March 26 Gold Price: ಚಿನ್ನ-ಬೆಳ್ಳಿ ದರದಲ್ಲಿ ಮತ್ತೆ ಏರಿಕೆ: ಬೆಲೆ ವಿವರ ತಿಳಿಯಿರಿ
ಬೆಂಗಳೂರು, ಮಾರ್ಚ್ 26: ಕಳೆದ ಒಂದು ವರ್ಷದಿಂದ ಚಿನ್ನ ಮತ್ತು ಬೆಳ್ಳಿಯ ದರ ಒಂದೇ ಸಮನೇ ಏರಿಕೆ ಕಾಣುತ್ತಿದ್ದು, ಈಗಂತೂ ಬಂಗಾರದ ಬೆಲೆ ಗಗನಕ್ಕೇರಿದೆ. ಆದರೆ ಕಳೆದ ಕೆಲವು ದಿನಗಳಿಂದ ಬಂಗಾರದ ಬೆಲೆ ತುಸು ಇಳಿಕೆ ಕಾಣುತ್ತಿತ್ತು ಆದರೆ ನಿನ್ನೆಗಿಂತ ಚಿನ್ನದ ಬೆಲೆ ಇಂದು ತುಸು ಜಾಸ್ತಿಯಾಗಿದೆ.
ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ತೂಕದ ಬೆಲೆ 81,950 ರೂಪಾಯಿ ಇದ್ದು, 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 89,400 ರೂಪಾಯಿ ಇದೆ. ಅಲ್ಲದೇ 18 ಕ್ಯಾರಟ್‌ನ 10 ಗ್ರಾಂ ತೂಕದ ಚಿನ್ನದ ಬೆಲೆ 67,050 ರೂಪಾಯಿಗೆ ಇದೆ.

ಇನ್ನು ಬೆಳ್ಳಿ ದರ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸದ್ಯ ಭಾರತದಲ್ಲಿ 100 ಗ್ರಾಂ ತೂಕದ ಬೆಳ್ಳಿಯ ಬೆಲೆ 10,200 ರೂಪಾಯಿ ಇದೆ. ಹಾಗಾದರೆ ಇಂದು (ಮಾರ್ಚ್ 26) ಬುಧವಾರ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿಯ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.
ಒಂದು ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಚಿನ್ನದ ದರ - 8,195 ರೂಪಾಯಿ
* 24 ಕ್ಯಾರೆಟ್ ಚಿನ್ನದ ದರ - 8,940 ರೂಪಾಯಿ
10 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ- 81,950 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 89,400 ರೂಪಾಯಿ
8 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ - 65,560 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ)- 71,520 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ
* ಬೆಂಗಳೂರು- 81,950 ರೂಪಾಯಿ
* ಚೆನ್ನೈ- 81,950 ರೂಪಾಯಿ
*ಮುಂಬೈ- 81,950 ರೂಪಾಯಿ
* ಕೇರಳ - 81,950 ರೂಪಾಯಿ
* ಕೋಲ್ಕತ್ತಾ- 81,950 ರೂಪಾಯಿ
* ಜೈಪುರ್- 82,100 ರೂಪಾಯಿ
* ಭುವನೇಶ್ವರ್- 81,950 ರೂಪಾಯಿ
*ಅಹ್ಮದಾಬಾದ್- 82,000 ರೂಪಾಯಿ
*ಲಕ್ನೋ- 82,100 ರೂಪಾಯಿ
* ನವದೆಹಲಿ- 82,100 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
* ಬೆಂಗಳೂರು- 10,200 ರೂಪಾಯಿ
* ಚೆನ್ನೈ- 11,100 ರೂಪಾಯಿ
* ಮುಂಬೈ- 10,200 ರೂಪಾಯಿ
* ಕೋಲ್ಕತ್ತಾ- 10,200 ರೂಪಾಯಿ
* ನವದೆಹಲಿ- 10,200 ರೂಪಾಯಿ
*ಕೇರಳ- 11,100 ರೂಪಾಯಿ
*ಅಹ್ಮದಾಬಾದ್- 10,200 ರೂಪಾಯಿ












Click it and Unblock the Notifications