Gold Rate: ಯುಗಾದಿ ಬೆನ್ನಲ್ಲೇ ಭರ್ಜರಿ ಇಳಿಕೆ ಕಂಡ ಚಿನ್ನದ ದರ
ಚಿನ್ನ ಹಾಗೂ ಬೆಳ್ಳಿ ಆಭರಣ ಪ್ರಿಯರಿಗೆ ಯುಗಾದಿ ಹಬ್ಬದ ಸಂಭ್ರಮ ದುಪ್ಪಟ್ಟಾಗಿದೆ. ಹಲವು ದಿನಗಳಿಂದ ಭಾರಿ ಏರಿಕೆ ಕಂಡಿದ ಚಿನ್ನದ ದರವು ದಿಢೀರ್ ಇಳಿಕೆ ಕಂಡಿದೆ. ಯುಗಾದಿ ವೇಳೆ ದರ ಗಗನಕ್ಕೇರುವ ಆತಂಕದಲ್ಲಿದ್ದ ಆಭರಣ ಪ್ರಿಯರು ನಿಟ್ಟುಸಿರು ಬಿಟ್ಟಿದ್ದಾರೆ. ಹಬ್ಬದ ಕಳೆದ ಮರುದಿನವೇ ಚಿನ್ನದ ದರ ಕಡಿಮೆಯಾಗಿರುವುದು ಸಂತಸ ಮೂಡಿಸಿದೆ. ಬೆಂಗಳೂರಿನಲ್ಲಿ ಇಂದಿನ (ಮಾರ್ಚ್ 31) ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟು? ಎಂಬ ಮಾಹಿತಿ ಇಲ್ಲಿದೆ..
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 9,119 ರೂಪಾಯಿ ಇದೆ. ಇನ್ನು 22 ಕ್ಯಾರೆಟ್ ಚಿನ್ನಕ್ಕೆ ದರವು ಪ್ರತಿ ಗ್ರಾಂಗೆ 8,359 ರೂಪಾಯಿ ಆಗಿದೆ. 18 ಕ್ಯಾರೆಟ್ ಅಂದರೆ 999 ಚಿನ್ನದ ದರ ಪ್ರತಿ ಗ್ರಾಂಗೆ 6,839 ರೂಪಾಯಿಗೆ ಕುಸಿತ ಕಂಡಿದೆ. ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ನೋಡುವುದಾದರೆ, ಗ್ರಾಂಗೆ 8,360 ರೂಪಾಯಿಯಿಂದ 8,359 ರೂಪಾಯಿಗೆ ಇಳಿಕೆ ಕಂಡಿದೆ.

ಇನ್ನು 8 ಗ್ರಾಂ ಚಿನ್ನದ ದರವು 66,880 ರೂಪಾಯಿಯಿಂದ 66,872 ರೂಪಾಯಿಗೆ ಬರೋಬ್ಬರಿ 8 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರವು 83,600 ರೂಪಾಯಿಯಿಂದ 83,590 ರೂಪಾಯಿಗೆ ಅಂದರೆ 10 ರೂ. ಕುಸಿದಿದೆ. 100 ಗ್ರಾಂ ಚಿನ್ನವು 8,36,000 ರೂಪಾಯಿಯಿಂದ 8,35,900 ರೂಪಾಯಿಗೆ ಅಂದರೆ ಬರೋಬ್ಬರಿ 100 ರೂಪಾಯಿ ಕಡಿಮೆಯಾಗಿದೆ.
24 ಕ್ಯಾರೆಟ್ ಚಿನ್ನದ ದರವು ಪ್ರತಿ ಗ್ರಾಂಗೆ 9,120 ರೂಪಾಯಿಯಿಂದ 9,119 ರೂಪಾಯಿಗೆ ಇಳಿದಿದೆ. 8 ಗ್ರಾಂ ಚಿನ್ನ 72,960ರಿಂದ 72,952 ರೂಪಾಯಿಗೆ ಕಡಿಮೆಯಾಗಿದೆ. 10 ಗ್ರಾಂ ಚಿನ್ನ 91,200ರಿಂದ 91,190 ರೂಪಾಯಿಗೆ ಅಂದರೆ 10 ರೂ.ವರೆಗೆ ಇಳಿಕೆ ಕಂಡಿದೆ. ಇನ್ನು 100 ಗ್ರಾಂ ಚಿನ್ನವು 9,12,000 ರೂ.ನಿಂದ 9,11,900 ರೂಪಾಯಿವರೆಗೆ 100 ರೂ. ಕಡಿಮೆಯಾಗಿದೆ.

ಮಾರ್ಚ್ 26ರಿಂದಲೂ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ದರಗಳು ನಿರಂತರವಾಗಿ ಏರಿಕೆ ಕಂಡಿದ್ದವು. ಮಾರ್ಚ್ 26ರಂದು 22 ಕ್ಯಾರೆಟ್ ಒಂದು ಗ್ರಾಂ ಚಿನ್ನ 8,195 ರೂ. ಇದ್ದರೆ, 24 ಕ್ಯಾರೆಟ್ 8,940 ರೂ ತಲುಪಿತ್ತು. ಮತ್ತೆ ಮರುದಿನ ಏರಿಕೆ ಕಂಡಿದ್ದ ಚಿನ್ನವು ಗ್ರಾಂ.ಗೆ 8,235 ರೂ ಹಾಗೂ 8,984 ರೂ.ವರೆಗೆ ಮುಟ್ಟಿತ್ತು. ಮಾರ್ಚ್ 28ರಂದು ಮತ್ತೆ 8,340 ರೂಪಾಯಿ ಹಾಗೂ 9,098 ರೂ.ಗೆ ಏರಿಕೆ ಕಂಡಿತ್ತು. ಮಾರ್ಚ್ 29 ಹಾಗೂ ಮಾರ್ಚ್ 30ರಂದು ಪ್ರತಿ ಗ್ರಾಂ ದರ 8,360 ರೂ. ಹಾಗೂ 9,120 ರೂ. ಇತ್ತು. ಎರಡೂ ದಿನ ದರಗಳು ಸ್ಥಿರವಾಗಿತ್ತು. ಇದೀಗ ದಿಢೀರನೆ ಚಿನ್ನದ ದರ ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ದರ ಪ್ರತಿ ಗ್ರಾಂಗೆ 103.90 ರೂಪಾಯಿ ಹಾಗೂ ಪ್ರತಿ ಕೆ.ಜಿಗೆ 1,03,900 ರೂಪಾಯಿ ಆಗಿದೆ.












Click it and Unblock the Notifications