ರಾಜಾಜಿನಗರದ ಒರಿಯನ್ ಮಾಲ್ ಗೆ ಪ್ರತಿಷ್ಠಿತ ಪ್ರಶಸ್ತಿ
ಬೆಂಗಳೂರು, ಜೂ.16: ರಾಜಾಜಿನಗರದ ಬ್ರಿಗೇಡ್ ಎನ್ ಕ್ಲೇವ್ ನಲ್ಲಿರುವ ಒರಿಯನ್ ಮಾಲ್ ಗೆ ಪ್ರತಿಷ್ಠಿತ ಇಮೇಜಸ್ ಮೋಸ್ಟ್ ಅಡ್ಮೈರ್ಡ್ ಶಾಪಿಂಗ್ ಸೆಂಟರ್ ಎಂಬ ಪ್ರಶಸ್ತಿ ಲಭಿಸಿದೆ. ದೇಶಾದ್ಯಂತ ಇರುವ ಮಾರುಕಟ್ಟೆ ತಾಣಗಳ ಸಾಧನೆಯನ್ನು ಅವಲೋಕನ ಮಾಡುವ ಇಮೇಜಸ್ ಗ್ರೂಪ್ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದೆ.
ಮುಂಬೈನ ದಿ ರಿನೈಸಾನ್ಸ್ ನಲ್ಲಿ ಮೇ 7 ಮತ್ತು 8 ರಂದು ನಡೆದ ಕಾರ್ಯಕ್ರಮದಲ್ಲಿ ಸಿಬಿಆರ್‍ಇಯ ರೀಟೇಲ್ ಮುಖ್ಯಸ್ಥ ವಿವೇಕ್ ಕೌಲ್ ಅವರು ಒರಿಯನ್ ಮಾಲ್ ವಾಣಿಜ್ಯ ಮತ್ತು ರಿಟೇಲ್ ವಿಭಾಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಶಾಲ್ ಮೀರ್‍ಚಂದಾನಿ ಮತ್ತು ಪ್ರಧಾನ ವ್ಯವಸ್ಥಾಪಕರಾದ ಸುನೀಲ್ ಮುನ್ಷಿ ಅವರಿಗೆ ಪ್ರಶಸ್ತಿಯನ್ನು ವಿತರಿಸಿದರು.

ಸುನೀಲ್ ಮುನ್ಷಿ ಮಾತನಾಡಿ, ಒರಿಯನ್ ಮಾಲ್ ನಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತಹ ಸೇವೆಯನ್ನು ಒದಗಿಸಲು ನಾವು ಸಿದ್ಧರಾಗಿದ್ದೇವೆ. ಜನರ ನಿರೀಕ್ಷೆಗಳನ್ನು ಪಟ್ಟಿ ಮಾಡಿ ಅವುಗಳ ಈಡೇರಿಕೆಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಇಲ್ಲಿಗೆ ಭೇಟಿ ನೀಡಲಿರುವ ಪ್ರತಿಯೊಬ್ಬ ಗ್ರಾಹಕನೂ ಸುಂದರ ಅನುಭವ ಪಡೆದುಕೊಂಡು ಹೋಗಬೇಕೆಂಬುದು ನಮ್ಮ ಪ್ರಮುಖ ಗುರಿಯಾಗಬೇಕಿದೆ ಎಂದು ತಿಳಿಸಿದರು. (ಒನ್ಇಂಡಿಯಾ ಕನ್ನಡ)












Click it and Unblock the Notifications