ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ನೋಡಿ

By Mahesh
|
Google Oneindia Kannada News

ನೋಯ್ಡಾ, ಫೆ. 16: ನೋಯ್ಡಾ ಮೂಲದ ಮೊಬೈಲ್ ಹ್ಯಾಂಡ್ ಸೆಟ್ ಉತ್ಪಾದನಾ ಸಂಸ್ಥೆ ರಿಂಗಿಂಗ್ ಬೆಲ್ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಪರಿಚಯಿಸಲು ಮುಂದಾಗಿದೆ. ಬುಧವಾರ (ಫೆಬ್ರವರಿ 16) ದಿಂದ ಕೇವಲ 500 ರು ಬೆಲೆಗೆ ಸ್ಮಾರ್ಟ್ ಫೋನ್ ಖರೀದಿಸಬಹುದು.

ಭಾರತದ ಅತ್ಯಂತ ಕಡಿಮೆ ಮೊತ್ತದ ಸ್ಮಾರ್ಟ್ ಫೋನಿಗೆ 'ಫ್ರೀಡಂ 251' ಎಂದು ಹೆಸರಿಡಲಾಗಿದೆ. ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಫ್ರೀಡಂ 251 ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. [ಇ ಆಡಳಿತ ಸ್ನೇಹಿ ಭಾರತ್ ಫೋನ್ ನೋಡಿ]

Now get a smartphone for less than Rs 500 Ringing Bells

ತಂತ್ರಜ್ಞಾನದ ಪ್ರಯೋಜನ ದೇಶದ ಎಲ್ಲಾ ಜನ ಸಾಮಾನ್ಯರಿಗೂ ಸಿಗಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಈ ಸ್ಮಾರ್ಟ್ ಫೋನ್ ರೂಪಿಸಲಾಗಿದೆ ಎಂದು ರಿಂಗಿಂಗ್ ಬೆಲ್ ಸಂಸ್ಥೆ ಹೇಳಿದೆ. [ಟ್ರೂ ಕಾಲರ್ ನ ಮೆಸೆಂಜರ್ ಎಂಬ 'ಸ್ಮಾರ್ಟ್' ಅಪ್ಲಿಕೇಷನ್]

ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಹಾಗೂ ಡಿಜಿಟಲ್ ಇಂಡಿಯಾ ಯೋಜನೆಗೆ ಅನುಗುಣವಾಗಿ ಮೊಬೈಲ್ ಫೋನ್ ರೂಪಿಸಲಾಗುವುದು ರಿಂಗಿಂಗ್ ಬೆಲ್ ಪ್ರೈ ಲಿಮಿಟೆಡ್ ಹೇಳಿದೆ.

ಇತ್ತೀಚೆಗೆ ಮೊಬೈಲ್ ಫೋನ್ ಕ್ಷೇತ್ರಕ್ಕೆ ಕಾಲಿರಿಸಿದ ಸಂಸ್ಥೆ 2,999 ರು ಬೆಲೆಗೆ ಸ್ಮಾರ್ಟ್ 101 ಎಂಬ ಮೊಬೈಲ್ ಪರಿಚಯಿಸಿತು. ನಂತರ ಮಾಸ್ಟರ್ ಹಾಗೂ 4ಯು ಮೊಬೈಲ್ ಗಳನ್ನು 999 ರು ಹಾಗೂ 799 ರು ಗೆ ಮಾರುಕಟ್ಟೆಗೆ ಪರಿಚಯಿಸಿತ್ತು. 5,600 ಎಂಎಎಚ್ ಬ್ಯಾಟರಿ ಸ್ಯಾಮರ್ಥವುಳ್ಳ ಕಿವಿ ಮೊಬೈಲ್ 399 ರು ಗೆ ಪರಿಚಯಿಸಿದೆ.

English summary
Noida-based Ringing Bells Pvt Ltd will be launching the world's cheapest smartphone, Freedom 251, on February 17. The company said that the new device will be priced under Rs 500, making the handset the cheapest smartphone in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X