LPG prices increased: ಮಾರ್ಚ್‌ 1ರಂದು ಎಲ್‌ಪಿಜಿ ಸಿಲಿಂಡರ್ ದರ ಏರಿಕೆ

LPG cylinder prices increased: ಪ್ರತಿ ತಿಂಗಳ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್ ದರವನ್ನು ಪರಿಷ್ಕರಿಸಲಾಗುತ್ತದೆ. ಹಾಗೆಯೇ ಇದೀಗ ಮಾರ್ಚ್‌ 1 ಅಂದರೆ ಇಂದು ಎಲ್‌ಪಿಜಿ ದರ ಏರಿಕೆಯಾಗಿದೆ. ಹಾಗಾದ್ರೆ, ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಎಷ್ಟು ಏರಿಕೆಯಾಗಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಇಂದು (ಮಾರ್ಚ್‌ 1) ಹೆಚ್ಚಳ ಮಾಡಿವೆ. ದೆಹಲಿಯಿ-ಕೋಲ್ಕತ್ತಾಗೆ ಈ ಸಿಲಿಂಡರ್ ದರ 6 ರೂಪಾಯಿ ಹೆಚ್ಚಳ ಆಗಿದೆ. ಇದಕ್ಕೂ ಮೊದಲು ಫೆಬ್ರವರಿ 1, 2025ರಂದು, ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 7 ರೂಪಾಯಿವರೆಗೆ ಇಳಿಸಿದ್ದವು. ಇನ್ನು ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ.

LPG cylinder prices increased on March 1 Know details

ಇದೀಗ ಇಂದು 19 ಕೆಜಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ನವದೆಹಲಿ ಸೇರಿದಂತೆ ಇತರ ನಗರಗಳಲ್ಲಿ ಸಿಲಿಂಡರ್ ಬೆಲೆಯನ್ನು 6 ರೂಪಾಯಿ ಹೆಚ್ಚಳ ಅಗಿದೆ. ಕಳೆದ ತಿಂಗಳ ಕೇಂದ್ರ ಬಜೆಟ್ ವೇಳೆ 19 ಕೆಜಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 7 ರೂಪಾಯಗಳಷ್ಟು ಕಡಿಮೆ ಮಾಡಲಾಗಿತ್ತು. ಇದೀಗ ಮಾರ್ಚ್‌ ತಿಂಗಳ ಮೊದಲ ದಿನವೇ ದರ ಏರಿಸಲಾಗಿದೆ. ‌
ಎಲ್‌ಪಿಜಿ ಸಿಲಿಂಡರ್‌ಗಳ ಮಾರ್ಚ್‌ ತಿಂಗಳ ಬೆಲೆಯನ್ನು ಗಮನಿಸಿದರೆ, ಮಾರ್ಚ್ 1ರಂದು ಆದ ಹೆಚ್ಚಳವು ಕಳೆದ 5 ವರ್ಷಗಳಲ್ಲಿ ಅತ್ಯಂತ ಕಡಿಮೆ ಆಗಿದೆ. ಕೇಂದ್ರ ಬಜೆಟ್ ದಿನದಂದು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಸಿಲಿಂಡರ್ ದರದಲ್ಲಿ 7 ರೂಪಾಯಿ ಇಳಿಕೆ ಮಾಡಲಾಗಿದ್ದು, ಇದೀಗ ಅದನ್ನು ಮತ್ತೆ ಹಿಂಪಡೆಯಲಾಗಿದೆ. ಇನ್ನು 2024ರ ಆಗಸ್ಟ್ 1ರಿಂದ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಇಂಡಿಯನ್ ಆಯಿಲ್ ಬಿಡುಗಡೆ ಮಾಡಿದ ಇತ್ತೀಚಿನ ದರದ ಪ್ರಕಾರ, ನವದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ಇದೀಗ 1,803 ರೂಪಾಯಿ ಇದೆ. ಈ ಹಿಂದೆ ಅಂದರೆ 2025ರ ಫೆಬ್ರವರಿ ತಿಂಗಳಲ್ಲಿ 1,797 ರೂಪಾಯಿ ಆಗಿತ್ತು. ಜನವರಿಯಲ್ಲಿ 1,804 ರೂ ಆಗಿತ್ತು.

ಯಾವ್ಯಾವಾಗ ದರ ಎಷ್ಟು?

* ಮಾರ್ಚ್ 01, 2025: 1,803 ರೂಪಾಯಿ
* ಫೆಬ್ರುವರಿ 01, 2025: 1797 ರೂಪಾಯಿ
* ಮಾರ್ಚ್, 01 2024: 1,795 ರೂಪಾಯಿ
* ಫೆಬ್ರುವರಿ 01, 2024: 1769.5 ರೂಪಾಯಿ
* ಮಾರ್ಚ್ 01, 2023: 2119.5 ರೂಪಾಯಿ
* ಫೆಬ್ರುವರಿ 01, 2023: 1,769 ರೂಪಾಯಿ

ಗೃಹಬಳಕೆ ಎಲ್‌ಪಿಜಿ (14 ಕೆಜಿ) ಸಿಲಿಂಡರ್‌ಗಳ ದರ: ನವದೆಹಲಿಯಲ್ಲಿ 14 ಕೆಜಿ ಎಲ್‌ಪಿಜಿ ಸಿಲಿಂಡರ್ ಆಗಸ್ಟ್ 1ರ ದರದಲ್ಲಿಯೇ ಲಭ್ಯವಿದೆ. ಮಾರ್ಚ್ 1, 2025ರಂದು ಗೃಹಬಳಕೆ ಸಿಲಿಂಡರ್ 803 ರೂಪಾಯಿಗಳಿಗೆ ಮಾರಾಟ ಆಗುತ್ತಿದೆ. ಕೋಲ್ಕತ್ತಾದಲ್ಲಿ 829 ರೂಪಾಯಿ, ಮುಂಬೈನಲ್ಲಿ 802.50 ರೂಪಾಯಿ, ಚೆನ್ನೈನಲ್ಲಿ 818.50 ರೂಪಾಯಿ, ಬೆಂಗಳೂರನಲ್ಲಿ 805.50 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+