Silver Price: ಬೆಳ್ಳಿ ದರ ₹3 ಲಕ್ಷ ದಾಟಿ ದಾಖಲೆ ಸೃಷ್ಟಿ, ಒಂದೇ ದಿನಕ್ಕೆ ಹೆಚ್ಚಾಗಿದ್ದೆಷ್ಟು?
ಬೆಂಗಳೂರು: ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಬೆಳ್ಳಿ ದರ ಸಾರ್ವಕಾಲಿಕ ದಾಖಲೆ ಬರೆದಿದೆ. ಒಂದೇ ದಿನಕ್ಕೆ 10,000 ರೂಪಾಯಿ ಏರಿಕೆ ಆಗುವ ಮೂಲಕ ಒಂದು ಕೆಜಿ ಬೆಳ್ಳಿ ದರವು ಸೋಮವಾರ (ಜನವರಿ 19) 3,00,000 ರೂಪಾಯಿ ದಾಟಿದೆ. ಅತೀ ವೇಗವಾಗಿ ದುಪ್ಪಟ್ಟು ದರ ಹೆಚ್ಚಿಸಿಕೊಂಡ ಕೀರ್ತಿ ಈ ಬಿಳಿ ಲೋಹಕ್ಕೆ ಸಲ್ಲುತ್ತದೆ. ಇಂದು ಬೆಳ್ಳಿ 1 ಕೆಜಿ ದರ 3.05 ಲಕ್ಷ ರೂಪಾಯಿ ಇದೆ.
ವಸ್ತುಗಳ ದರ ಹೆಚ್ಚಾದರೆ ಚಿನ್ನದ ಬೆಲೆ ಎನ್ನುವ ಕಾಲ ಹೋಗಿ, ಬೆಳ್ಳಿಯಷ್ಟ ದರ ಏರಿಕೆ ಎಂದು ಹೇಳಬಹುದು. ಅಷ್ಟರ ಮಟ್ಟಿಗೆ ಕಡಿಮೆ ಅವಧಿಯಲ್ಲಿ ಬೆಳ್ಳಿ ದರ ಹೆಚ್ಚಾಗಿದೆ. ಕಳೆದ 13 ತಿಂಗಳಲ್ಲಿ 210% ಬೆಳ್ಳಿ ದರದಲ್ಲಿ ಏರಿಕೆ ಆಗಿದೆ. ಇಂದಿನ ದರ ಏರಿಕೆ ಸೇರಿ ಇದರ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ.

ಒಂದು ತಿಂಗಳಲ್ಲಿ 1 ಲಕ್ಷ ರೂಪಾಯಿ ಏರಿಕೆ
ಕಳೆದ ತಿಂಗಳೂ 2025ರ ಡಿಸೆಂಬರ್ 19 ರಂದು 2,09,000 ರೂಪಾಯಿ ಇದ್ದದ್ದು, ಅಲ್ಲಿಂದ ಒಂದೇ ತಿಂಗಳಿನಲ್ಲಿ ಅಂದರೆ ಜನವರಿ 19ರಲ್ಲಿ 3,05,000 ರೂಪಾಯಿಗೆ ಹೆಚ್ಚಾಗಿದೆ. ಅಲ್ಲಿಂದ ನಿತ್ಯ ಐದು, ಹತ್ತು ಕೆಲವೊಮ್ಮೆ ಗರಿಷ್ಠ ದರ 15,000 ರೂಪಾಯಿವರೆಗೂ ದರ ಏರಿಕೆ ಆಗಿದೆ. ಇಂದು ಜನವರಿ 19ರಂದು ಒಂದೇ ದಿನ 1ಕೆಜಿಗೆ 10,000 ರೂಪಾಯಿ ಏರಿಕೆ ಕಾಣುವ ಮೂಲಕ ಬೆಳ್ಳಿ ದರ ಮೂರು ಲಕ್ಷ ರೂಪಾಯಿ ದಾಟಿ ಇತಿಹಾಸ ಸೃಷ್ಟಿಸಿದೆ.
ಜನವರಿ 12ರಿಂದ ಜನವರಿ 19 ಇಂದು ಸೋಮವಾರ ವರೆಗೆ ಕೇವಲ ಎಂಟೇ ದಿನಗಳಲ್ಲಿ ಬೆಳ್ಳಿ ದರವು 48,000 ರೂಪಾಯಿ ಏರಿಕೆ ಆಗಿದೆ. ಬೆಳ್ಳಿಯು ಕೈಗಾರಿಕೆ, ಚಿನ್ನಾಭರಣ, ಹೂಡಿಕೆ ಹಾಗೂ ಇತರ ಉದ್ದೇಶಗಳಿಗಾಗಿ ಹೆಚ್ಚಾಗಿ ಬಳಕೆ ಆಗುತ್ತಿದೆ. ಕೈಗಾರಿಕೆ ವಿಚಾರದಲ್ಲಿ ಅತ್ಯಧಿಕ ಬಳಕೆ ಆಗುತ್ತಿದೆ ಎಂಬ ಮಾಹಿತಿ ಇದೆ. ಬೇಡಿಕೆ ಹೆಚ್ಚಾಗುತ್ತಿದ್ದು, ಪೂರೈಕೆ ಕಡಿಮೆ ಆಗಿದೆ. ವಿದೇಶಗಳಲ್ಲಿ ಹೊಸದಾಗಿ ಗಣಿಗಾರಿಕೆ ಶುರುವಾಗಿಲ್ಲ. ಹಾಲಿ ಗಣಿಗಳಲ್ಲಿ ಬೆಳ್ಳಿ ಉತ್ಪಾದನೆ ಕಡಿಮೆ ಆಗಿದೆ. ಇದು ಪೂರೈಕೆ ಮೇಲೆ ಪರಿಣಾಮ ಉಂಟು ಮಾಡಿದೆ. ಹೀಗಾಗಿ ಬೆಳ್ಳಿ ದರ ದಿನದಿಂದ ದಿನಕ್ಕೆ ವ್ಯಾಪಕವಾಗಿ ಏರಿಕೆ ಆಗುತ್ತಿದೆ.
2026 ರಲ್ಲಿ ಬೆಳ್ಳಿ ಸ್ಥಿತಿ ಮುನ್ಸೂಚನೆ
ನಿರಂತರವಾಗಿ ಏರಿಕೆ ಆಗುತ್ತಿರುವ ಬೆಳ್ಳಿ ದರ ಗಗನ ಮುಟ್ಟಿದೆ. ಈ ವರ್ಷವು ಬೆಳ್ಳಿ ಬೆಲೆ ಹೆಚ್ಚಳಕ್ಕೆ ನಿರ್ಣಾಯಕವಾಗಿದೆ. ಉತ್ಪಾದನೆ ಕಡಿಮೆ, ಪೂರೈಕೆ ಕಡಿಮೆ ಹಿನ್ನೆಲೆಯಲ್ಲಿ ಬೇಡಿಕೆ ಹಚ್ಚಾಗುವುದು ಖಚಿತವಾಗಿದೆ. ಆದರೆ 2026ರಲ್ಲಿ ಬೆಳ್ಳಿಯ ಲಭ್ಯತೆಯಲ್ಲಿ ಕೊರತೆ ಉಂಟಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಬೇಡಿಕೆಯಷ್ಟು ಪೂರೈಕೆ ಆಗದ ಹಿನ್ನೆಲೆಯಲ್ಲಿ ದರ ಮತ್ತಷ್ಟು ಏರಿಕೆ ಆಗಲಿದೆ. ಚಿನ್ನ ಲೋಹದ ಅಲಭ್ಯತೆ ಈ ವರ್ಷದ ಕಾಡಲಿದೆ ಎಂದು ತಿಳಿಸಿದ್ದಾರೆ.
ಇಂದಿನ ಬೆಳ್ಳಿ ಗ್ರಾಂವಾರು ದರ ವಿವರ
ಬೆಳ್ಳಿ ದರವು ಇಂದು ಒಂದು ಗ್ರಾಂಗೆ 305 ರೂಪಾಯಿ, 08 ಗ್ರಾಂ ದರಕ್ಕೆ 2440 ರೂಪಾಯಿ, 10 ಗ್ರಾಂ ಬೆಳ್ಳಿಗೆ 3050 ರೂಪಾಯಿ, 100 ಗ್ರಾಂ ಚಿನ್ನಕ್ಕೆ 30,500 ರೂಪಾಯಿ ಹಾಗೂ 1000 ಗ್ರಾಂಗೆ 3,05,000 ರೂಪಾಯಿಗೆ ಇದೆ. ಇನ್ನೂ ಚಿನ್ನದ 22 ಕ್ಯಾರಟ್ 10 ಗ್ರಾಂ ದರ ಇಂದು 1, 34,050 ರೂಪಾಯಿ ಇದೆ.
-
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ?












Click it and Unblock the Notifications