• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಪೋ, ರಿವರ್ಸ್ ರೆಪೋ ದರದಲ್ಲಿ ಬದಲಾವಣೆ ಇಲ್ಲ: ಆರ್‌ಬಿಐ ಗವರ್ನರ್

|
Google Oneindia Kannada News

ನವದೆಹಲಿ, ಆಗಸ್ಟ್‌ 06: ಕೊರೊನಾವೈರಸ್ ಪ್ರಕರಣಗಳು ಗಗನಕ್ಕೇರುತ್ತಿರುವುದರಿಂದ ಭಾರತದ ಹದಗೆಟ್ಟಿರುವ ಆರ್ಥಿಕ ದೃಷ್ಟಿಕೋನವು ಹಣದುಬ್ಬರ ಒತ್ತಡಗಳ ನಡುವೆಯೂ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಗುರುವಾರ ತನ್ನ ನೀತಿ ಪರಿಶೀಲನೆ ಮಾಡಿದ್ದು, ರೆಪೋ ದರ, ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಹಾಗೆಯೇ ಉಳಿಸಿಕೊಂಡಿದೆ.

ರೆಪೋ ದರದಲ್ಲಿ ಸದ್ಯ ಇರುವ ಶೇಕಡಾ 4ರಷ್ಟು ದರವನ್ನು ಮುಂದುವರಿಸಿದ್ದು, ರಿವರ್ಸ್ ರೆಪೋ ದರದಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ. ಸದ್ಯ ಇರುವ ರಿವರ್ಸ್ ರೆಪೋ ರೇಟ್ ಶೇಕಡಾ 3.3ರಷ್ಟು ಮುಂದುವರಿಕೆಯಾಗಿದೆ.

ಕಡಿಮೆ ಹೂಡಿಕೆಯ ದರ್ಜೆಯ ಬಾಂಡ್‌ಗಳಿಗೆ ಸಹ, ಹರಡುವಿಕೆಗಳು ಗಮನಾರ್ಹವಾಗಿ ಕಡಿಮೆಯಾಗಿದೆ. ವರ್ಷದ ಮೊದಲಾರ್ಧದಲ್ಲಿ ಜಿಡಿಪಿ ಬೆಳವಣಿಗೆಯು ಸಂಕೋಚನ ವಲಯದಲ್ಲಿ ಉಳಿಯುತ್ತದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.

ಇದರ ಜೊತೆಗೆ 2020-21ನೇ ಸಾಲಿನಲ್ಲಿ, ಜಿಡಿಪಿ ಬೆಳವಣಿಗೆ ನಕಾರಾತ್ಮಕವಾಗಿರುತ್ತದೆ ಎಂದು ಅಂದಾಜಿಸಲಾಗಿದ್ದು, ನಂತರ ಚೇತರಿಕೆ ಹಾದಿ ಹಿಡಿಯಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

English summary
Repo rate remains unchanged at 4% and Reverse repo rate also remains unchanged at 3.3% said RBI Governor Shaktikanta Das.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X