SBI Big Shock: ಆಗಸ್ಟ್ 15ರಿಂದಲೇ ಎಸ್‌ಬಿಐ ಗ್ರಾಹಕರಿಗೆ ಬಿಗ್ ಶಾಕ್
SBI Big Shock: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸುಮಾರು 40,00,00,000 ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಚಿಲ್ಲರೆ ಗ್ರಾಹಕರಿಗೆ ತಕ್ಷಣದ ಪಾವತಿ ಸೇವೆ ವಹಿವಾಟು ಶುಲ್ಕಗಳನ್ನು ಆಗಸ್ಟ್ 15ರಿಂದ ಪರಿಷ್ಕರಣೆ ಮಾಡಲಿದ್ದು, ಇದರಿಂದ ಗ್ರಾಹಕರ ಮೇಲೆ ಭಾರೀ ಹೊರೆ ಬೀಳಲಿದೆ. ಹಾಗಾದ್ರೆ ಎಷ್ಟು ವಹಿವಾಟು ಮಾಡಿದರೆ, ಎಷ್ಟು ಶುಲ್ಕ ವಿಧಿಲಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತದ ಅತೀ ದೊಡ್ಡ ಬ್ಯಾಂಕ್‌ಗಳಲ್ಲಿ ಎಸ್‌ಬಿಐ ಕೂಡ ಒಂದಾಗಿದ್ದು, ಇದು ಇದೀಗ ವಹಿವಾಟುಗಳ ಮೇಲಿನ ಶುಲ್ಕಗಳನ್ನು ಹೆಚ್ಚಳ ಮಾಡುವ ಮೂಲಕ ಗ್ರಾಹಕರಿಗೆ ಬಿಗ್ ಶಾಕ್ ನೀಡಲು ಮುಂದಾಗಿದೆ. ಹಾಗಾದ್ರೆ ಎಷ್ಟು ವಹಿವಾಟಿಗೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ಕಣ್ಣಾಡಿಸಿ.

ವಹಿವಾಟು ಶುಲ್ಕಗಳಲ್ಲಿನ ಬದಲಾವಣೆಗಳು ಕಾರ್ಪೊರೇಟ್ ಗ್ರಾಹಕರಿಗೆ, ಸೆಪ್ಟೆಂಬರ್ 8ರಿಂದ ಜಾರಿಗೆ ಬರಲಿವೆ. ಈ ಪರಿಷ್ಕರಣೆಗಳು ಸುಮಾರು 40,00,00,000 ಕೋಟಿ ಎಸ್‌ಬಿಐ ಗ್ರಾಹಕರ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಈ ಬದಲಾವಣೆ ಪ್ರಕಾರ, 25,000 ರೂಪಾಯಿವರೆಗಿನ ವಹಿವಾಟುಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಇದರ ಮೇಲಿನ ವರ್ಗಾವಣೆಗಳಿಗೆ ಶುಲ್ಕಗಳನ್ನು ಅನ್ವಯ ಆಗಲಿವೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಇಂಟರ್‌ನೆಟ್ ಬ್ಯಾಂಕಿಂಗ್ ಅಥವಾ YONO ಅಪ್ಲಿಕೇಶನ್ ಬಳಕೆ ಮಾಡುವ ಚಿಲ್ಲರೆ ಗ್ರಾಹಕರಿಗೆ, 25,000 ರೂಪಾಯಿವರೆಗಿನ ವಹಿವಾಟುಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. 25,000 ರೂಪಾಯಿಗಿಂತ ಹೆಚ್ಚಿನ ವರ್ಗಾವಣೆಗಳಿಗೆ, ಶುಲ್ಕಗಳು ಅನ್ವಯಿಸುತ್ತವೆ ಎಂದು ತಿಳಿದುಬಂದಿದೆ.
ವಾಹಿವಾಟು ಶುಲ್ಕದ ವಿವರ
* 25,000 ರೂಪಾಯಿಯಿಂದ 1,00,000 ರೂಪಾಯಿಗಳವರೆಗೆ: ರೂ 2 + ಜಿಎಸ್‌ಟಿ
* 1,00,000 ರೂಪಾಗಳಿಂದ 2,00,000 ರೂಪಾಯಿಗಳವರೆಗೆ: ರೂ. 6 + ಜಿಎಸ್‌ಟಿ
* 2,00,000 ರೂಪಾಯಿಯಿಂದ 5,00,000 ರೂಪಾಯಿಗಳವರೆಗೆ: ರೂ. 10 + ಜಿಎಸ್‌ಟಿ
ಶಾಖೆಯ ವಹಿವಾಟುಗಳ ವಿಭಿನ್ನ ನಿಯಮಗಳು: ನೀವು ಎಸ್‌ಬಿಐ ಶಾಖೆಯಲ್ಲಿ ವಹಿವಾಟು ನಡೆಸಿದರೆ, 1,000 ರೂಪಾಯಿವರೆಗಿನ ಮೊತ್ತಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಹೆಚ್ಚಿನ ಮೊತ್ತಕ್ಕೆ, ಶುಲ್ಕಗಳನ್ನು ವಿಧಿಸಲಾಗುತ್ತದೆ. ಹಾಗಾದ್ರೆ, ಎಷ್ಟಕ್ಕೆ ಎಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವಹಿವಾಟುಗಳ ವಿಭಿನ್ನ ನಿಯಮಗಳು
* 1,000 ರೂಪಾಯಿಗಳಿಂದ 10,000 ರೂಪಾಯಿಗಳವರೆಗೆ: ರೂ. 2 + ಜಿಎಸ್‌ಟಿ
* 10,000 ರೂಪಾಯಿಗಳಿಂದ 25,000 ರೂಪಾಯಿಗಳವರೆಗೆ: ರೂ. 4 + ಜಿಎಸ್‌ಟಿ
* 25,000 ರೂಪಾಯಿಗಳಿಂದ 1,00,000 ರೂಪಾಯಿಗಳವರೆಗೆ: ರೂ. 4 + ಜಿಎಸ್‌ಟಿ
* 1,00,000 ರೂಪಾಯಿಗಳಿಂದ 2,00,000 ರೂಪಾಯಿಗಳವರೆಗೆ: ರೂ. 12 + ಜಿಎಸ್‌ಟಿ
* 2,00,000 ರೂಪಾಯಿಗಳಿಂದ 5,00,000 ರೂಪಾಯಿಗಳವರೆಗೆ: ರೂ. 20 + ಜಿಎಸ್‌ಟಿ
ನಿರ್ದಿಷ್ಟ ಖಾತೆದಾರರಿಗೆ ವಿನಾಯಿತಿ: ಎಸ್‌ಬಿಐ ಆನ್‌ಲೈನ್ ವಿಧಾನಗಳ ಮೂಲಕ ವಹಿವಾಟು ನಡೆಸುವಾಗ ಕೆಲ ವಿಶೇಷ ವೇತನ ಖಾತೆಗಳಿಗೆ IMPS ಶುಲ್ಕಗಳನ್ನು ಮನ್ನಾ ಮಾಡಿದೆ. ಇವುಗಳಲ್ಲಿ ರಕ್ಷಣಾ ವೇತನ ಪ್ಯಾಕೇಜ್, ಪೊಲೀಸ್ ವೇತನ ಪ್ಯಾಕೇಜ್, ಕೇಂದ್ರ ಸರ್ಕಾರದ ವೇತನ ಪ್ಯಾಕೇಜ್ ಮತ್ತು ಶೌರ್ಯ ಕುಟುಂಬ ಪಿಂಚಣಿ ಖಾತೆಗಳು ಸೇರಿವೆ.
ಸೆಪ್ಟೆಂಬರ್ 8 ರಿಂದ ಕಾರ್ಪೊರೇಟ್ ಗ್ರಾಹಕರಿಗೆ ಅದೇ ಪರಿಷ್ಕೃತ ಶುಲ್ಕಗಳು ಅನ್ವಯ ಆಗುತ್ತವೆ. ಇನ್ನು ಸರ್ಕಾರಿ ಇಲಾಖೆಗಳು ಹಾಗೂ ಕಾನೂನು ಘಟಕಗಳ ಜೊತೆಗೆ ಚಿನ್ನ, ವಜ್ರ, ಪ್ಲಾಟಿನಂ ಮತ್ತು ರೋಡಿಯಂನಂತಹ ಕೆಲವು ಚಾಲ್ತಿ ಖಾತೆಗಳನ್ನು ಆನ್‌ಲೈನ್ ವಹಿವಾಟುಗಳಿಗೆ IMPS ಶುಲ್ಕಗಳಿಂದ ವಿನಾಯಿತಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.












Click it and Unblock the Notifications