2025ರ ಜುಲೈ 1ರಿಂದ ಎಲ್‌ಪಿಜಿ ಸಿಲಿಂಡರ್ ದರ ಸೇರಿದಂತೆ ಹಲವು ಪ್ರಮುಖ ನಿಯಮಗಳಲ್ಲಿ ಬದಲಾವಣೆ
July 2025 New Rules: ಜುಲೈ ಎಂಟ್ರಿಗೆ ಇನ್ನೂ ಕೇವಲ ಒಂದು ದಿನ ಮಾತ್ರ ಬಾಕಿಯಿದೆ. ಇನ್ನೂ ಪ್ರತಿ ತಿಂಗಳಿನಂತೆ ಮುಂಬರುವ ತಿಂಗಳ ಆರಂಭದಲ್ಲೇ ಎಲ್‌ಪಿಜಿ ಸಿಲಿಂಡರ್ ದರ ಸೇರಿದಂತೆ ಹಲವು ಬದಲಾವಣೆಗಳು ಆಗಲಿದೆ. ಹಾಗಾದ್ರೆ ಏನೆಲ್ಲಾ ಹೊಸ ಚೇಂಜಸ್ ಆಗುವ ಸಾಧ್ಯತೆ ಇದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಯಾವೆಲ್ಲಾ ನಿಯಮಗಳಲ್ಲಿ ಬದಲಾವಣೆ?
* ಎಲ್‌ಪಿಜಿ ಸಿಲಿಂಡರ್ ದರ
* ಪ್ಯಾನ್ ಕಾರ್ಡ್
* ಆಧಾರ್
* ತತ್ಕಾಲ್ ಟಿಕೆಟ್ ಬುಕ್ಕಿಂಗ್
* ಕ್ರೆಡಿಟ್ ಕಾರ್ಡ್
* ಎಟಿಎಂ ಸೇವೆ

* ಪ್ಯಾನ್ ಕಾರ್ಡ್: ಪ್ಯಾನ್ ಕಾರ್ಡ್ ಪಡೆಯಲು ಆಧಾರ್ ಕಡ್ಡಾಯ ಆಗಲಿದ್ದು, ಜುಲೈ 1ರಿಂದ ಈ ನಿಯಮ ಜಾರಿಗೆ ಬರಲಿದೆ. ಯಾವುದೇ ವ್ಯಕ್ತಿಗೆ ಪ್ಯಾನ್ ಪಡೆಯಬೇಕಾದರೆ ಅವರು ಆಧಾರ್ ಹೊಂದಿರುವುದು ಮತ್ತು ಆಧಾರ್ ಪ್ರಮಾಣೀಕರಣ ಮಾಡಿಸುವುದು ಕಡ್ಡಾಯ ಆಗಿದೆ. Central Board of Direct Taxes ಈ ನಿಯಮವನ್ನು ಹೊರಡಿಸಿದೆ.
* ಆದಾಯ ತೆರಿಗೆ ಸಲ್ಲಿಸಲು ಇಚ್ಛಿಸುವವರು ಗಮನಿಲೇಬೇಕಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. 2024-25ನೇ ಹಣಕಾಸು ವರ್ಷಕ್ಕೆ ITR ಸಲ್ಲಿಕೆ ಮಾಡಲು ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 15, 2025 ಎಂದು ಘೋಷಣೆ ಮಾಡಲಾಗಿದೆ.
* ರೈಲು ಟಿಕೆಟ್ ಬುಕ್ಕಿಂಗ್: ಭಾರತೀಯ ರೈಲ್ವೆಯ ರೈಲುಗಳ ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೂ ಹೊಸ ನಿಯಮ ಜಾರಿಗೆ ಬರಲಿದೆ. ಜುಲೈ 15ರಿಂದ ತತ್ಕಾಲ್ ಟಿಕೆಟ್‌ಗಳ ಆನ್‌ಲೈನ್ ಬುಕ್ಕಿಂಗ್‌ಗೆ ಆಧಾರ್ ವೆರಿಫಿಕೇಶನ್ ಕಡ್ಡಾಯ ಆಗಲಿದೆ. ಮೊಬೈಲ್ ಆಪ್ ಅಥವಾ ವೆಬ್‌ಸೈಟ್ ಮೂಲಕ ಬುಕ್ ಮಾಡುವವರಿಗೆ ನಿಯಮ ಅನ್ವಯವಾಗಲಿದೆ.
* ಆನ್‌ಲೈನ್ ಆಟಗಳ ನಿಯಮಗಳು: ಅಷ್ಟೇ ಅಲ್ಲದೆ, Dream 11, MPL ಅಥವಾ Rummy Cultureನಂತಹ ಆನ್‌ಲೈನ್ ಆಟದ ಆ್ಯಪ್‌ಗಳಲ್ಲಿ ಹೆಚ್ಚು ವೆಚ್ಚ ಮಾಡಿದರೂ ಈ ಶುಲ್ಕ ಜಾರಿಗೆ ಬರುತ್ತದೆ.
* ಬಳಕೆದಾರರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಹೊಸ ಶುಲ್ಕವನ್ನು ಜಾರಿಗೆ ತರುತ್ತಿದೆ. ನೀವು ತಿಂಗಳಿಗೆ 10,000 ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು Paytm, Mobikwik ಅಥವಾ Freechargeನಂತಹ ವಾಲೆಟ್‌ಗಳಲ್ಲಿ ಲೋಡ್ ಮಾಡಿದರೆ, ಶೇಕಡ 1ರಷ್ಟು ಹೆಚ್ಚುವರಿ ಶುಲ್ಕ ಬೀಳಲಿದೆ.
* ಕ್ರೆಡಿಟ್ ಕಾರ್ಡ್ ಬಳಕೆದಾರರಿಗಾಗಿ ಎಚ್‌ಡಿಎಫ್‌ಸಿಯಿಂದ ಮತ್ತೊಂದು ಹೊಸ ನಿಬಂಧನೆ ಏರಲಿದೆ. ಜುಲೈ ತಿಂಗಳಿಂದ ಯುಟಿಲಿಟಿ ಬಿಲ್ ಪಾವತಿಗಳು 50,000 ರೂಪಾಯಿಗಿಂತ ಹೆಚ್ಚು ಆದರೆ, ಶೇಕಡ 1ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಈ ನಿಯಮ ಇಂಧನ ಬಳಕೆ 15,000 ರೂಪಾಯಿಗಿಂತ ಹೆಚ್ಚಾದರೂ ಅನ್ವಯ ಆಗುತ್ತದೆ.
* ಐಸಿಐಸಿಐ ಬ್ಯಾಂಕ್ ತನ್ನ ಎಟಿಎಂ ಬಳಕೆಯ ನಿಯಮಗಳನ್ನು ಬದಲಾವಣೆ ಮಾಡಲಿದೆ. ಇತರ ಬ್ಯಾಂಕ್ ಎಟಿಎಂನಿಂದ ತಿಂಗಳಿಗೆ ಮೂರು ಬಾರಿ ಹಣ ತೆಗೆದರೆ, ಯಾವುದೇ ಶುಲ್ಕವಿಲ್ಲ. ಆದರೆ, ಮೂರನೇ ಬಾರಿ ಬಳಿಕ ಹಣ ತೆಗೆಯುವುದಾದರೆ 23 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.
* ಎಲ್‌ಪಿಜಿ ದರ: ಇಂಧನ ಕಂಪನಿಗಳು ಪ್ರತಿ ತಿಂಗಳ ಆರಂಭದ ಮೊದಲ ದಿನವೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಪರಿಷ್ಕರಿಸುತ್ತವೆ. ಹಾಗೆಯೇ ಜುಲೈ 1ರಿಂದ ಗ್ಯಾಸ್ ಸಿಲಿಂಡರ್ ದರಗಳಲ್ಲಿ ಸಹ ಬದಲಾವಣೆಯಾಗುವ ಸಾಧ್ಯತೆಯಿದ್ದು, ದರ ಕಡಿಮೆಯಾದರೂ ಆಗಬಹುದು. ಇಲ್ಲ ಅಂದ್ರೆ ಹೆಚ್ಚಳವೂ ಅಗಬಹುದು ಎಂದು ಹೇಳಲಾಗುತ್ತಿದೆ.












Click it and Unblock the Notifications