Breaking News: ಷೇರು ಮಾರುಕಟ್ಟೆಯಲ್ಲಿ ತಲ್ಲಣ: 20 ಲಕ್ಷ ಕೋಟಿ ರೂ. ಲಾಸ್, ಚಿನ್ನದ ಬೆಲೆ ಏರಿಕೆ ಫಿಕ್ಸ್!
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನ ಆರ್ಥಿಕ ನೀತಿಗಳು ಭಾರತವೂ ಸೇರಿದಂತೆ ವಿಶ್ವದ ಪ್ರಮುಖ ದೇಶಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು. ಸೋಮವಾರ ಬೆಳಿಗ್ಗೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸರ್ವಕಾಲಿಕ ಕುಸಿತ ಕಂಡಿದೆ. ಭಾರತೀಯ ಹೂಡಿಕೆದಾರರು ಕೆಲವೇ ನಿಮಿಷಗಳಲ್ಲಿ ಬರೋಬ್ಬರಿ 20.16 ಕೋಟಿ ರೂಪಾಯಿ ಆರ್ಥಿಕ ನಷ್ಟಕ್ಕೆ ಗುರಿಯಾಗಿದ್ದಾರೆ. ಇಷ್ಟೊಂದು ಪ್ರಮಾಣದ ಆರ್ಥಿಕ ನಷ್ಟ ಎದುರಾಗಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ಭಾರತೀಯ ಷೇರು ಮಾರುಕಟ್ಟೆಯಲ್ಲಿ ತಲ್ಲಣದ ಪರಿಸ್ಥಿತಿ ಇದೆ. ಆದರೆ ಒಂದೇ ಬಾರಿ ಭಾರತೀಯ ಹೂಡಿಕೆದಾರರಿಗೆ 20.16 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಆಗುತ್ತದೆ ಎಂದು ಯಾರೂ ಅಂದಾಜಿಸಿರಲಿಲ್ಲ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಿರುವ ತೆರಿಗೆ ಸಮರ ಇದೀಗ ಉಗ್ರ ಸ್ವರೂಪವನ್ನು ಪಡೆದುಕೊಂಡಿದೆ. ಅಮೆರಿಕ ಫಸ್ಟ್ ಎನ್ನುವ ಹೆಸರಿನಲ್ಲಿ ಯುಎಸ್ ಅಧ್ಯಕ್ಷ ತೆಗೆದುಕೊಂಡಿರುವ ಆರ್ಥಿಕ ನಿರ್ಧಾರಗಳಿಂದ ಹೂಡಿಕೆದಾರರು ಕಂಗಾಲಾಗಿದ್ದಾರೆ. ಟ್ಯಾಕ್ಸ್ ವಾರ್ ವಿಶ್ವದಾದ್ಯಂತ ಜೋರಾಗಿದ್ದು ಇದೀಗ ಅಮೆರಿಕದ ವಿರುದ್ಧ ಯುರೋಪ್ ದೇಶಗಳು ಒಂದಾಗಿ ಪ್ರತಿ ಸುಂಕ ವಿಧಿಸಲು ಮುಂದಾಗಿವೆ. ಟ್ರಂಪ್ ಏಷ್ಯಾ ಹಾಗೂ ಯುರೋಪ್ ಮೇಲೆ ಭರ್ಜರಿ ತೆರಿಗೆ ವಿಧಿಸುತ್ತಿದ್ದಾರೆ. ಇದರಿಂದ ಭಾರತವೂ ಸೇರಿ ವಿವಿಧ ದೇಶಗಳ ಷೇರು ಮಾರುಕಟ್ಟೆ ನಡುಗುತ್ತಿದೆ. ಇದರೊಂದಿಗೆ ಚಿನ್ನದ ಬೆಲೆಯೂ ಭರ್ಜರಿ ಏರಿಕೆಯಾಗುವ ಆತಂಕ ಶುರುವಾಗಿದೆ.

ದೇಶದಲ್ಲಿ ಚಿನ್ನದ ಬೆಲೆಯು ಭರ್ಜರಿ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುವುದು ಫಿಕ್ಸ್ ಅಂತಲೇ ಹೇಳಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ವಿಶ್ವದಲ್ಲಿ ವಿವಿಧ ವಸ್ತುಗಳ ಬೆಲೆ ಏರಿಕೆಯಾದಾಗ ಹಾಗೂ ಆರ್ಥಿಕ ಅಸ್ಥಿರತೆ ಎದುರಾದಾಗ ಜನ ಮೊದಲು ಖರೀದಿ ಮಾಡುವುದು ಹಾಗೂ ಹೂಡಿಕೆ ಮಾಡುವುದೇ ಚಿನ್ನದ ಮೇಲೆ ಹೀಗಾಗಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುವ ಆತಂಕ ಶುರುವಾಗಿದೆ. ಅಲ್ಲದೇ ಈಗಾಗಲೇ ಚಿನ್ನದ ಬೆಲೆ ಭರ್ಜರಿ ಏರಿಕೆ ಆಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ಆಗುವುದರಲ್ಲಿ ಅನುಮಾನವೇ ಇಲ್ಲ.
ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಆಡಳಿತವು ಕಾರಣವಾಗಿದೆ. ಇದರಿಂದ ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವುದಕ್ಕೆ ಶುರುವಾಗಿದ್ದು ಸೋಮವಾರ (ಏಪ್ರಿಲ್ 7) ಭಾರತಕ್ಕೂ ಇದರ ಬಿಸಿ ಮುಟ್ಟಿದೆ. ಸೋಮವಾರ ಸೆನ್ಸೆಕ್ಸ್ ಆರಂಭಿಕ ವಹಿವಾಟು ಶೇ.5.22ರಷ್ಟು ಅಂದರೆ ಬರೋಬ್ಬರಿ 3,939.68 ಕುಸಿತ ಕಂಡಿದೆ. ಹೀಗಾಗಿ, 71,425.01ಕ್ಕೆ ಇಳಿಯಿತು. ಈಕ್ವಿಟಿ ಮಾರುಕಟ್ಟೆಯಲ್ಲೂ ಸಾಕಷ್ಟು ಏರಿಳಿತವಾಗಿದೆ.
ಏನು ಬೇಕಾದರೂ ಆಗಬಹುದು: ಆರ್ಥಿಕ ವಲಯಕ್ಕೆ ಡೊನಾಲ್ಡ್ ಟ್ರಂಪ್ ಕೊಟ್ಟಿರುವ ಪೆಟ್ಟು ಅಷ್ಟು ಸುಲಭವಾಗಿ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ವಿವಿಧ ದೇಶಗಳಿಂದ ಅಮೆರಿಕಗೆ ಆಮದು ಆಗುವ ವಸ್ತುಗಳ ಮೇಲೆ ಡೊನಾಲ್ಡ್ ಟ್ರಂಪ್ ಅವರು ಮಿತಿ ಮೀರಿ ಸುಂಕ ವಿಧಿಸುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ವಿಶ್ವದಾದ್ಯಂತ ಇನ್ನಷ್ಟು ಅನಿಶ್ಚಿತತೆ ಶುರುವಾಗಲಿದೆ. ಇದೆಲ್ಲವೂ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುವುದಕ್ಕೆ ಕಾರಣವಾಗಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications