ವಿಶ್ವದ ಐದನೇ ಶ್ರೀಮಂತ ಪಟ್ಟಕ್ಕೇರಿದ ಮುಕೇಶ್ ಅಂಬಾನಿ
ನವದೆಹಲಿ, ಜುಲೈ 22: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ವಿಶ್ವದ ಐದನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Recommended Video
ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಈ ಸ್ಥಾನವನ್ನು ಸಾಧಿಸಿದ್ದು, ಗೂಗಲ್‌ನ ಸಹ-ಸಂಸ್ಥಾಪಕ ಲ್ಯಾರಿ ಪೇಜ್, ಖ್ಯಾತ ಹೂಡಿಕೆದಾರ ವಾರೆನ್ ಬಫೆಟ್‌ರನ್ನೇ ಹಿಂದಿಕ್ಕಿದ್ದಾರೆ.

ಮುಕೇಶ್ ಅಂಬಾನಿ ಆಸ್ತಿ ಮೌಲ್ಯ 74.6 ಶತಕೋಟಿ ಡಾಲರ್
ಫೋರ್ಬ್ಸ್‌ನ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, 63 ರ ಹರೆಯದ ಮುಕೇಶ್ ಅಂಬಾನಿ 74.6 ಶತಕೋಟಿ ಡಾಲರ್ ಮೌಲ್ಯವನ್ನು ಹೊಂದಿದ್ದಾರೆ. ಇದು ಬರ್ಕ್‌ಷೈರ್ ಹ್ಯಾಥ್‌ವೇ ಅವರ ಮುಖ್ಯ ಕಾರ್ಯನಿರ್ವಾಹಕ ಬಫೆಟ್‌ರ 72.7 ಬಿಲಿಯನ್ ಡಾಲರ್ ಅನ್ನು ಮೀರಿಸಿದೆ.

ರಿಲಯನ್ಸ್ ಷೇರುಗಳು ಶೇ. 130ರಷ್ಟು ಏರಿಕೆ
ಬುಧವಾರ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ನ ಷೇರುಗಳು 2,000 ರುಪಾಯಿಗಳನ್ನು ಮೀರಿ ಹೊಸ ಸಾರ್ವಕಾಲಿಕ ದಾಖಲೆಯನ್ನು ಬರೆಯಿತು.
ಮಾರ್ಚ್ ತಿಂಗಳಿನಲ್ಲಿ 52 ವಾರಗಳ ಕನಿಷ್ಟ ಮಟ್ಟಕ್ಕೆ ಕುಸಿದಿದ್ದ ಆರ್‌ಐಎಲ್ ಷೇರುಗಳು 2,000 ರೂ.ಗಳನ್ನು ಮೀರಿ 2010 ರುಪಾಯಿಗೆ ಮುಟ್ಟಿತು. ಇದು ಎನ್‌ಎಸ್‌ಇಯಲ್ಲಿ ದಿನದ ಅತ್ಯಂತ ಸಕ್ರಿಯ ಷೇರುಗಳಲ್ಲಿ ಒಂದಾಗಿದೆ. ಜೊತೆಗೆ ಅದರ ಮಾರುಕಟ್ಟೆ ಕ್ಯಾಪ್ ಈಗ 13 ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ. ಇದು ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲಾದ ಯಾವುದೇ ಕಂಪನಿಗೆ ಅತ್ಯಧಿಕವಾಗಿದೆ.
ಮುಖೇಶ್ ಅಂಬಾನಿ ತಮ್ಮ ಡಿಜಿಟಲ್ ವ್ಯವಹಾರಕ್ಕಾಗಿ ಕಳೆದ ಮೂರು ತಿಂಗಳಲ್ಲಿ ಒಪ್ಪಂದಗಳ ಸರಮಾಲೆಯನ್ನು ಕಂಡಿದ್ದಾರೆ ಮತ್ತು ಮಾರ್ಚ್‌ನಲ್ಲಿನ ಕನಿಷ್ಠದಿಂದ ಅವರ ಸಂಘಟನೆಯ ಷೇರುಗಳು ಶೇಕಡಾ 130ರಷ್ಟು ಹೆಚ್ಚಾಗಿದೆ.

ರಿಲಯನ್ಸ್ ಜಿಯೋದಲ್ಲಿ 15 ಶತಕೋಟಿಗಿಂತ ಹೆಚ್ಚಿನ ಹೂಡಿಕೆ
ಆರ್‌ಐಎಲ್‌ನ ಜಿಯೋ ಪ್ಲಾಟ್‌ಫಾರ್ಮ್‌ಗಳು ಫೇಸ್‌ಬುಕ್ ಇಂಕ್ ಮತ್ತು ಸಿಲ್ವರ್ ಲೇಕ್ ಸೇರಿದಂತೆ ಕಂಪನಿಗಳಿಂದ 15 ಶತಕೋಟಿಗಿಂತ ಹೆಚ್ಚಿನ ಹೂಡಿಕೆಗಳನ್ನು ಪಡೆದ ನಂತರ ಮುಕೇಶ್ ಅಂಬಾನಿಯ ಸಂಪತ್ತು ದ್ವಿಗುಣಗೊಂಡಿದೆ.
ಕಳೆದ ಮೂರು ತಿಂಗಳಲ್ಲಿ ಅನೇಕ ವಿದೇಶಿ ಕಂಪನಿಗಳು ರಿಲಯನ್ಸ್ ಜಿಯೋದಲ್ಲಿ ಹೂಡಿಕೆ ಮಾಡಿವೆ. ಫೇಸ್‌ಬುಕ್, ಸಿಲ್ವರ್ ಲೇಕ್ ಪಾರ್ಟ್‌ನರ್ಸ್, ವಿಸ್ಟಾ, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಡಾಲಾ, ಸಿಲ್ವರ್ ಲೇಕ್, ಎಡಿಐಎ, ಟಿಪಿಜಿ, ಎಲ್ ಕ್ಯಾಟರ್ಟನ್, ಪಿಐಎಫ್ ಜಿಯೋದಲ್ಲಿ ಹೂಡಿಕೆ ಮಾಡಿವೆ. ಜಿಯೋ ಪ್ಲಾಟ್‌ಫಾರ್ಮ್‌ಗಳ ಷೇರು ಮಾರಾಟದಿಂದ ರಿಲಯನ್ಸ್ 15 ಬಿಲಿಯನ್ ಡಾಲರ್ ಹೂಡಿಕೆ ಮಾಡಿವೆ. ಆರ್ಐಎಲ್ ಇದುವರೆಗೆ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇಕಡಾ 25.09 ರಷ್ಟು ಪಾಲನ್ನು ಹೂಡಿಕೆ ಮಾಡಿದೆ.

ಮೊದಲ ಸ್ಥಾನದಲ್ಲಿರುವ ಜೆಫ್ ಬೇಜೋಸ್
ಅಮೆಜಾನ್‌ನ ಜೆಫ್ ಬೆಜೋಸ್ 185.8 ಬಿಲಿಯನ್ ಡಾಲರ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಮೈಕ್ರೋಸಾಫ್ಟ್‌ನ ಬಿಲ್ ಗೇಟ್ಸ್ 113.1 ಬಿಲಿಯನ್ ಸಂಪತ್ತನ್ನು ಹೊಂದಿದ್ದಾರೆ. ಐಷಾರಾಮಿ ಬ್ರಾಂಡ್ ಎಲ್‌ವಿಎಂಹೆಚ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬವು 111.8 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್ 89 ಶತಕೋಟಿ ಡಾಲರ್ ಆಸ್ತಿಯನ್ನು ಹೊಂದಿರುವ ನಾಲ್ಕನೇ ಶ್ರೀಮಂತ.












Click it and Unblock the Notifications