LPG Price: ಹೊಸ ವರ್ಷದ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್ ದರ ಭಾರೀ ಏರಿಕೆ: ನಿಮ್ಮೂರಲ್ಲಿ ಎಷ್ಟಿದೆ ತಿಳಿಯಿರಿ
LPG Price: ಭಾರತದಲ್ಲಿ ಇಂಧನ ಕಂಪನಿಗಳು ಪ್ರತಿ ತಿಂಗಳ ಆರಂಭದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕರಣೆ ಮಾಡುತ್ತಲಿರುತ್ತವೆ. ಇದೀಗ ಇಂದು (ಜನವರಿ 1, 2026) ದರವನ್ನು ಏರಿಕೆ ಮಾಡಲಾಗಿದೆ. ಹಾಗಾದ್ರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಣೆ ಮಾಡಲಾಗುತ್ತದೆ. ಇದೀಗ ಜನವರಿ 1 ಅಂದರೆ ಹೊಸವರ್ಷದ ಮೊದಲ ದಿನವೇ ದರ ಭಾರೀ ಏರಿಕೆಯಾಗಿದೆ. ಆದರೆ, ಗೃಹ ಬಳಕೆಯ (14.2 ಕೆ.ಜಿ.) ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅದೇ ಹಳೇ ದರ ಮುಂದುವರೆದಿದೆ.

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಏರಿಕೆ: 2026ರ ಹೊಸ ವರ್ಷದ ಮೊದಲ ದಿನವೇ ವಾಣಿಜ್ಯ (19 ಕೆ.ಜಿ) ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ 111 ರೂಪಾಯಿ ಹೆಚ್ಚಳ ಆಗಿದೆ. ಇದರಿಂದ ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಇನ್ನಿತರೆ ಸಣ್ಣ ವ್ಯಾಪಾರಗಳ ಮೇಲೆ ಪರಿಣಾಮ ಬೀರಿದೆ. ಹಾಗಾದ್ರೆ, ಇದೀಗ ಹೊಸ ದರದ ಅನ್ವಯ ಯಾವ ನಗರದಲ್ಲಿ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಭಾರತೀಯ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನೇತೃತ್ವದಲ್ಲಿ ಪ್ರತಿ ತಿಂಗಳ ಮೊದಲ ದಿನ ಅಂತಾರಾಷ್ಟ್ರೀಯ ತೈಲ ದರಗಳ ಆಧಾರದಲ್ಲಿ ಎಲ್‌ಪಿಜಿ ದರಗಳನ್ನು ಪರಿಷ್ಕರಣೆ ಮಾಡಲಾಗುತ್ತದೆ. ಈ ಬಾರಿ ವಾಣಿಜ್ಯ ಸಿಲಿಂಡರ್‌ಗಳ ದರ ಏರಿಕೆ ಆಗಿದ್ದು, ದೆಹಲಿಯಲ್ಲಿ ಹಿಂದೆ 1,580.50 ರೂಪಾಯಿ ಇದ್ದ 19 ಕೆ.ಜಿ. ಸಿಲಿಂಡರ್ ಇದೀಗ 1,691.50 ರೂಪಾಯಿ ಆಗಿದೆ.
ಯಾವ ನಗರಗಳಲ್ಲಿ ದರ ಎಷ್ಟಿದೆ?
* ಬೆಂಗಳೂರು - 1,764.50 ರೂಪಾಯಿ
* ದೆಹಲಿ: 1,691.50 ರೂಪಾಯಿ (ಹಿಂದೆ 1,580.50 ರೂಪಾಯಿ)
* ಮುಂಬೈ: 1,642.50 ರೂಪಾಯಿ (ಹಿಂದೆ 1,531.50 ರೂಪಾಯಿ)
* ಕೋಲ್ಕತಾ: 1,795 ರೂಪಾಯಿ (ಹಿಂದೆ 1,684 ರೂಪಾಯಿ)
* ಚೆನ್ನೈ: 1,849.50 ರೂಪಾಯಿ
ಇನ್ನೂ 2025ರ ಡಿಸೆಂಬರ್ ತಿಂಗಳ ಆರಂಭದಲ್ಲೇ ತೈಲ ಮಾರಾಟ ಕಂಪನಿಗಳು ವಾಣಿಜ್ಯ ಸಿಲಿಂಡರ್ ಹೊಸ ದರಗಳನ್ನು ಬಿಡುಗಡೆ ಮಾಡಿದ್ದವು. ಆಗಲೂ ಕೂಡ ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿರಲಿಲ್ಲ. ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ದರದಲ್ಲಿ 10 ರೂಪಾಯಿ ಇಳಿಕೆ ಆಗಿತ್ತು. ಇನ್ನೂ ನವೆಂಬರ್‌ನಲ್ಲಿ 5 ರೂಪಾಯಿ ಇಳಿಕೆ ಆದ್ರೆ, ಅಕ್ಟೋಬರ್‌ನಲ್ಲಿ 16 ರೂಪಾಯಿ ಹೆಚ್ಚಳ ಆಗಿತ್ತು. ಸೆಪ್ಟೆಂಬರ್‌ನಲ್ಲಿ 51 ರೂಪಾಯಿ ಇಳಿಕೆ ಆಗಿತ್ತು.
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯಿಂದ ಹೋಟೆಲ್ ಮತ್ತು ರೆಸ್ಟೋರೆಂಟ್ ವ್ಯಾಪಾರಿಗಳ ವೆಚ್ಚ ಹೆಚ್ಚಾಗಲಿದೆ. ಇದರಿಂದ ಅವರು ಆಹಾರ ದರಗಳನ್ನು ಮತ್ತಷ್ಟು ಹೆಚ್ಚಳ ಮಾಡುವ ಸಾಧ್ಯತೆಯಿದ್ದು, ಇದು ಕೊನೆಗೆ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಲಿದೆ. ಇನ್ನೂ ಗೃಹಬಳಕೆ (14.2 ಕೆ.ಜಿ.) ಎಲ್‌ಪಿಜಿ ಸಿಲಿಂಡರ್ ದರ ಕಡಿಮೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಸಾಮಾನ್ಯ ಜನರಿದ್ದರು. ಆದರೆ, ಇದರಲ್ಲಿ ಯಾವುದೇ ಬದಲಾವಣೆ ಆಗದಿರುವುದು ಸಾಮಾನ್ಯ ಜನರ ಭರವಸೆ ಸುಳ್ಳಾಗಿದೆ. ಮತ್ತೊಂದೆಡೆ ನೋಡುವುದಾದರೆ, ಇದರ ದರದಲ್ಲಿ ಏರಿಕೆ ಆಗದಿರುವುದು ನೆಮ್ಮದಿಯ ವಿಚಾರ ಆಗಿದೆ.
ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ದರ
* ಬೆಂಗಳೂರು - 855.50 ರೂಪಾಯಿ
* ದೆಹಲಿ: 853 ರೂಪಾಯಿ
* ಮುಂಬೈ: 852.50 ರೂಪಾಯಿ
* ಚೆನ್ನೈ: 868.50 ರೂಪಾಯಿ












Click it and Unblock the Notifications