Get Updates
Get notified of breaking news, exclusive insights, and must-see stories!

ಟಿಕ್‌ಟಾಕ್ ಅಮೆರಿಕಾ ಕಾರ್ಯಾಚರಣೆ ಖರೀದಿಗೆ ಒರಾಕಲ್ ಕಂಪನಿ ಮಾತುಕತೆ

ನವದೆಹಲಿ, ಆಗಸ್ಟ್‌ 18: ಚೀನಾದ ಬೈಟ್‌ಡ್ಯಾನ್ಸ್‌ ಒಡೆತದ ಟಿಕ್‌ಟಾಕ್ ಅಮೆರಿಕಾ ಕಾರ್ಯಾಚರಣೆಯನ್ನು ತನ್ನದಾಗಿಸಿಕೊಳ್ಳಲು ಒರಾಕಲ್ ಕಾರ್ಪ್ ಪ್ರಾಥಮಿಕ ಮಾತುಕತೆ ನಡೆಸಿದೆ.

ಅಮೆರಿಕಾ ಅಷ್ಟೇ ಅಲ್ಲದೆ ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಅಪ್ಲಿಕೇಶನ್‌ನ ಕಾರ್ಯಾಚರಣೆಯನ್ನು ಖರೀದಿಸಲು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ಸೋಮವಾರ ವರದಿ ಮಾಡಿದೆ.

ಜನರಲ್ ಅಟ್ಲಾಂಟಿಕ್ ಮತ್ತು ಸಿಕ್ವೊಯ ಕ್ಯಾಪಿಟಲ್ ಸೇರಿದಂತೆ ಈಗಾಗಲೇ ಬೈಟ್‌ಡ್ಯಾನ್ಸ್‌ನಲ್ಲಿ ಪಾಲು ಹೊಂದಿರುವ ಕೆಲವು ಅಮೆರಿಕಾ ಹೂಡಿಕೆದಾರರೊಂದಿಗೆ ಒರಾಕಲ್ ಕೆಲಸ ಮಾಡುತ್ತಿದೆ ಎಂದು ಪತ್ರಿಕೆ ವರದಿ ಮಾಡಿದೆ.

Oracle Talks With TikToks Owner Considering Buying The Apps Operations In Us

ಫೈನಾನ್ಷಿಯಲ್ ವರದಿಯ ಬಗ್ಗೆ ಬೈಟ್‌ ಡ್ಯಾನ್ಸ್ ಮತ್ತು ಟಿಕ್‌ಟಾಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಒರಾಕಲ್ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವಾರ ಬೈಟ್‌ಡ್ಯಾನ್ಸ್‌ಗೆ ಟಿಕ್‌ಟಾಕ್ ವೀಡಿಯೋ ಅಪ್ಲಿಕೇಶನ್‌ನ ಅಮೆರಿಕಾ ಕಾರ್ಯಾಚರಣೆಯನ್ನು 90 ದಿನಗಳಲ್ಲಿ ಮಾರಾಟ ಮಾಡುವಂತೆ ನಿರ್ದೇಶಿಸಿದ್ದು, ಇದು ಚೀನಾದ ಕಂಪನಿಯ ಮೇಲೆ ಒತ್ತಡ ಹೇರಿದೆ.

ಟಿಕ್ ಟಾಕ್ ಪ್ರಸ್ತುತ ಅಮೆರಿಕಾದಲ್ಲಿ 80 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಏತನ್ಮಧ್ಯೆ, ಮೈಕ್ರೋಸಾಫ್ಟ್ ಈ ಹಿಂದೆ ಬೈಟ್ ಡ್ಯಾನ್ಸ್‌ನಿಂದ ಟಿಕ್‌ಟಾಕ್ ಖರೀದಿಸಲು ಸಿದ್ಧ ಎಂದು ಘೋಷಿಸಿತ್ತು. ಇದೀಗ ಒರಾಕಲ್ ಕಂಪನಿಯು ಖರೀದಿಗೆ ಪ್ರಯತ್ನಿಸುತ್ತಿದೆ ಎಂದು ಸುದ್ದಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+