Bank Holidays: 2025ರ ಫೆಬ್ರವರಿಯ ಬ್ಯಾಂಕ್ ರಜೆ ದಿನಗಳ ಪಟ್ಟಿ; ಕರ್ನಾಟಕದಲ್ಲಿ ಎಷ್ಟು ದಿನ?
Bank Holidays: ಪ್ರತಿ ತಿಂಗಳು ಬ್ಯಾಂಕ್‌ಗಳಿಗೆ ಇಷ್ಟು ರಜೆಗಳಂತ ಇರುತ್ತವೆ. ಹಾಗೆಯೇ ಮುಂಬರುವ 2025ರ ಫೆಬ್ರವರಿಯಲ್ಲಿ ದೇಶದ ವಿವಿಧೆಡೆ ಒಟ್ಟು 14 ದಿನಗಳವರೆಗೆ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಹಾಗಾದರೆ ಕರ್ನಾಟಕ ಸೇರಿದಂತೆ ಇನ್ನಿತರೆ ರಾಜ್ಯಗಳಲ್ಲಿ ಯಾವ್ಯಾವಾಗ ರಜರಗಳು ಇವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಈ ಬಾರಿಯ ಫೆಬ್ರವರಿ ತಿಂಗಳಲ್ಲಿ 28 ದಿನಗಳಿವೆ. ಅಧಿಕ ವರ್ಷ ಬಂದ ವೇಳೆ ಮಾತ್ರ 29 ದಿನಗಳಿರುತ್ತವೆ. ಈ ಬಾರಿಯ ಫೆಬ್ರುವರಿಯಲ್ಲಿ ವಸಂತ ಪಂಚಮಿ, ತೈಪುಶಮ್, ರವಿದಾಸ್ ಜಯಂತಿ, ಲುಯ್ ನಗಾರ್ ನೀ, ಶಿವಾಜಿ ಜಯಂತಿ, ಮಹಾಶಿವರಾತ್ರಿ ಇತ್ಯಾದಿ ಹಬ್ಬಗಳು ಬರುತ್ತವೆ. ಇದರ ಜೊತೆಗೆ 6 ಭಾನುವಾರ ಮತ್ತು ಶನಿವಾರದ ರಜೆಗಳೂ ಕೂಡ ಸೇರಿವೆ.

ಕೆಲ ರಜೆಗಳು ಕೆಲ ಪ್ರದೇಶಗಳಿಗೆ ಸೀಮಿತ ಆಗಿವೆ. ಮಿಝೋರಾಮ್ ರಾಜ್ಯೋತ್ಸವ ದಿನದಂದು ಆ ರಾಜ್ಯದಲ್ಲಿರುವ ಬ್ಯಾಂಕ್‌ಗಳಿಗೆ ಮಾತ್ರ ರಜೆ ಇರಲಿದೆ. ಮಹಾಶಿವರಾತ್ರಿ ದಿನ ತಮಿಳುನಾಡು, ಬಿಹಾರ, ಈಶಾನ್ಯ ರಾಜ್ಯಗಳ ಇತ್ಯಾದಿ ಕೆಲ ರಾಜ್ಯಗಳನ್ನು ಹೊರತುಪಡಿಸಿ ಎಲ್ಲಾ ಕಡೆಗಳಲ್ಲಿ ರಜೆ ನೀಡಲಾಗುತ್ತದೆ.
ಫೆಬ್ರವರಿ ತಿಂಗಳ ಬ್ಯಾಂಕ್ ರಜೆ ದಿನಗಳ ಪಟ್ಟಿ
* ಫೆಬ್ರವರಿ 2 - ಭಾನುವಾರ
* ಫೆಬ್ರವರಿ 3 - ಸೋಮವಾರ ವಸಂತ ಪಂಚಮಿ, ಸರಸ್ವತಿ ಪೂಜೆ ಹಿನ್ನೆಲೆ ಹರಿಯಾಣ, ಒಡಿಶಾ, ಪಂಜಾಬ್, ಪಶ್ಚಿಮ ಬಂಗಾಳ, ತ್ರಿಪುರಾ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ನೀಡಲಾಗುತ್ತದೆ.
* ಫೆಬ್ರವರಿ 8 - ಎರಡನೇ ಶನಿವಾರ
* ಫೆಬ್ರವರಿ 9 - ಭಾನುವಾರ
* ಫೆಬ್ರವರಿ 11 - ಮಂಗಳವಾರ ತೈಪುಶಮ್ ಹಬ್ಬ ಹಿನ್ನೆಲೆ ತಮಿಳುನಾಡಿನಲ್ಲಿ ರಜೆ
* ಫೆಬ್ರವರಿ 12 - ಬುಧವಾರ ಸಂತ ರವಿದಾಸ್ ಜಯಂತಿ ಹಿನ್ನೆಲೆ ಹಿಮಾಚಲ ಪ್ರದೇಶ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ ರಾಜ್ಯಗಳಲ್ಲಿ ರಜೆ
* ಫೆಬ್ರವರಿ 15 - ಶನಿವಾರ ಲುಯ್ ನಾಗಾಯ್ ನೀ ಹಬ್ಬ ಹಿನ್ನೆಲೆ ಮಣಿಪುರ ರಾಜ್ಯದಲ್ಲಿ ರಜೆ.
* ಫೆಬ್ರವರಿ 16 - ಭಾನುವಾರ
* ಫೆಬ್ರವರಿ 19 - ಬುಧವಾರ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಬ್ಯಾಂಕ್‌ಗಳಿಗೆ ರಜೆ
* ಫೆಬ್ರವರಿ 20 - ಗುರುವಾರ ರಾಜ್ಯೋತ್ಸವ ಹಿನ್ನೆಲೆ ಮಿಝೋರಾಮ್, ಅರುಣಾಚಲ ಪ್ರದೇಶದಲ್ಲಿ ಬ್ಯಾಂಕ್‌ಗಳಿಗೆ ರಜೆ
* ಫೆಬ್ರವರಿ 22 - 4ನೇ ಶನಿವಾರ
* ಫೆಬ್ರವರಿ 23 - ಭಾನುವಾರ
* ಫೆಬ್ರವರಿ 26 - ಬುಧವಾರ ಮಹಾಶಿವರಾತ್ರಿ ಹಬ್ಬಕ್ಕೆ ಕರ್ನಾಟಕ ಸೇರಿ ಹಲವೆಡೆ ಬ್ಯಾಂಕ್‌ಗಳಿಗೆ ರಜೆ
* ಫೆಬ್ರವರಿ 28 - ಶುಕ್ರವಾರ ಲೋಸರ್ ಹಬ್ಬ ಹಿನ್ನೆಲೆ ಸಿಕ್ಕಿಂ ರಾಜ್ಯದಲ್ಲಿ ರಜೆ
ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ
* ಫೆಬ್ರವರಿ 2 - ಭಾನುವಾರ
* ಫೆಬ್ರವರಿ 8 - ಎರಡನೇ ಶನಿವಾರ
* ಫೆಬ್ರವರಿ 9 - ಭಾನುವಾರ
* ಫೆಬ್ರವರಿ 16 - ಭಾನುವಾರ
* ಫೆಬ್ರವರಿ 22 - ನಾಲ್ಕನೇ ಶನಿವಾರ
* ಫೆಬ್ರವರಿ 23 - ಭಾನುವಾರ
* ಫೆಬ್ರವರಿ 26 - ಬುಧವಾರ ಮಹಾಶಿವರಾತ್ರಿ ಹಬ್ಬ












Click it and Unblock the Notifications