ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Google I/O 2022 ಹೈಲೈಟ್ಸ್: ಪಿಕ್ಸೆಲ್ 7, ಆಂಡ್ರಾಯ್ಡ್ 13, ಪಾಸ್‌ವರ್ಡ್ ಮುಕ್ತ ತಂತ್ರಜ್ಞಾನ

|
Google Oneindia Kannada News

ಮೇ 11,2022ರಂದು ಗೂಗಲ್ ಸಂಸ್ಥೆಯ ಕಾರ್ಯಕ್ರಮದಲ್ಲಿ ಕೆಲ ಹೊಸ ಉತ್ಪನ್ನ ಮತ್ತು ಸೇವೆಗಳನ್ನು ಅನಾವರಣಗೊಳಿಸಲಾಗಿದೆ. ಗೂಗಲ್‌ನ ಸದ್ಯೋಭವಿಷ್ಯದ ಉತ್ಪನ್ನಗಳ ಝಲಕ್ ಅನ್ನೂ ಕೊಡಲಾಗಿದೆ. ಗೂಗಲ್ ಪಿಕ್ಸೆಲ್ 6A, ಪಿಕ್ಸೆಲ್ ವಾಚ್ (Google Pixel Watch) ಮೊದಲಾದ ಉತ್ಪನ್ನಗಳು ಬಿಡುಗಡೆ ಆಗಿವೆ. ಆ್ಯಪಲ್‌ಗೆ ಸೆಡ್ಡು ಹೊಡೆಯುವ ಪಿಕ್ಸೆಲ್ ಬಡ್ಸ್ ಪ್ರೋ (Pixel Buds Pro) ಅನಾವರಣಗೊಂಡಿದೆ. ಹಾಗೆಯೇ, ಗೂಗಲ್ ಪಿಕ್ಸೆಲ್ 7 ಮುಂದಿನ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಅದರ ಪ್ರಿವ್ಯೂ ಕೊಡಲಾಗಿದೆ.

ಗೂಗಲ್ ಮ್ಯಾಪ್‌ಗೆ ಇನ್ನಷ್ಟು ಉತ್ತಮ ಫೀಚರ್ಸ್ ಸೇರಿಸಲಾಗದೆ. ನಿನ್ನೆ ಮೊದಲ ದಿನ ಮಾತನಾಡಿದ ಗೂಗಲ್ ಸಿಇಒ ಸುಂದರ್ ಪಿಚೈ, ''ಜನರ ಅನುಭವದ ಆಧಾರದ ಮೇಲೆ ಇನ್ನಷ್ಟು ಉತ್ತಮ ಸೇವೆಗಳನ್ನು ಒದಗಿಸುವ ಉದ್ದೇಶ ಕಂಪನಿಗೆ ಇದೆ,'' ಎಂದು ಹೇಳಿದ್ದಾರೆ. ಅಂತೆಯೇ, ಗೂಗಲ್ ಸೇವೆಗಳನ್ನು ಬಳಸುವ ಜನರಿಗೆ ಸಾಮಾನ್ಯವಾಗಿ ಇರುವ ಸಮಸ್ಯೆಗಳು, ಬೇಡಿಕೆಗಳು ಮತ್ತು ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಹೊಸ ಫೀಚರ್‌ಗಳ ಅಭಿವೃದ್ಧಿಯತ್ತ ಗೂಗಲ್ ಗಮನ ಕೊಟ್ಟಿದೆ.

ವಾಟ್ಸಾಪ್‌ಗೆ ಹೊಸ ಫೀಚರ್; ಗ್ರೂಪ್‌ಗೆ ಹೆಚ್ಚು ಜನರು, ರಿಯಾಕ್ಷನ್ಸ್, ದೊಡ್ಡ ಫೈಲ್ವಾಟ್ಸಾಪ್‌ಗೆ ಹೊಸ ಫೀಚರ್; ಗ್ರೂಪ್‌ಗೆ ಹೆಚ್ಚು ಜನರು, ರಿಯಾಕ್ಷನ್ಸ್, ದೊಡ್ಡ ಫೈಲ್

ಗೂಗಲ್ ಮ್ಯಾಪ್ ಇನ್ನಷ್ಟು ಅಪ್‌ಗ್ರೇಡ್

ಗೂಗಲ್ ಮ್ಯಾಪ್ ಇನ್ನಷ್ಟು ಅಪ್‌ಗ್ರೇಡ್

ಗೂಗಲ್ ಮ್ಯಾಪ್ ಈಗ ಅತಿ ಸಾಮಾನ್ಯವಾಗಿ ಬಳಕೆಯಾಗುವ ಗೂಗಲ್ ಆ್ಯಪ್‌ಗಳಲ್ಲಿ ಒಂದೆನಿಸಿದೆ. 3ಡಿ ಮ್ಯಾಪಿಂಗ್ ತಂತ್ರಜ್ಞಾನವನ್ನು ಇನ್ನಷ್ಟು ಸುಧಾರಣೆಗೊಳಿಸಲಾಗಿದೆ. ಇದರಿಂದ ನಿಮ್ಮ ಪ್ರಯಾಣ ಅಥವಾ ಓಟಾಟಕ್ಕೆ ಇನ್ನಷ್ಟು ಸಹಾಯವಾಗುತ್ತದೆ. ಇಮ್ಮರ್ಸಿವ್ ವ್ಯೂ ಎಂಬ ಫೀಚರ್‌ನಲ್ಲಿ ಹವಾಮಾನ, ಟ್ರಾಫಿಕ್ ದಟ್ಟನೆ, ರೆಸ್ಟೋರೆಂಟ್ ಒಳಗಿನ ವಾತಾವರಣ ಇತ್ಯಾದಿ ಅಂಶಗಳಿವೆ. ಭಾರತದಲ್ಲಿ ಗೂಗಲ್ ಮ್ಯಾಪ್ ಅಪ್ಲಿಕೇಶನ್‌ನಲ್ಲಿ ಕಟ್ಟಡಗಳನ್ನ ಮ್ಯಾಪ್ ಮಾಡಬಹುದು.

ಗೂಗಲ್ ಫಿಕ್ಸೆಲ್ 6ಎ:

ಗೂಗಲ್ ಫಿಕ್ಸೆಲ್ 6ಎ:

ಗೂಗಲ್ ತನ್ನ ಹೊಸ ಸ್ಮಾರ್ಟ್‌ಫೋನ್ ಪಿಕ್ಸೆಲ್ 6ಎ ಅನ್ನು ಅನಾವರಣಗೊಳಿಸಿದೆ. 6.1 ಅಂಗುಲ ಇರುವ ಈ ಫೋನ್‌ನಲ್ಲಿ 12.2 ಎಂಪಿ ಪ್ರೈಮರಿ ಕ್ಯಾಮೆರಾ ಮತ್ತು 12ಎಂಪಿ ಅಲ್ಟ್ರಾ-ವೈಡ್ ಕ್ಯಾಮೆರಾ ಇದೆ. ಇದರ ಬೆಲೆ ಅಮೆರಿಕದಲ್ಲಿ 499 ಡಾಲರ್ ನಿಗದಿ ಮಾಡಲಾಗಿದೆ. ಭಾರತದಲ್ಲಿ ಎಷ್ಟು ಬೆಲೆಗೆ ಬಿಡುಗಡೆ ಆಗುತ್ತದೆ ಗೊತ್ತಾಗಿಲ್ಲ. ಅಮೆರಿಕದಲ್ಲಿ ನಿಗದಿ ಮಾಡಲಾದ ದರವನ್ನು ಭಾರತದ ಕರೆನ್ಸಿಗೆ ಪರಿವರ್ತಿಸಿದರೆ 35000 ರೂ ಆಗುತ್ತದೆ.

ಗೂಗಲ್ ಪಿಕ್ಸಲ್ 7 ಮತ್ತು ಪಿಕ್ಸೆಲ್ ಟ್ಯಾಬ್ಲೆಟ್:

ಗೂಗಲ್ ಪಿಕ್ಸಲ್ 7 ಮತ್ತು ಪಿಕ್ಸೆಲ್ ಟ್ಯಾಬ್ಲೆಟ್:

ಗೂಗಲ್‌ನ ಬಹುನಿರೀಕ್ಷೆಯ ಪಿಕ್ಸೆಲ್ 7 ಸರಣಿಯ ಸ್ಮಾರ್ಟ್‌ಫೋನ್ ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಇದನ್ನು ಖಚಿಪಡಿಸಲಾಗಿದೆ. ಈ ಹೊಸ ಫೋನ್‌ನಲ್ಲಿ ಆಂಡ್ರಾಯ್ಡ್ 13 ತಂತ್ರಾಂಶ ಇರಲಿದ್ದು, ಕ್ಯಾಮೆರಾ ವಿನ್ಯಾಸವೇ ವಿಭಿನ್ನವಾಗಿರಲಿದೆ. ಇದರ ಜೊತೆಗೆ ಗೂಗಲ್ ಪಿಕ್ಸೆಲ್ ಟ್ಯಾಬ್ಲೆಟ್‌ (Google Pixel Tablet) ಮೊದಲ ನೋಟವನ್ನೂ ಇದೇ ವೇಳೆ ಅನಾವರಣಗೊಳಿಸಲಾಯಿತು.

ಆಂಡ್ರಾಯ್ಡ್ 13:

ಆಂಡ್ರಾಯ್ಡ್ 13:

ಗೂಗಲ್‌ನ ಹೊಚ್ಚಹೊಸ ತಂತ್ರಾಂಶ ಆಂಡ್ರಾಯ್ಡ್ 13 ಸದ್ಯದಲ್ಲೇ ಬಿಡುಗಡೆ ಆಗಲಿದೆ. ಇದರಲ್ಲಿ ಭದ್ರತೆ ಮತ್ತು ಗೌಪ್ಯತೆಗೆ ಹೆಚ್ಚು ಒತ್ತುಕೊಡುವುದರ ಜೊತೆಗೆ ಹಲವು ಹೊಸ ಫೀಚರ್‌ಗಳನ್ನು ಅಡಕಗೊಳಿಸಲಾಗಿದೆ. ದೊಡ್ಡ ಪರದೆಯ ಸಾಧನಗಳು ಮತ್ತು ಮಡಚಬಲ್ಲ ಸಾಧನಗಳಲ್ಲಿ ಕಾರ್ಯವಹಿಸಲು ಅನುವಾಗುವಂತೆ ಆಪರೇಟಿಂಗ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಪಿಕ್ಸೆಲ್ ವಾಚ್:

ಪಿಕ್ಸೆಲ್ ವಾಚ್:

ಆ್ಯಪಲ್ ಮೊದಲಾದ ಕಂಪನಿಗಳು ಪ್ರಾಬಲ್ಯ ಮೆರೆಯುತ್ತಿರುವ ಸ್ಮಾರ್ಟ್ ವಾಚ್ ಕ್ಷೇತ್ರಕ್ಕೆ ಗೂಗಲ್ ಲಗ್ಗೆ ಹಾಕಲಿದೆ. ಪಿಕ್ಸೆಲ್ ವಾಚ್, ಗೂಗಲ್‌ನಿಂದ ಬಿಡಗುಡೆ ಆಗುತ್ತಿರುವ ಮೊದಲ ಸ್ಮಾರ್ಟ್ ವಾಚ್ ಆಗಿದೆ. ಪಿಕ್ಸೆಲ್ 7 ಸ್ಮಾರ್ಟ್‌ಫೋನ್ ಬಿಡುಗಡೆ ವೇಳೆಯೇ ಸ್ಮಾರ್ಟ್ ವಾಚ್ ಕೂಡ ಮಾರುಕಟ್ಟೆಗೆ ಬರಲಿದೆ.

ಗೂಗಲ್ ಪಿಕ್ಸೆಲ್ ಬಡ್ಸ್ ಪ್ರೋ:

ಗೂಗಲ್ ಪಿಕ್ಸೆಲ್ ಬಡ್ಸ್ ಪ್ರೋ:

ಆ್ಯಪಲ್‌ನ ಏರ್‌ಪಾಡ್ಸ್‌ಗೆ (Apple Air-pods) ಪ್ರತಿಸ್ಪರ್ಧೆಯಾಗಿ ಗೂಗಲ್ ಸಂಸ್ಥೆ ಪಿಕ್ಸೆಲ್ ಬಡ್ಸ್ ಪ್ರೋ ಆಡಿಯೋ ಸಾಧನವನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 199 ಡಾಲರ್ (ಸುಮಾರು 15 ಸಾವಿರ ರೂಪಾಯಿ). ಇದರಲ್ಲಿ ಗೂಗಲ್ ಅಸಿಸ್ಟೆಂಟ್, ಫೈಂಡ್ ಮೈ ಡಿವೈಸ್ ಆ್ಯಪ್‌ಗಳು ಅಳವಡಿಕೆಯಾಗಿರುತ್ತದೆ.

ಪಾಸ್‌ವರ್ಡ್ ರಹಿತ ತಂತ್ರಜ್ಞಾನ

ಪಾಸ್‌ವರ್ಡ್ ರಹಿತ ತಂತ್ರಜ್ಞಾನ

ಪಾಸ್‌ವರ್ಡ್ ರಹಿತ ತಂತ್ರಜ್ಞಾನವನ್ನು (Password-free Technology) ರಚಿಸುವ ಹಾದಿಯಲ್ಲಿ ಗೂಗಲ್ ಇದೆ. ವಂಚನೆಗೊಳಗಾಗುವ ಅಪಾಯವನ್ನು ತಪ್ಪಿಸಲು ಎರಡು ಎಳೆಯ ಭದ್ರತಾ ವ್ಯವಸ್ಥೆಯನ್ನು (Two factor authentication) ಎಲ್ಲಾ ಬಳಕೆದಾರರಿಗೂ ಒದಗಿಲಿದೆ. ಆ್ಯಪಲ್, ಗೂಗಲ್ ಮತ್ತು ಮೈಕ್ರೋಸಾಫ್ಟ್ ಮೊದಲಾದ ಕಂಪನಿಗಳು ಸೇರಿ ರಚಿಸಿರುವ ಫಿಡೋ ಮೈತ್ರಿ ಕೆಲ ದಿನಗಳ ದಿನಗಳ ಹಿಂದಷ್ಟೇ ವೆಬ್‌ಸೈಟ್ ಮತ್ತು ಆ್ಯಪ್‌ಗಳಿಗೆ ಪಾಸ್‌ವರ್ಡ್ ಮುಕ್ತ ಪ್ರವೇಶಾವಕಾಶ ಕೊಡುವ ಯೋಜನೆಯನ್ನು ಪ್ರಕಟಿಸಿತ್ತು.

ರಿಯಲ್ ಟೋನ್ ಫೀಚರ್‌

ರಿಯಲ್ ಟೋನ್ ಫೀಚರ್‌

ಫೋಟೋಗಳು ಹೆಚ್ಚು ವಾಸ್ತವಿಕವಾಗಿಸುವ ದೃಷ್ಟಿಯಲ್ಲಿ ರಿಯಲ್ ಟೋನ್ ಫೀಚರ್‌ನ ವ್ಯಾಪ್ತಿ ಹೆಚ್ಚಿಸಿದೆ. ಹೊಸ ಸ್ಕಿನ್ ಟೋನ್ ಫಿಲ್ಟರ್ ಸೆಟ್ ಅನ್ನು ಇದಕ್ಕೆ ಸೇರಿಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಈ ಫಿಲ್ಟರ್‌ಗಳು ಕಾರ್ಯರೂಪಕ್ಕೆ ಬರಲಿವೆ.

ಗೂಗಲ್ ಡಾಕ್ಸ್

ಗೂಗಲ್ ಡಾಕ್ಸ್

ಗೂಗಲ್ ಡಾಕ್ಸ್ (Google Docs) ಆ್ಯಪ್‌ಗೆ ಹೊಸ ಸಮ್ಮರೈಸೇಶನ್ ಫೀಚರ್ ಸೇರಿಸಲಾಗಿದೆ. ಇದು ಎಲ್ಲಾ ದಾಖಲೆಗಳನ್ನು ಸ್ವಯಂ ಆಗಿ ಸಂಕ್ಷೇಪಿಸಬಹುದು. ದೊಡ್ಡ ಪಠ್ಯ ಇರುವ ದಾಖಲೆಗಳ ಮುಖ್ಯಾಂಶವನ್ನು ಹೆಕ್ಕಲು ಇದರಿಂದ ನೆರವಾಗುತ್ತದೆ. ಇನ್ನು, ಗೂಗಲ್ ಮೀಟ್ (Google Meet) ಆ್ಯಪ್‌ನಲ್ಲಿ ಆಡಿಯೋ ಮತ್ತು ವಿಡಿಯೋದಲ್ಲಿ ಒಂದಷ್ಟು ಸುಧಾರಣೆಗಳನ್ನು ತರಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
The Google I/O 2022 first day concluded with a gamut of developments ranging from the high-end Pixel 7 to a slew of upgrades on Google’s existing software and platforms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X