Gold Price: ವಾರಾಂತ್ಯದಲ್ಲಿ ಬಂಗಾರ ಮತ್ತಷ್ಟು ದುಬಾರಿ; ಇಂದಿನ ಚಿನ್ನ&ಬೆಳ್ಳಿ ದರ ವಿವರ
ಬೆಂಗಳೂರು, ಮಾರ್ಚ್ 31: ಬಂಗಾರದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಾರಾಂತ್ಯದಲ್ಲಿ ಚಿನ್ನದ ಬೆಲೆ ಭರ್ಜರಿಯಾಗಿ ಏರಿಕೆ ಕಂಡಿದೆ. ವಾರದ ದಿನಗಳಿಗಿಂತ ವಾರಾಂತ್ಯದಲ್ಲಿ ಚಿನ್ನದ ದರ ಮತ್ತಷ್ಟು ಹೆಚ್ಚಾಗಿದೆ. ಬೆಳ್ಳಿ ಬೆಲೆಯೂ ಕೂಡ ಕೊಂಚ ಹೆಚ್ಚಾಗಿದೆ.
ನಿಶ್ಚಿತಾರ್ಥ-ಮದುವೆಯಂತಹ ಸಮಾರಂಭಗಳ ಸಂಖ್ಯೆ ಹೆಚ್ಚಾಗಿದೆ. ಶುಭಕಾರ್ಯಗಳು ಕೂಡ ಭರದಿಂದ ಸಾಗುತ್ತಿದ್ದು, ಶುಭ ಸಮಾರಂಭಗಳಿಗೆ ಚಿನ್ನಾಭರಣಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಶುಭ ಸಮಾರಂಭಗಳು ಹೆಚ್ಚಿರುವ ಈ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹಿಂದಿಗಿಂತ ದುಬಾರಿಯೇ ಇದೆ. ಹೀಗಾಗಿ ಶುಭಕಾರ್ಯಗಳಿಗೆ ಚಿನ್ನ ಖರೀದಿಸಬೇಕು ಎಂದುಕೊಂಡವರು ಯೋಚಿಸುವಂತಾಗಿದೆ.

ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 63,000 ರೂಪಾಯಿ ಇದ್ದು, 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 68,730 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 7,780 ರೂಪಾಯಿ ಇದೆ. ಹಾಗಾದರೆ ಇಂದು (ಮಾರ್ಚ್ 31) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.
ಒಂದು ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಚಿನ್ನದ ದರ - 6,300 ರೂಪಾಯಿ
* 24 ಕ್ಯಾರೆಟ್ ಚಿನ್ನದ ದರ - 6,873 ರೂಪಾಯಿ
10 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ - 63,000 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 68,730 ರೂಪಾಯಿ
8 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ - 50,400 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 54,984 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ
* ಬೆಂಗಳೂರು-63,000 ರೂಪಾಯಿ
* ಚೆನ್ನೈ - 63,900 ರೂಪಾಯಿ
*ಮುಂಬೈ - 63,000 ರೂಪಾಯಿ
* ಕೇರಳ -63,000 ರೂಪಾಯಿ
* ಕೋಲ್ಕತ್ತಾ -63,000 ರೂಪಾಯಿ
* ಜೈಪುರ್- 63,150 ರೂಪಾಯಿ
* ಭುವನೇಶ್ವರ್- 63,000 ರೂಪಾಯಿ
*ಅಹ್ಮದಾಬಾದ್- 63,050 ರೂಪಾಯಿ
*ಲಕ್ನೋ - 63,150 ರೂಪಾಯಿ
* ನವದೆಹಲಿ- 63,150 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
* ಬೆಂಗಳೂರು- 7,580 ರೂಪಾಯಿ
* ಚೆನ್ನೈ- 8,080 ರೂಪಾಯಿ
* ಮುಂಬೈ-7,780 ರೂಪಾಯಿ
* ಕೋಲ್ಕತ್ತಾ- 7,780 ರೂಪಾಯಿ
* ನವದೆಹಲಿ-7,780 ರೂಪಾಯಿ












Click it and Unblock the Notifications