ಸೆ.30: ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಏರಿಕೆ; ಪ್ರಮುಖ ನಗರಗಳಲ್ಲಿ ಇಂಧನ ದರವೆಷ್ಟು?

ನವದೆಹಲಿ,

ಸೆಪ್ಟೆಂಬರ್
30:
ಸರ್ಕಾರಿ
ಸ್ವಾಮ್ಯದ
ತೈಲ
ಸಂಸ್ಥೆಗಳು
ಮಂಗಳವಾರ
ಪೆಟ್ರೋಲ್
ಮತ್ತು
ಡೀಸೆಲ್
ದರ
ಏರಿಕೆ
ಮಾಡಿದ
ನಂತರ
ಬುಧವಾರ
ಯಥಾಸ್ಥಿತಿ
ಕಾಪಾಡಿಕೊಂಡಿತ್ತು.
ಆದರೆ
ಇಂದು
(ಸೆ.30,
ಗುರುವಾರ)
ಎಲ್ಲಾ
ಮಹಾ
ನಗರಗಳಲ್ಲಿ
ಪೆಟ್ರೋಲ್
ಮತ್ತು
ಡೀಸೆಲ್
ದರ
ಮತ್ತೆ
ಏರಿಕೆಯಾಗಿದೆ.

id="toptextpromo">
id='are-slot-1'
class='oiad
oi-axt
oiadv'>

ಅಂತಾರಾಷ್ಟ್ರೀಯ

ಮಟ್ಟದಲ್ಲಿ
ಕಚ್ಚಾ
ತೈಲ
ಬೆಲೆ
ಏರಿಕೆಯ
ನಡುವೆ
ಇಂದು
ತೈಲ
ಮಾರುಕಟ್ಟೆ
ಕಂಪನಿಗಳು
ದೇಶೀಯ
ಮಾರುಕಟ್ಟೆಯಲ್ಲಿ
ತೈಲ
ಬೆಲೆಯನ್ನು
ಹೆಚ್ಚಿಸಿವೆ.
ಇಂದು
(ಗುರುವಾರ)
ಲೀಟರ್
ಪೆಟ್ರೋಲ್
ದರದಲ್ಲಿ
24
ರಿಂದ
25
ಪೈಸೆ
ಏರಿಕೆ
ಆಗಿದ್ದರೆ,
ಅದೇ
ರೀತಿ
ಲೀಟರ್
ಡೀಸೆಲ್
ದರದಲ್ಲಿ
30
ರಿಂದ
35
ಪೈಸೆ
ಹೆಚ್ಚಳ
ಮಾಡಲಾಗಿದೆ.

id='are-slot-2'
class='oiad
oi-axt
oiadv'>

 ಐದು ಬಾರಿ ಹೆಚ್ಚಳ ಕಂಡ ಡೀಸೆಲ್ ಬೆಲೆ

ಐದು ಬಾರಿ ಹೆಚ್ಚಳ ಕಂಡ ಡೀಸೆಲ್ ಬೆಲೆ

ಕಳೆದ ಒಂದು ವಾರದಲ್ಲಿ ಡೀಸೆಲ್ ಬೆಲೆಯನ್ನು ಐದು ಬಾರಿ ಹೆಚ್ಚಳ ಮಾಡಲಾಗಿದ್ದು, ಪೆಟ್ರೋಲ್ ದರ ಎರಡು ದಿನಗಳಿಂದ ಹೆಚ್ಚಳವಾಗಿದೆ. ಈ ವಾರದ ಏರಿಕೆಯ ಬಳಿಕ ಡೀಸಲ್ ದರದಲ್ಲಿ ಸುಮಾರು ಒಂದೂವರೆ ರೂಪಾಯಿಯಷ್ಟು ಏರಿಕೆ ಕಂಡಿದ್ದು, ಲೀಟರ್ ಪೆಟ್ರೋಲ್ ದರ 40 ರಿಂದ 45 ಪೈಸೆಗಳಷ್ಟು ಏರಿಕೆಯಾಗಿದೆ.

ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 101.64 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.87 ರೂಪಾಯಿಗೆ ಏರಿಕೆ ಆಗಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 107.71 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 97.52 ರೂಪಾಯಿ ಇದೆ.

 ಬೆಂಗಳೂರಿನಲ್ಲಿ ಏರಿಕೆ ಕಂಡ ಇಂಧನ ದರ

ಬೆಂಗಳೂರಿನಲ್ಲಿ ಏರಿಕೆ ಕಂಡ ಇಂಧನ ದರ

ಅದೇ ರೀತಿ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 102.17 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 92.97 ರೂಪಾಯಿಗೆ ಏರಿಕೆ ಕಂಡಿದೆ.

ತಮಿಳುನಾಡಿನ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 99.36 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.45 ರೂಪಾಯಿ ಇದ್ದು, ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್​ಗೆ 105.18 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 95.38 ರೂಪಾಯಿ ಆಗಿದೆ.

 ಭೋಪಾಲ್​ನಲ್ಲಿ ಲೀಟರ್ ಪೆಟ್ರೋಲ್ ಬೆಲೆ ಎಷ್ಟು?

ಭೋಪಾಲ್​ನಲ್ಲಿ ಲೀಟರ್ ಪೆಟ್ರೋಲ್ ಬೆಲೆ ಎಷ್ಟು?

ಇನ್ನು ಮಧ್ಯಪ್ರದೇಶದ ಭೋಪಾಲ್​ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 110.11 ರೂಪಾಯಿ ಇದ್ದರೆ, ಲೀಟರ್ ಡೀಸೆಲ್ ದರ 98.77 ರೂಪಾಯಿ ಇದೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಲೀಟರ್ ಪೆಟ್ರೋಲ್ ದರ 98.75 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 90.29 ರೂಪಾಯಿಗೆ ಏರಿಕೆಯಾಗಿದೆ.

ಬಿಹಾರದ ಪಾಟ್ನಾದಲ್ಲಿ ಲೀಟರ್ ಪೆಟ್ರೋಲ್ ದರ 104.34 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 96.05 ರೂಪಾಯಿ ಇದೆ. ಚಂಡೀಗಢದಲ್ಲಿ ಲೀಟರ್ ಪೆಟ್ರೋಲ್ ದರ 97.85 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.61 ರೂಪಾಯಿಗೆ ಏರಿಕೆ ಆಗಿದೆ.

Recommended Video

    ಹೋಂಡಾ ಸಿಬಿ200ಎಕ್ಸ್ ವಿಮರ್ಶೆ | Honda CB 200X Review Features Explained in Kannada
     ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಇಂಧನ ಪರಿಷ್ಕರಣೆ

    ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಇಂಧನ ಪರಿಷ್ಕರಣೆ

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

    ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+