ಎಸ್ ಬಿಐನ ನಿವ್ವಳ ಲಾಭಕ್ಕಿಂತ ಗ್ರಾಹಕರಿಂದ ವಸೂಲಾದ ದಂಡ ಮೊತ್ತ ಹೆಚ್ಚು
Recommended Video

ಬೆಂಗಳೂರು, ಜನವರಿ 4: ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ನೋಡಿಕೊಂಡಿದ್ದೀರಾ? ಕನಿಷ್ಠ ಮೊತ್ತವನ್ನು ಖಾತೆಯಲ್ಲಿ ಇಟ್ಟುಕೊಳ್ಳದ ಗ್ರಾಹಕರಿಂದ ದಂಡ ರೂಪದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಗ್ರಹಿಸಿರುವ ಮೊತ್ತ ಎಷ್ಟು ಗೊತ್ತಾ? 1771 ಕೋಟಿ ರುಪಾಯಿ.
ಈ ಮೊತ್ತ ಸಂಗ್ರಹಿಸಿರುವುದು 2017ರ ಏಪ್ರಿಲ್ ಹಾಗೂ ನವೆಂಬರ್ ಮಧ್ಯೆ. ಕನಿಷ್ಠ ಮೊತ್ತವನ್ನು ಯಾವ ಗ್ರಾಹಕರು ಖಾತೆಯಲ್ಲಿ ಇಟ್ಟಿಲ್ಲವೋ ಅಂಥವರಿಂದ ವಸೂಲಿ ಮಾಡಲಾಗಿದೆ. ಇನ್ನೊಂದು ತಮಾಷೆ ಗೊತ್ತಾ? ಜುಲೈ- ಸೆಪ್ಟೆಂಬರ್ ಮಧ್ಯದ ಬ್ಯಾಂಕ್ ನ ನಿವ್ವಳ ಲಾಭ 1581.55 ಕೋಟಿಯಾದರೆ, ದಂಡದ ಮೂಲಕ ಸಂಗ್ರಹಿಸಿದ ಮೊತ್ತ ಅದಕ್ಕೂ ಹೆಚ್ಚಿದೆ.

ಇನ್ನು ಏಪ್ರಿಲ್- ಸೆಪ್ಟೆಂಬರ್ ಮಧ್ಯದ ಎಸ್ ಬಿಐ ನಿವ್ವಳ ಲಾಭ 3586 ಕೋಟಿ ರುಪಾಯಿ ಇದ್ದರೆ, ಗ್ರಾಹಕರಿಂದ ವಸೂಲು ಮಾಡಿದ ದಂಡದ ಮೊತ್ತು ಅದರ ಅರ್ಧಕ್ಕಿಂತ ಹೆಚ್ಚಿದೆ. ಕಳೆದ ಐದು ವರ್ಷಗಳಿಂದ ಈ ರೀತಿಯ ದಂಡ ಹಾಕದ ಬ್ಯಾಂಕ್ ಮತ್ತೊಮ್ಮೆ ಇದನ್ನು ಪರಿಚಯಿಸಿದೆ.
ತಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತ ಶೇ ಎಪ್ಪತ್ತೈದಕ್ಕಿಂತ ಕಡಿಮೆ ಇಟ್ಟ ಗ್ರಾಹಕರ ಬಳಿ ನೂರು ರುಪಾಯಿ ಜತೆಗೆ ತೆರಿಗೆ ವಸೂಲು ಮಾಡುತ್ತದೆ ಬ್ಯಾಂಕ್. ಅದೇ ರೀತಿ ಐವತ್ತು ಹಾಗೂ ಇಪ್ಪತ್ತೈದು ರುಪಾಯಿ ಜತೆಗೆ ತೆರಿಗೆ ವಸೂಲು ಮಾಡುವುದೂ ಉಂಟು. ಒಟ್ಟಿನಲ್ಲಿ ಆರ್ಥಿಕ ಶಿಸ್ತು ರೂಢಿಸಿಕೊಳ್ಳದಿದ್ದರೆ ಕಣ್ಣಿಗೆ ಕಾಣದಂತೆಯೇ ಕಾಸಿಗೆ ಕತ್ತರಿ ಬೀಳುತ್ತದೆ.












Click it and Unblock the Notifications