ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಇಂಡಿಯಾ 'ತೇಜ್' ಹೆಸರು ಬದಲು, ಪೇಮೆಂಟ್ ಸುಲಭ!

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 28 : ಗೂಗಲ್ ಇಂಡಿಯಾದ ಪೇಮೆಂಟ್ ಬ್ಯಾಂಕಿಂಗ್ ಆಪ್ 'ತೇಜ್' ಹೆಸರು ಬದಲಾಗಿದೆ. ಮೊಬೈಲ್ ಪಾವತಿ ಅಪ್ಲಿಕೇಷನ್ ಹೊಸ ಸ್ವರೂಪದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಗೂಗಲ್ ತೇಜ್ ಎಂಬ ಹೆಸರಿನ ಬದಲಿಗೆ ಗೂಗಲ್ ಪೇ ಎಂದು ಕರೆಯಲಾಗುತ್ತದೆ.

ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಈ ಮೂಲಕ ಮೊಬೈಲ್ ಪಾವತಿ(ಆನ್ ಲೈನ್ ಹಾಗೂ ಆಫ್ ಲೈನ್) ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿರಿಸಿ ಬಹುತೇಕ ಒಂದು ವರ್ಷವಾಗುತ್ತಿದೆ. ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಈ ಆಪ್ ಲಭ್ಯವಿದೆ.

ಈ ಅಪ್ಲಿಕೇಷನ್ ತಮ್ಮ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಿಕೊಂಡು ಸುಲಭವಾಗಿ ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ವ್ಯವಹಾರ ಸಾಧಿಸಬಹುದಾಗಿದೆ.

ಗೂಗಲ್ ತೇಝ್ -ಮೊಬೈಲ್ ವ್ಯಾಲೆಟ್ ಏನು? ಎತ್ತ?ಗೂಗಲ್ ತೇಝ್ -ಮೊಬೈಲ್ ವ್ಯಾಲೆಟ್ ಏನು? ಎತ್ತ?

ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ)ದ ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್(ಯುಪಿಐ)ನ್ನು ಬಳಸುವ ತೇಝ್ ಆಪ್ ಮೂಲಕ ಮಾಡುವ ಹಣ ವರ್ಗಾವಣೆಗಳು ಸರಳ ಮತ್ತು ಸುರಕ್ಷಿತವಾಗಿವೆ ಎಂದು ಗೂಗಲ್ ಘೋಷಿಸಿದೆ.

ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ)ದ ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್(ಯುಪಿಐ)ನ್ನು ಬಳಸುವ ತೇಝ್ ಆಪ್ ಮೂಲಕ ಮಾಡುವ ಹಣ ವರ್ಗಾವಣೆಗಳು ಸರಳ ಮತ್ತು ಸುರಕ್ಷಿತವಾಗಿವೆ ಎಂದು ಗೂಗಲ್ ಘೋಷಿಸಿದೆ.

ಮತ್ತೇನು ಹೊಸದಿದೆ ಗೂಗಲ್ ಪೇ ನಲ್ಲಿ

ಮತ್ತೇನು ಹೊಸದಿದೆ ಗೂಗಲ್ ಪೇ ನಲ್ಲಿ

ಈಗ ಗೂಗಲ್ ಪೇನಲ್ಲಿ ತ್ವರಿತವಾಗಿ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳಿಂದ ಸಾಲ ಪಡೆಯಬಹುದು. ಎಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಫೆಡರಲ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಗಳಿಂದ ಪ್ರೀ ಅಪ್ರೂವ್ಡ್ ಸಾಲವನ್ನು ಗೂಗಲ್ ಪೇ ಆಪ್ ಮೂಲಕ ಪಡೆಯಬಹುದಾಗಿದೆ.

ಈಗ ಎಲ್ಲೆಡೆ ಲಭ್ಯವಾಗಲಿದೆ

ಈಗ ಎಲ್ಲೆಡೆ ಲಭ್ಯವಾಗಲಿದೆ

ಗೂಗಲ್ ಪೇ ಮೂಲಕ ಹಣಪಾವತಿ ಹಾಗೂ ವರ್ಗಾವಣೆ ಈಗ ಹೆಚ್ಚು ಕಡೆಗಳಲ್ಲಿ ವಿಸ್ತರಿಸಲಾಗಿದೆ. ಗೋಐಬಿಬೋ, ಫ್ರೆಶ್ ಮೆನು, ಬುಕ್ ಮೈ ಶೋ, ರೆಡ್ ಬಸ್ ಗಳಲ್ಲಿ ಗೂಗಲ್ ಪೇ ಬಳಸಬಹುದಾಗಿದೆ. ಗೂಗಲ್ ಈಗ 22 ಮಿಲಿಯನ್ ಸಕ್ರಿಯ ಗೂಗಲ್ ಪೇ ಬಳಕೆದಾರರು, 750 ಮಿಲಿಯನ್ ವ್ಯವಹಾರಗಳು ಹಾಗೂ 2 ಲಕ್ಷ ಕೋಟಿ ವ್ಯವಹಾರ ದಾಖಲಾಗಿದೆ.

ಹಲವು ಭಾಷೆಗಳಲ್ಲಿ ಲಭ್ಯ

ಹಲವು ಭಾಷೆಗಳಲ್ಲಿ ಲಭ್ಯ

ಇಂಗ್ಲೀಷ್, ಹಿಂದಿ, ಬಂಗಾಳಿ, ಗುಜರಾತಿ, ಕನ್ನಡ, ತಮಿಳು, ಮರಾಠಿ ಮತ್ತು ತೆಲುಗು ಭಾಷೆಗಳನ್ನು ತೇಝ್ ಬೆಂಬಲಿಸುತ್ತದೆ.ತೇಝ್‌ ನ ಕ್ಯಾಷ್ ಮೋಡ್ ಬಳಸುವ ಮೂಲಕ ಯಾರಿಂದಲೇ ಆದರೂ ಹಣವನ್ನು ತಕ್ಷಣ ಸ್ವೀಕರಿಸಬಹುದು ಅಥವಾ ಅವರಿಗೆ ರವಾನಿಸಬಹುದು. ಇದಕ್ಕಾಗಿ ನಿಮ್ಮ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳೂ ಬೇಕಿಲ್ಲ.

ಇದು ಬರೀ ಮೊಬೈಲ್ ವ್ಯಾಲೆಟ್ ಅಲ್ಲ

ಇದು ಬರೀ ಮೊಬೈಲ್ ವ್ಯಾಲೆಟ್ ಅಲ್ಲ

ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ವರ್ಗಾಯಿಸಬಹುದು. ಯುಪಿಐನಲ್ಲಿ ನಿಮ್ಮ ಖಾತೆಯನ್ನು ತೇಝ್‌ಗೆ ಲಿಂಕ್ ಮಾಡಿಕೊಂಡರೆ ಸಾಕು, ಬ್ಯಾಂಕಿನಿಂದ ಬ್ಯಾಂಕಿಗೆ ಹಣ ವರ್ಗಾವಣೆ ತಕ್ಷಣ ಸಾಧ್ಯವಾಗುತ್ತದೆ. ಆಕ್ಸಿಸ್, ಎಚ್ ಡಿ ಎಫ್ ಸಿ, ಐಸಿಐಸಿಐ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಲ್ಲದೆ ಯುಪಿಐ ಬೆಂಬಲಿತ ಎಲ್ಲಾ ಮೊಬಿ ಬ್ಯಾಂಕಿಂಗ್ ಸೇವೆ ಲಭ್ಯ

English summary
Google's payment app Tez has been renamed to Google Pay. Not only has the name of the payment app been changed, Google has introduced new features into it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X