲೋಸ್ ಘೋಸ್ನ್ ಅವರಿಗೆ ಸ್ಥಳೀಯ ನ್ಯಾಯಾಲಯವು ಮಂಗಳವಾರದಂದು ಜಾಮೀನು ಮಂಜೂರು ಮಾಡಿದೆ.

ಒಂದು ಬಿಲಿಯನ್ ಯೆನ್(ಯುಎಸ್ 9 ಮಿಲಿಯನ್ ಡಾಲರ್) ನೀಡಿ ಜಾಮೀನು ಪಡೆಯಲು ಸೂಚಿಸಲಾಗಿದೆ. ಆದರೆ, ಸರ್ಕಾರಿ ಪರ ವಕೀಲರು ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ.

ನಿಸ್ಸಾನ್ ಸಂಸ್ಥೆ ಮಾಜಿ ಚೇರ್ಮನ್ ಕಾರ್ಲೋಸ್ ಘೋಸ್ನ್ ಅವರ ಮೇಲೆ ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದಿತ್ತು. ನವೆಂಬರ್ 19, 20158ರಂದು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಸ್ಸಾನ್ ಸಂಸ್ಥೆ ಕೂಡಾ ಆಂತರಿಕ ತನಿಖೆ ನಡೆಸುತ್ತಿದೆ.

Tokyo court grants ex-Nissan chief Ghosn bail

64 ವರ್ಷ ವಯಸ್ಸಿನ ಬ್ರೆಜಿಲ್ ಮೂಲದ ಲೆಬನೀಸ್, ಫ್ರೆಂಚ್ ನಾಗರಿಕ ಕಾರ್ಲೋಸ್ ಅವರು ಮಿಚೆಲಿನ್ ನೊಂದಿಗೆ ತಮ್ಮ ವೃತ್ತಿ ಬದುಕು ಆರಂಭಿಸಿ ನಂತರ ರೆನೋ ಸೇರಿಕೊಂಡಿದ್ದರು. 1999ರಲ್ಲಿ ನಿಸ್ಸಾನ್ ಸೇರಿ 2001ರ ತನಕ ಸಿಇಒ ಆಗಿದ್ದರು. ಸಿಇಒ ಆಗಿದ್ದಾಗ 9.2 ಮಿಲಿಯನ್ ಯುರೋ ಗಳಿಸಿದ್ದರು.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಮುಂದೆ ಈ ಪ್ರಕರಣದ ಕುರಿತು ತಿಳಿಸಲಾಗುವುದು, ಜಪಾನ್ ನಲ್ಲಿ ಇನ್ನೂ ಅನಾದಿ ಕಾಲದ ಕಾನೂನು ನಿಯಮಗಳು ಬಳಕೆಯಲ್ಲಿವೆ ಬದಲಾವಣೆಯಾಗಿಲ್ಲ ಎಂದು ಕಾರ್ಲೋಸ್ ಅವರ ಪತ್ನಿ ಕರೊಲೆ ದೂರಿದ್ದಾರೆ.

ಹೈ ಪ್ರೊಫೈಲ್ ಕ್ಲೈಂಟ್ ಗಳ ಕೇಸುಗಳನ್ನು ತೆಗೆದುಕೊಂಡು ಎಂಥಾ ಕಷ್ಟದ ಪರಿಸ್ಥಿತಿಯಲ್ಲೂ ಕ್ಲೈಂಟ್ ಗಳಿಗೆ ಜಾಮೀನು, ಬಿಡುಗಡೆಗೊಳಿಸಬಲ್ಲ ನಿಷ್ಣಾತ ಎಂದೇ ಜನಪ್ರಿಯರಾಗಿರುವ ಹಿರೋನಾಕಾ ಅವರು ಕಾರ್ಲೋಸ್ ಪರ ವಾದಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+