ಜುಲೈ 18ರಂದು ಡೀಸೆಲ್ ಬೆಲೆ ಏರಿಕೆ, ಪೆಟ್ರೋಲ್ ಬೆಲೆ ಸ್ಥಿರ

ನವದೆಹಲಿ, ಜುಲೈ 18: ದೇಶದ ಪ್ರಮುಖ ಮೂರು ತೈಲ ಕಂಪನಿಗಳು ರವಿವಾರ (ಜುಲೈ 18) ದಂದು ಡೀಸೆಲ್ ದರದಲ್ಲಿ ಬದಲಾವಣೆಯಾಗಿದ್ದು, ಪೆಟ್ರೋಲ್ ಬೆಲೆ ಸ್ಥಿರವಾಗಿದೆ. ಡೀಸೆಲ್ ಬೆಲೆ 13 -18 ಪೈಸೆಯಂತೆ ಬೆಲೆ ಏರಿಕೆಯಾಗಿದೆ.

ಮೇ 4ರಿಂದ ಇಂದಿನ ತನಕ ಪೆಟ್ರೋಲ್ ಒಟ್ಟು 40 ಬಾರಿ ಹಾಗೂ ಡೀಸೆಲ್ 37 ಬಾರಿ ಏರಿಕೆಯಾಗಿದ್ದು, ಜೂನ್ ತಿಂಗಳಲ್ಲೇ 21 ಬಾರಿ ಬೆಲೆ ಏರಿಕೆ ಮಾಡಲಾಗಿದೆ. ಮೇ 4ರಿಂದ ಪೆಟ್ರೋಲ್ 11.14 ರು ಪ್ರತಿ ಲೀಟರ್ ಹಾಗೂ ಡೀಸೆಲ್ 9.14 ರು ಪ್ರತಿ ಲೀಟರ್ ಆಗಿದೆ.

ದೆಹಲಿಯಲ್ಲಿ ದರ ಭಾನುವಾರದಂದು ಪೆಟ್ರೋಲ್ ಪ್ರತಿ ಲೀಟರ್‌ಗೆ 101.84ರು ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 89.87ರು ಆಗಿದೆ. ದೇಶದ ವಿವಧ ನಗರಗಳ ದರ ಪಟ್ಟಿ ವಿವರ ಮುಂದಿದೆ...

ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಅತ್ಯಧಿಕ

ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಅತ್ಯಧಿಕ

ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಅತ್ಯಧಿಕ ಪೆಟ್ರೋಲ್ 107.83ರು ಪ್ರತಿ ಲೀಟರ್, ಡೀಸೆಲ್ 97.45ರು ಪ್ರತಿ ಲೀಟರ್‌ನಷ್ಟಿದೆ ಎಂದು ಇಂಡಿಯನ್ ಆಯಿಲ್ ಸಂಸ್ಥೆ ಪ್ರಕಟಿಸಿದೆ. ಮೇ 29ರಂದು ಮೊದಲ ಬಾರಿಗೆ ಮುಂಬೈನಲ್ಲಿ ಪೆಟ್ರೋಲ್ ದರ 100ರು ಗಡಿ ದಾಟಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ರಾಜಸ್ಥಾನ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಲಡಾಕ್, ಒಡಿಶಾ, ಮಣಿಪುರ, ಸಿಕ್ಕಿಂ ಹಾಗೂ ಮಹಾರಾಷ್ಟ್ರದ ಹಲವು ಪಟ್ಟಣಗಳಲ್ಲೂ ಪೆಟ್ರೋಲ್ ಬೆಲೆ 100 ರು ಗಡಿ ದಾಟಿದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಪ್ರತಿ ಪೆಟ್ರೋಲ್ ಬೆಲೆ ದೇಶದಲ್ಲೇ ಅತ್ಯಧಿಕ 113ರು ನಷ್ಟಿದೆ, ಡೀಸೆಲ್ ಬೆಲೆ 102.95ರು ಆಗಿದೆ. ಅಲ್ಲದೆ ರಾಜಸ್ಥಾನದ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಬೆಲೆ 100 ರು ಗಡಿ ದಾಟಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆ ಕಂಡು 73.59 ಯುಎಸ್ ಡಾಲರ್(1 USD=74.61ರು) ಪ್ರತಿ ಬ್ಯಾರೆಲ್‌ನಷ್ಟಿದೆ. ಕಚ್ಚಾ ತೈಲ ಬೆಲೆ ಫೆಬ್ರವರಿಯಲ್ಲಿ 61.22 ಡಾಲರ್, ಮಾರ್ಚ್ ತಿಂಗಳಲ್ಲಿ 64.73 ಡಾಲರ್, ಏಪ್ರಿಲ್ ತಿಂಗಳಲ್ಲಿ 66 ಡಾಲರ್ ಹಾಗೂ ಮೇ ತಿಂಗಳಲ್ಲಿ ಸರಾಸರಿ 68 ಡಾಲರ್ ನಷ್ಟಿತ್ತು. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98ರು ಹಾಗೂ ಡೀಸೆಲ್ ಮೇಲೆ 31.80 ರು ನಷ್ಟಿದೆ.

ನಗರ-ಇಂಧನ ದರ ಪ್ರತಿ ಲೀಟರ್ ರುಗಳಲ್ಲಿ

ನಗರ-ಇಂಧನ ದರ ಪ್ರತಿ ಲೀಟರ್ ರುಗಳಲ್ಲಿ

ನವದೆಹಲಿ: ಪೆಟ್ರೋಲ್ 101.84ರು- ಡೀಸೆಲ್ 89.87ರು
ಕೋಲ್ಕತಾ: ಪೆಟ್ರೋಲ್ 102.08ರು- ಡೀಸೆಲ್ 93.02ರು
ಮುಂಬೈ: ಪೆಟ್ರೋಲ್ 107.83ರು- ಡೀಸೆಲ್ 97.45ರು
ಚೆನ್ನೈ: ಪೆಟ್ರೋಲ್ 102.58ರು- ಡೀಸೆಲ್ 94.47ರು
ಬೆಂಗಳೂರು: ಪೆಟ್ರೋಲ್ 105.25ರು- ಡೀಸೆಲ್ 95.26ರು
ತಿರುವನಂತಪುರಂ: ಪೆಟ್ರೋಲ್ 103.58ರು- ಡೀಸೆಲ್ 96.24ರು
ಪಾಟ್ನ: ಪೆಟ್ರೋಲ್ 105.05ರು- ಡೀಸೆಲ್ 96.26ರು
ಹೈದರಾಬಾದ್: ಪೆಟ್ರೋಲ್ 105.83ರು- ಡೀಸೆಲ್ 97.96ರು
ನೋಯ್ಡಾ: ಪೆಟ್ರೋಲ್ 98.93ರು- ಡೀಸೆಲ್ 90.26ರು
ಜೈಪುರ: ಪೆಟ್ರೋಲ್ 108.48ರು- ಡೀಸೆಲ್ 98.80ರು

ಕಚ್ಚಾ ತೈಲ ಬೆಲೆ ನೋಡಿಕೊಂಡು ಬೆಲೆ ನಿರ್ಧಾರ

ಕಚ್ಚಾ ತೈಲ ಬೆಲೆ ನೋಡಿಕೊಂಡು ಬೆಲೆ ನಿರ್ಧಾರ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+