ಮಾರ್ಚ್.3ರಿಂದ ಬೆಂಗಳೂರಲ್ಲಿ ಇಂಡಿಯಾ ನ್ಯಾನೊ 2016

Posted By:
Subscribe to Oneindia Kannada

ಬೆಂಗಳೂರು, ಫೆ. 09: ಭಾರತದ ನ್ಯಾನೊ ವಿಜ್ಞಾನ ಮತ್ತು ತಂತ್ರಜ್ಞಾನದ ಕಾರ್ಯಕ್ರಮ ‘ಬೆಂಗಳೂರು ಇಂಡಿಯಾ ನ್ಯಾನೊ'ದ 8ನೇ ಆವೃತ್ತಿ ‘ಬೆಂಗಳೂರು ಇಂಡಿಯಾ ನ್ಯಾನೊ 2016' ನಮ್ಮ ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ ನಲ್ಲಿ ಮಾರ್ಚ್.3ರಿಂದ 5, 2016ರವರೆಗೆ ನಡೆಯಲಿದೆ.

ಕರ್ನಾಟಕ ವಿಷನ್ ಗ್ರೂಪ್ ಆನ್ ನ್ಯಾನೊ ಟೆಕ್ನಾಲಜಿ ಅಧ್ಯಕ್ಷ ಭಾರತ ರತ್ನ ಸಿ.ಎನ್.ಆರ್ ರಾವ್ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಪ್ರಮುಖ ಧ್ಯೇಯವನ್ನು ಘೋಷಿಸಿದರು. ‘ನ್ಯಾನೊ ಹಾರಿಜೊನ್ಸ್' ಧ್ಯೇಯ ಹೊಂದಿರುವ ಕಾರ್ಯಕ್ರಮ ಅಭಿವೃದ್ಧಿಯುತ ನ್ಯಾನೊ ತಂತ್ರಜ್ಞಾನದತ್ತ ದೃಷ್ಟಿ ಹಾಯಿಸಲಿದೆ.

ಕರ್ನಾಟಕ ರಾಜ್ಯ ಐಟಿ &ಬಿಟಿ, ಎಸ್ &ಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಮಂಜುಳಾ, ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್‍ನ ಭೌತಶಾಸ್ತ್ರ ವಿಭಾಗದ ಎ.ಕೆ.ಸೂದ್ ಹಾಜರಿದ್ದರು. ವಿಭಿನ್ನ ಕಾರ್ಯಕ್ರಮದಲ್ಲಿ ಮುಂಚೂಣಿ ಸಂಶೋಧಕರು, ಉದ್ಯಮ ಕ್ಷೇತ್ರದ ಪರಿಣತರು, ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.

ಇದೊಂದು ಉದ್ಯಮದ ಪ್ರಮುಖ ಕಾರ್ಯಕ್ರಮವಾಗಿ ಹೊರಹೊಮ್ಮಿದ್ದು, ಕರ್ನಾಟಕ ರಾಜ್ಯದ ಐಟಿ, ಬಿಟಿ, ಎಸ್‍ಆಂಡ್‍ಟಿ ಇಲಾಖೆ ಮತ್ತು ಜವಹಾರ್‍ಲಾಲ್ ನೆಹರು ಸೆಂಟರ್ ಆಫ್ ಅಡ್ವಾನ್ಸ್ಡ್ ಸೈಟಿಫಿಕ್ ರಿಸರ್ಚ್, ವಿಷನ್ ಗ್ರೂಪ್ ಆನ್ ನ್ಯಾನೊ ಟೆಕ್ನಾಲಜಿ, ಎಂಎಂ ಆಕ್ಟೀವ್ ಸೈನ್ಸ್ ಟೆಕ್ ಕಮ್ಯೂನಿಕೇಷನ್‍ಗಳು ಒಟ್ಟಾಗಿ ವಿದ್ಯಾರ್ಥಿಗಳು ಮತ್ತು ಉದ್ಯಮದ ತಜ್ಞರ ಜೊತೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ.

ಬೆಂಗಳೂರು ಇಂಡಿಯಾ ನ್ಯಾನೊ ಸಮಾವೇಶ ನ್ಯಾನೊ ತಂತ್ರಜ್ಞಾನದ ಇತ್ತೀಚಿನ ಟ್ರೆಂಡ್‍ಗಳು, ಆರೋಗ್ಯ, ಸ್ವಚ್ಛ ನೀರು, ಇಂಧನ ಮತ್ತು ಉತ್ಪಾದನೆ ಕ್ಷೇತ್ರದಲ್ಲಿ ನ್ಯಾನೊ ತಂತ್ರಜ್ಞಾನದ ಕುರಿತು ಚರ್ಚಿಸಲಿದೆ. ನ್ಯಾನೊ ಫ್ಯಾಬ್ರಿಕೇಷನ್ ತಂತ್ರಜ್ಞಾನ, ನ್ಯಾನೊ ಮೆಡಿಸಿನ್, ಎಲೆಕ್ಟ್ರಾನ್ ಮೈಕ್ರೊಸ್ಕೋಪಿ ಮತ್ತು ನ್ಯಾನೊ ಫೋಟೊನಿಕ್ಸ್ ಮೊದಲಾದ ವಿಚಾರಗಳತ್ತ ಸಮಾವೇಶ ಗಮನಹರಿಸಲಿದೆ. ಆರ್‍ಐಸಿಎಚ್ ವೇದಿಕೆ(ರಿಸಚ್ ಇಂಡಸ್ಟ್ರಿ ಕೊಲಾಬರೇಷನ್ ಹಬ್) ನ್ಯಾನೊ ತಂತ್ರಜ್ಞಾನದ ವಾಣಿಜ್ಯೀಕರಣದತ್ತ ದೃಷ್ಟಿ ಹಾಯಿಸಲಿದೆ.

Namma Bengaluru for India's Premier Nanotech Event Bangalore India Nano 2016

ನ್ಯಾನೊ ಸ್ಪಾಕ್ರ್ಸ್ ಹೊಸ ಭವಿಷ್ಯವಾಗಿದ್ದು ಇಲ್ಲಿ ಹೊಸ ಉದ್ಯಮ ಆಲೋಚನೆಗಳು ಪ್ರರ್ದಶನವಾಗಲಿವೆ. ಒಟ್ಟಾರೆ ಕಾರ್ಯಕ್ರಮದಲ್ಲಿ 60 ತಜ್ಞರು ಮಾತನಾಡುತ್ತಾರೆ. 13ಕ್ಕು ಅಧಿಕ ಅವಧಿಗಳು, ಉದ್ಯಮದ ನಾನಾ ಮಜಲುಗಳ 500 ಗಣ್ಯರು, ಯುಕೆ, ಅಮೆರಿಕ, ಜರ್ಮನಿ, ಕೆನಡ, ಕೋರಿಯಾ, ಬಲ್ಗೇರಿಯಾ, ಫ್ರಾನ್ಸ್, ಪೋಲೆಂಡ್, ಸಿಂಗಪುರಗಳ ಉದ್ಯಮ ಸಂಬಂಧಿ ತಜ್ಞರು ಭಾಗವಹಿಸುತ್ತಾರೆ.

ಫ್ರಾನ್ಸ್ ಕಾಲೇಜಿನ ಕೆಮಿಸ್ಟ್ರಿ ಆಫ್ ಹೈಬ್ರಿಡ್‍ನ ಮುಖ್ಯಸ್ಥ ಪ್ರೊ.ಡಾ.ಕ್ಲೆಮೆಂಟ್ ಸ್ಯಾಂಚೆ, ದಕ್ಷಿಣ ಕೋರಿಯಾದ ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ.ಯಂಗ್ ಹೀ ಲೀ, ಅಮೆರಿಕದ ಬೋಸ್ಟನ್‍ನ ಮೆಸ್ಪಿಲಸ್ ಇಂಕ್‍ನ ಅಧ್ಯಕ್ಷ ಮಾರ್ಕ್ ಆಂಡಲ್ಮೆನ್, ಚಿಕಾಗೊ ವಿವಿ ಅಮೆರಿಕದ ನ್ಯಾನೊ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಸುಪ್ರತೀಕ್ ಗುಹ, ಪ್ರೊ.ಸಿ.ಎನ್.ಆರ್.ರಾವ್, ಬಾಂಬೆ ಐಐಟಿಯ ಪ್ರೊ.ವಿ.ರಾಮ್ ಗೋಪಾಲ್ ರಾವ್ ಮೊದಲಾದವರು ಸಮಾವೇಶದ ಪ್ರಧಾನ ವಾಗ್ಮಿಗಳು.

ನ್ಯಾನೊ ಪ್ರದರ್ಶನದಲ್ಲಿ 45ಕ್ಕು ಅಧಿಕ ಪ್ರದರ್ಶನಕಾರರು ಭಾಗವಹಿಸುತ್ತಾರೆ. ಡಿಎಸ್ಟಿ ನ್ಯಾನೊ ಮಿಷನ್, ಐಐಟಿ, ಎನ್‍ಐಟಿ, ಐಐಎಸ್ಸಿ, ಐಎನ್‍ಎಸ್ಟಿ ಮೊದಲಾದ ಸಂಸ್ಥೆ ಮತ್ತು ಕಂಪನಿಗಳು ತಮ್ಮ ನ್ಯಾನೊ ತಂತ್ರಜ್ಞಾನ ಪ್ರದರ್ಶಿಸಲಿವೆ. 120ಕ್ಕು ಅಧಿಕ ಸಂಶೋಧನೆ ಮತ್ತು ಪದವಿ ವಿದ್ಯಾರ್ಥಿಗಳು ಪೋಸ್ಟರ್ ಪ್ರೆಸೆಂಟೇಷನ್ ನೀಡುತ್ತಾರೆ.

ನ್ಯಾನೊ ಪ್ರಶಸ್ತಿಗಳು ಕಾರ್ಯಕ್ರಮದ ಇನ್ನೊಂದು ಪ್ರಮುಖಾಂಶ. ಪ್ರೊ.ಸಿ.ಎನ್.ಆರ್.ರಾವ್ ಬೆಂಗಳೂರು ಇಂಡಿಯಾ ನ್ಯಾನೊ ಸೈನ್ಸ್ ಪ್ರಶಸ್ತಿ, ಬೆಂಗಳೂರು ಇಂಡಿಯಾ ನ್ಯಾನೊ ಸಂಶೋಧನೆ ಪ್ರಶಸ್ತಿ, ಮಲ್ಹೋತ್ರ ವಿಕಿಫೀಲ್ಡ್ ಫೌಂಡೇಷನ್ ನ್ಯಾನೊ ಫೆಲೊಶಿಪ್ ಪ್ರಶಸ್ತಿ, ಅತ್ಯುತ್ತಮ ಪೋಸ್ಟರ್ ವಿನ್ಯಾಸ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳಿವೆ.

ಯುವಕರಿಗಾಗಿ ನ್ಯಾನೊ ಕಾರ್ಯಕ್ರಮದ ಮತ್ತೊಂದು ಪ್ರಮುಖಾಂಶವಾಗಿದ್ದು, 400ಕ್ಕು ಅಧಿಕ ಪದವಿಪೂರ್ವ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಇದು ನ್ಯಾನೊ ವಿಜ್ಞಾನವನ್ನು ಜನಪ್ರಿಯಗೊಳಿಸುವ ಗುರಿ ಹೊಂದಿದೆ.

ಹಿನ್ನೆಲೆ: ನ್ಯಾನೊವನ್ನು ಮುಂದಿನ ಬೃಹತ್ ತಂತ್ರಜ್ಞಾನ ಎಂದು ನಿರೀಕ್ಷಿಸಲಾಗಿದೆ. ಬೆಂಗಳೂರು ಇಂಡಿಯಾ ನ್ಯಾನೊ 2007ರಲ್ಲಿ ಕರ್ನಾಟಕ ರಾಜ್ಯ ಐಟಿ, ಬಿಟಿ ಮತ್ತು ಎಸ್‍ಆಂಡ್‍ಟಿ ಇಲಾಖೆ ಅಡಿಯಲ್ಲಿ ಅಭಿವೃದ್ಧಿಗೊಂಡಿತು. ನ್ಯಾನೊ ತಂತ್ರಜ್ಞಾನದ ನಾನಾ ಆಯಾಮಗಳತ್ತು ಈ ಸಮಾವೇಶ ದೃಷ್ಟಿ ಹಾಯಿಸಲಿದೆ. ಭಾರತರತ್ನ ಪ್ರೊ.ಸಿ.ಎನ್.ಆರ್.ರಾವ್ ಕಾರ್ಯಕ್ರಮಕ್ಕೆ ಮಾರ್ಗದರ್ಶಕರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The 8th edition of India's premier Nano-science and Nanotechnology Event Bangalore India Nano 2016 will be held between March 03 & 05, 2016 at The Lalit Ashok Bangalore. Bharat Ratna Prof. C.N.R. Rao, Chairman of Karnataka's Vision Group on Nanotechnology, at the curtain raiser and press interaction.
Please Wait while comments are loading...