ಇದಪ್ಪಾ ವರಸೆ: ಖಾತೆ ಸ್ಥಗಿತಗೊಳಿಸುವುದಕ್ಕೂ ಸ್ಟೇಟ್ ಬ್ಯಾಂಕ್ ಶುಲ್ಕ

Posted By:
Subscribe to Oneindia Kannada

ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಅದರ ಸಹವರ್ತಿ ಬ್ಯಾಂಕುಗಳ 'ಗ್ರಾಹಕರ ಗೋಳೋಯ್ಸಿಕೊಳ್ಳುವ' ಅಭಿಯಾನ ಮತ್ತೆ ಮುಂದುವರಿದಿದೆ. ಈ ಬಾರಿ ಖಾತೆ ಸ್ಥಗಿತಗೊಳಿಸುವುದಕ್ಕೂ ದುಬಾರಿ ಶುಲ್ಕ ಎಸ್ಬಿಐ ವಿಧಿಸಲಾರಂಭಿಸಿದೆ.

ಖಾತೆ ಸ್ಥಗಿತಗೊಳಿಸುವುದಕ್ಕೆ ಇತರ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೋಲಿಸಿದರೆ, ಸ್ಟೇಟ್ ಬ್ಯಾಂಕ್ ದುಪ್ಪಟ್ಟು ಶುಲ್ಕವನ್ನು ವಸೂಲಿ ಮಾಡುತ್ತಿದೆ. ಇದರ ಜೊತೆಗೆ ಜಿಎಸ್ಟಿ ಜಾರಿಗೆ ಬಂದ ನಂತರ ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ಶೇ. 18 ಶುಲ್ಕದ ಬರೆ ಬೇರೆ.

ಉಳಿತಾಯ ಖಾತೆ ಬಡ್ಡಿದರ ಕಡಿತಗೊಳಿಸಿ ಗ್ರಾಹಕರಿಗೆ ಎಸ್.ಬಿ.ಐ ಶಾಕ್

ಉಳಿತಾಯ ಖಾತೆಯ ಮೇಲಿನ ಬಡ್ಡಿದರ ಇಳಿಕೆ, ಸೇವಾ ಶುಲ್ಕದಲ್ಲಿ ಪರಿಷ್ಕರಣೆ, ಮಿನಿಮಮ್ ಬ್ಯಾಲನ್ಸ್ ಮುಂತಾದ ಹೊಸ ಪದ್ದತಿಗಳನ್ನು ಜಾರಿಗೆ ತಂದಿರುವ ಸ್ಟೇಟ್ ಬ್ಯಾಂಕ್, ಖಾತೆ ಸ್ಥಗಿತಗೊಳಿಸಲು 590 ರೂಪಾಯಿ (500 ರೂ ಶುಲ್ಕ, 90 ರೂಪಾಯಿ ಜಿಎಸ್ಟಿ) ವಿಧಿಸುತ್ತಿದೆ.

ಮೈಸೂರು ಬ್ಯಾಂಕ್ ಸೇರಿದಂತೆ ಐದು ಬ್ಯಾಂಕುಗಳು SBI ಜೊತೆ ವಿಲೀನಗೊಂಡ ನಂತರ ಈ ಹೊಸ ವಸೂಲಿ ಪದ್ದತಿ ಜಾರಿಗೆ ಬಂದಿದೆ. ಸಿಂಡಿಕೇಟ್, ಕೆನರಾ, ಆಕ್ಸಿಸ್ ಮುಂತಾದ ಬ್ಯಾಂಕುಗಳಿಗೆ ಹೋಲಿಸಿದರೆ ಸ್ಟೇಟ್ ಬ್ಯಾಂಕ್ ದುಪ್ಪಟ್ಟು ಶುಲ್ಕವನ್ನು ವಿಧಿಸುತ್ತಿದೆ ಎಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.

ಈ ರೀತಿಯ ಬ್ಯಾಂಕ್ ವ್ಯವಹಾರಗಳ ಬಗ್ಗೆ ಹದ್ದಿನ ಕಣ್ಣು, ತನಿಖೆ

ಕೆನರಾ ಬ್ಯಾಂಕ್ 200 ರೂಪಾಯಿ, ಸಿಂಡಿಕೇಟ್ ಬ್ಯಾಂಕ್ ರೂ. 100, ಆಕ್ಸಿಸ್ ಬ್ಯಾಂಕ್ ಸುಮಾರು 300 ರೂಪಾಯಿಯಷ್ಟು ಶುಲ್ಕವನ್ನು ಅಕೌಂಟ್ ಕ್ಲೋಸ್ ಮಾಡಲು ವಿಧಿಸುತ್ತಿದೆ. ಭಾರತೀಯ ಸ್ಟೇಟ್ ಬ್ಯಾಂಕಿನ ಇತ್ತೀಚಿನ ಕೆಲವೊಂದು ಪ್ರಮುಖ ನಿರ್ಧಾರಗಳು, ಮುಂದೆ ಓದಿ

ಶೇಕಡಾ 4ರಿಂದ ಶೇಕಡಾ 3.5ಕ್ಕೆ ಇಳಿಕೆ

ಶೇಕಡಾ 4ರಿಂದ ಶೇಕಡಾ 3.5ಕ್ಕೆ ಇಳಿಕೆ

ಉಳಿತಾಯ ಖಾತೆ ಮೇಲಿನ ಬಡ್ಡಿದರವನ್ನು ಸ್ಟೇಟ್ ಬ್ಯಾಂಕ್ ಶೇಕಡಾ 4ರಿಂದ ಶೇಕಡಾ 3.5ಕ್ಕೆ ಇಳಿಕೆ ಮಾಡಿತ್ತು. ಹೀಗಾಗಿ, 1 ಕೋಟಿ ರೂಪಾಯಿಗಿಂತ ಕಡಿಮೆ ಠೇವಣಿ ಇಟ್ಟ ಗ್ರಾಹಕರು ತಮ್ಮ ಉಳಿತಾಯ ಖಾತೆ ಮೇಲಿನ ಬಡ್ಡಿದರದಲ್ಲಿ ಶೇಕಡಾ 0.5ರಷ್ಟನ್ನು ಕಳೆದುಕೊಂಡಿದ್ದರು.

ವಿವಿಧ ರೀತಿಯ ಸೇವೆಯ ಮೇಲೆ ಸೇವಾ ತೆರಿಗೆ

ವಿವಿಧ ರೀತಿಯ ಸೇವೆಯ ಮೇಲೆ ಸೇವಾ ತೆರಿಗೆ

ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ ಬಿಐ) ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾಯಿಸುವ ಸೇವೆಗೆ ವಿಧಿಸಲಾಗುತ್ತಿದ್ದ ಶುಲ್ಕದಲ್ಲಿ ಇಳಿಕೆ. ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ ಫರ್ (ಎನ್ ಇಎಫ್ ಟಿ) ಹಾಗೂ ರಿಯಲ್ ಟೈಮ್ ಗ್ರಾಸ್ ಡಿಟೆಲ್ಮೆಂಟ್ (ಆರ್ ಟಿಜಿಎಸ್) ಮಾದರಿಯ ಫಂಡ್ ಟ್ರಾನ್ಸ್ ಫರ್ ಗಳ ಮೇಲಿನ ಶುಲ್ಕಗಳಲ್ಲಿ ಶೇ. 75ರಷ್ಟನ್ನು ಜುಲೈ 15ರಿಂದ ಜಾರಿಗೆ ಬರುವಂತೆ ಇಳಿಕೆ ಮಾಡಿತ್ತು.

10 ಚೆಕ್ ಗಳ ಚೆಕ್ ಬುಕ್ಕಿಗೆ ರೂ 30 ಜತೆಗೆ ಸೇವಾ ತೆರಿಗೆ

10 ಚೆಕ್ ಗಳ ಚೆಕ್ ಬುಕ್ಕಿಗೆ ರೂ 30 ಜತೆಗೆ ಸೇವಾ ತೆರಿಗೆ

ಜೂನ್ 1ರಿಂದ ಆರಂಭವಾಗಿ 10 ಚೆಕ್ ಗಳ ಚೆಕ್ ಬುಕ್ಕಿಗೆ ರೂ 30 ಜತೆಗೆ ಸೇವಾ ತೆರಿಗೆ. 25 ಚೆಕ್ ಗಳ ಚೆಕ್ ಬುಕ್ ಗೆ ರೂ. 75 + ಸೇವಾ ತೆರಿಗೆ * 50 ಚೆಕ್ ಗಳಿರುವ ಚೆಕ್ ಬುಕ್ಕಿಗೆ ರೂ. 150 + ಸೇವಾ ತೆರಿಗೆ.

ಬೇರೆ ಬ್ಯಾಂಕಿನ ಎಟಿಎಂ ಬಳಸಿದರೆ ಶುಲ್ಕ

ಬೇರೆ ಬ್ಯಾಂಕಿನ ಎಟಿಎಂ ಬಳಸಿದರೆ ಶುಲ್ಕ

ರೂಪೇ ಕಾರ್ಡ್ ಉಚಿತ, ಆಯಾ ಬ್ಯಾಂಕಿನ ಎಟಿಎಂಗಳನ್ನು ಬಳಸುವುದೂ ಸೇರಿ ತಿಂಗಳಿಗೆ 4 ಬಾರಿ ಉಚಿತವಾಗಿ ಹಣ ವಿದ್ ಡ್ರಾ, 4ಕ್ಕಿಂತ ಹೆಚ್ಚಿನ ಬಳಕೆಗೆ ಬೇರೆ ಬ್ಯಾಂಕಿನ ಎಟಿಎಂ ಬಳಸಿದರೆ ರೂ. 20 ಶುಲ್ಕ, ಎಸ್ಬಿಐನಲ್ಲೇ ಆದರೆ ರೂ. 10. ಶಾಖೆಯಲ್ಲಿ 4ಕ್ಕಿಂತ ಜಾಸ್ತಿ ಡ್ರಾ ಮಾಡಿದರೆ 50 ರೂಪಾಯಿ ಸೇವಾ ತೆರಿಗೆ.

ತ್ವರಿತ ಹಣ ವರ್ಗಾವಣೆ ಮೇಲೆ ಶುಲ್ಕ

ತ್ವರಿತ ಹಣ ವರ್ಗಾವಣೆ ಮೇಲೆ ಶುಲ್ಕ

INB, MB, UPI ಮತ್ತು USSD ಮೂಲಕ ತ್ವರಿತ ಹಣ ವರ್ಗಾವಣೆ ಮೇಲೆ ಶುಲ್ಕ. 1 ಲಕ್ಷದವರೆಗೆ ವರ್ಗಾವಣೆಗೆ ರೂ 5 ರೂಪಾಯಿ ಶುಲ್ಕ ಹಾಗೂ ಸೇವಾ ತೆರಿಗೆ, 1-2 ಲಕ್ಷಕ್ಕೆ ರೂ. 15 ಮತ್ತು ಸೇವಾ ತೆರಿಗೆ ಹಾಗೂ 5 ಲಕ್ಷಕ್ಕಿಂತ ಹೆಚ್ಚಿನ ವರ್ಗಾವಣೆಗೆ ರೂ. 25 ಶುಲ್ಕ + ಸೇವಾ ತೆರಿಗೆ.

ಮಿನಿಮಮ್ ಬ್ಯಾಲನ್ಸ್ ಹೊಂದಿರದ ಗ್ರಾಹಕರ ಮೇಲೆ ದಂಡ

ಮಿನಿಮಮ್ ಬ್ಯಾಲನ್ಸ್ ಹೊಂದಿರದ ಗ್ರಾಹಕರ ಮೇಲೆ ದಂಡ

ಮಿನಿಮಮ್ ಬ್ಯಾಲನ್ಸ್ ಹೊಂದಿರದ ಗ್ರಾಹಕರ ಮೇಲೆ ದಂಡ. ಏಪ್ರಿಲ್ ಒಂದರಿಂದ ಮೆಟ್ರೋ ಸಿಟಿಗಳಲ್ಲಿ 5 ಸಾವಿರ, ನಗರ ಪ್ರದೇಶಗಳಲ್ಲಿ 3 ಸಾವಿರ, ಪಟ್ಟಣ ಪ್ರದೇಶಗಳಲ್ಲಿ 2 ಸಾವಿರ ಮತ್ತು ಗ್ರಾಮೀಣ ಪ್ರದೇಶದ ಖಾತೆದಾರರು ಕನಿಷ್ಠ 1 ಸಾವಿರ ರೂಪಾಯಿಗಳನ್ನು ಖಾತೆಯಲ್ಲಿ ಕಡ್ಡಾಯವಾಗಿ ಹೊಂದಿರಬೇಕು. ಮಿನಿಮಮ್ ಬ್ಯಾಲನ್ಸ್ ಹೊಂದಿರದ ಖಾತೆಗಳಿಗೆ, ಕೊರತೆ ಇರುವ ಕನಿಷ್ಠ ಮೊತ್ತಕ್ಕೆ ಅನುಗುಣವಾಗಿ ಮೆಟ್ರೋ ಸಿಟಿಗಳಲ್ಲಿ ಕನಿಷ್ಠ ಬಾಕಿಗಿಂತ ಶೇ.75 ರಷ್ಟು ಹಣ ಕೊರತೆ ಇದ್ದರೆ 100 ರೂ, ಶೇ.50 ರಿಂದ 75ರಷ್ಟು ಕೊರತೆ ಇದ್ದರೆ 75 ರೂ, ಶೇ. 50 ರಷ್ಟು ಕೊರತೆಯಿದ್ದರೆ 50 ರೂಪಾಯಿ ದಂಡ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
State Bank of India peeling its customer to close the bank account. SBI is charging Rs. 590 to close the account, as per Deccan Herald report.
Please Wait while comments are loading...