ವಿಜಯ್ ಮಲ್ಯ ಆಸ್ತಿ ಘೋಷಣೆ ಮಾಡಲು ಸುಪ್ರೀಂ ಆದೇಶ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಏಪ್ರಿಲ್ 07 : 4 ಸಾವಿರ ಕೋಟಿ ರೂ. ಸಾಲ ಮರುಪಾವತಿ ಮಾಡುತ್ತೇನೆ ಎಂದು ಉದ್ಯಮಿ ವಿಜಯ್ ಮಲ್ಯ ಅವರು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಬ್ಯಾಂಕ್‌ಗಳು ತಿರಸ್ಕರಿಸಿವೆ. ಮಲ್ಯ ಆಸ್ತಿ ವಿವರವನ್ನು ಘೋಷಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. [ಸುದ್ದಿದನಿ : ಮಲ್ಯ ಆಸ್ತಿ ಘೋಷಣೆ ಮಾಡಲು ಕೋರ್ಟ್ ಆದೇಶ]

ಗುರುವಾರ ವಿಜಯ್ ಮಲ್ಯ ಅವರ ಬ್ಯಾಂಕ್ ಸಾಲ ಮರುಪಾವತಿ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯಿತು. ಈ ಸಮಯದಲ್ಲಿ 9000 ಕೋಟಿ ರೂ.ಗಳ ಸಾಲದಲ್ಲಿ 4 ಸಾವಿರ ಕೋಟಿ ಸಾಲವನ್ನು ಈಗ ಮರುಪಾವತಿ ಮಾಡುವೆ ಎಂದು ವಕೀಲರ ಮೂಲಕ ಮಲ್ಯ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಬ್ಯಾಂಕ್‌ಗಳು ತಿರಸ್ಕರಿಸಿದವು. [ಸಾಲ ಮರುಪಾವತಿಗೆ ವಿಜಯ್ ಮಲ್ಯ ಬಗ್ಗಿದ್ದು ಹೇಗೆ?]

vijay mallya

ಅರ್ಜಿಯ ವಿಚಾರಣೆ ವೇಳೆ ಏ.21ರೊಳಗೆ ಸುಪ್ರೀಂಕೋರ್ಟ್ ವಿಜಯ್ ಮಲ್ಯ ಅವರು ತಮ್ಮ, ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿರುವ ಆಸ್ತಿಯನ್ನು ಘೋಷಣೆ ಮಾಡಬೇಕು ಎಂದು ಆದೇಶ ನೀಡಿತು. ಹೊಸ ಪ್ರಸ್ತಾವನೆ ಸಲ್ಲಿಸಲು 2 ವಾರಗಳ ಕಾಲಾವಕಾಶ ಬೇಕು ಎಂದು ಮಲ್ಯ ಪರ ವಕೀಲರು ಮನವಿ ಮಾಡಿದರು. [ಸಾಲ ಮಾಡಿ ಮರೆಯಾಗಿರುವ ಮಲ್ಯಗೆ ಜೇಟ್ಲಿ ಎಚ್ಚರಿಕೆ]

ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಮತ್ತ ರೋಹಿಂಟನ್ ಎಫ್ ನಾರಿಮನ್ ಅವರನ್ನು ಒಳಗೊಂಡ ಪೀಠ, ಪ್ರಕರಣದ ವಿಚಾರಣೆಯನ್ನು ಏ.26ಕ್ಕೆ ಮುಂದೂಡಿದೆ.

ಮತ್ತೊಂದು ಕಡೆ ವಿಜಯ್ ಮಲ್ಯ ಅವರು ಏ.9ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಬೇಕು ಎಂದು ಸಮನ್ಸ್ ನೀಡಲಾಗಿದೆ. ಖುದ್ದಾಗಿ ಹಾಜರಾಗದಿದ್ದರೆ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The offer to repay Rs 4,000 crore made by former UB group chairman, Vijay Mallya has been rejected by the banks. The court during the course of the hearing directed Mallya to disclose his assets and also those belonging to his wife and children. He has been given time till April 21 to do so.
Please Wait while comments are loading...