10 ಲಕ್ಷ ಹಳೆಯ ಮಾಡೆಲ್ ಕಾರುಗಳನ್ನು ಹಿಂಪಡೆಯಲಿರುವ ಮರ್ಸಿಡೆಸ್ ಬೆಂಜ್

ಬೆಂಗಳೂರು, ಜೂನ್ 5: ಲಕ್ಸುರಿ ಕಾರುಗಳ ಜಾಗತಿಕ ದೈತ್ಯ ಮರ್ಸಿಡೆಸ್ ಬೆಂಜ್ ಸಂಸ್ಥೆ ತನ್ನ ಕೆಲ ಹಳೆಯ ಮಾಡೆಲ್‌ಗಳ ಹತ್ತು ಲಕ್ಷದಷ್ಟು ಕಾರುಗಳನ್ನು ಹಿಂಪಡೆಯುತ್ತಿದೆ. ತಾಂತ್ರಿಕ ದೋಷದ ಕಾರಣದಿಂದ ಭಾರತ ಸೇರಿ ವಿಶ್ವಾದ್ಯಂತ ಒಟ್ಟು 9,93,407 ಕಾರುಗಳನ್ನು ಬೆಂಜ್ ಸಂಸ್ಥೆ ಗ್ರಾಹಕರಿಂದ ವಾಪಸ್ ಪಡೆಯುತ್ತಿದೆ.

2004ರಿಂದ 2015ರ ಅವಧಿಯಲ್ಲಿ ತಯಾರಾಗಿರುವ ಎಂಎಲ್, ಜಿಎಲ್ (ಬಿಆರ್ 164) ಮತ್ತು ಆರ್-ಕ್ಲಾಸ್ (ಬಿಆರ್ 251) ಸರಣಿಯ ಕಾರುಗಳಲ್ಲಿ ಬ್ರೇಕ್ ಬೂಸ್ಟರ್‌ನಲ್ಲಿ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಬ್ರೇಕ್ ಬೂಸ್ಟರ್‌ನಲ್ಲಿ ಏನು ಸಮಸ್ಯೆ?
ವಾಹನದ ಬ್ರೇಕಿಂಗ್ ವ್ಯವಸ್ಥೆಯಲ್ಲಿ ಹೌಸಿಂಗ್‌ನಲ್ಲಿ ಕಿಲುಬು ಕಟ್ಟುವುದು ಪತ್ತೆಯಾಗಿದೆ. ಹೀಗೆ ತುಕ್ಕುಹಿಡಿಯುವ ಹೌಸಿಂಗ್‌ನಿಂದಾಗಿ ಬ್ರೇಕ್ ಬೂಸ್ಟರ್ ಸಮರ್ಪಕವಾಗಿ ಕಾರ್ಯವಹಿಸಲು ಸಾಧ್ಯವಾಗುವುದಿಲ್ಲ. ಕಾರಿನ ಬ್ರೇಕ್ ಒತ್ತಿದಾಗ ನಿಲ್ಲುವ ಅವಧಿ ಮತ್ತು ಅಂತರ ಹೆಚ್ಚುತ್ತಿದ್ದುದು ಕೆಲ ಕಾರುಗಳಲ್ಲಿ ಪತ್ತೆಯಾಗಿದೆ. ಹೀಗಾಗಿ, ಈ ಮಾಡೆಲ್‌ಗಳ ಹಳೆಯ ಕಾರುಗಳೆಲ್ಲವನ್ನೂ ತತ್‌ಕ್ಷಣದಿಂದಲೇ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಮರ್ಸಿಡೆಸ್ ಬೆಂಜ್ ಸಂಸ್ಥೆ ಆರಂಭಿಸಿದೆ.

Mercedes-Benz Recalls These Old Models 10 Lakh Cars Across the World

2004ರಿಂದ 2015ರವರೆಗೆ ತಯಾರಿಸಲಾದ ಮೇಲೆ ತಿಳಿಸಿದ ಮಾಡೆಲ್‌ಗಳ ಕಾರುಗಳನ್ನು ಯಾರಾದರೂ ಹೊಂದಿದ್ದರೆ ಅದರ ಬಳಕೆಯನ್ನು ಸದ್ಯಕ್ಕೆ ನಿಲ್ಲಿಸಿ. ಕಂಪನಿಯಿಂದ ತಪಾಸಣೆ ಆಗುವವರೆಗೂ ಅದರ ಚಾಲನೆ ಮಾಡದಿರಿ ಎಂದು ಸಂಸ್ಥೆ ತಿಳಿಸಿದೆ.

Mercedes-Benz Recalls These Old Models 10 Lakh Cars Across the World

ಹಾಗಂತ ಈ ಎಲ್ಲಾ ಕಾರುಗಳಲ್ಲೂ ಸಮಸ್ಯೆ ಇದೆ ಎಂದು ಅರ್ಥ ಅಲ್ಲ. ಮುಂಜಾಗ್ರತಾ ಕ್ರಮವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಬ್ರೇಕ್ ಬೂಸ್ಟರ್ ತುಕ್ಕು ಹಿಡಿದಿದ್ದರೆ ಬ್ರೇಕಿಂಗ್ ಸಿಸ್ಟಂ ಮತ್ತು ಬ್ರೇಕ್ ಪೆಡಲ್ ನಡುವಿನ ಕೊಂಡಿ ಸರಿಯಾಗಿ ಕೆಲಸ ಮಾಡದೇ ಹೋಗಬಹುದು. ತೀರಾ ಹೆಚ್ಚು ತುಕ್ಕು ಹಿಡಿದರೆ ಬ್ರೇಕ್ ಬೂಸ್ಟರ್‌ಗೆ ಒತ್ತಡ ಹೆಚ್ಚಾಗಿ ಹಾನಿಯಾಗಬಹುದು. ಇದು ಅಪರೂಪದ ಸಾಧ್ಯತೆಯಾಗಿದ್ದು, ಒಂದು ವೇಳೆ ದುರದೃಷ್ಟಕ್ಕೆ ಸಮಸ್ಯೆ ಎದುರಾದರೆ ವಾಹನ ಅಪಘಾತಕ್ಕೀಡಾಗುವ ಅಪಾಯ ಇರುತ್ತದೆ ಎಂಬುದು ಕಂಪನಿಯ ಅಧಿಕೃತ ಹೇಳಿಕೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+