ಶ್ರಾವಣ ಮಾಸದಲ್ಲಿ ಭರ್ಜರಿ ಚಿನ್ನ, ಬೆಳ್ಳಿ ಖರೀದಿ: ಬೆಂಗಳೂರಿನಲ್ಲಿ ಇಂದು ಸ್ಥಿರತೆ ಕಾಯ್ದುಕೊಂಡ ಹಳದಿ ಲೋಹದ ದರ!
ಪವಿತ್ರವಾದ ಶ್ರಾವಣ ಮಾಸದ ಸಂಭ್ರಮ ಹಾಗೂ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ರಾಜ್ಯದ ಆಭರಣ ಮಾರುಕಟ್ಟೆಯಲ್ಲಿ ಹಳದಿ ಲೋಹದ ಖರೀದಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಇಂದು (ಆಗಸ್ಟ್ 23, 2026) ದೇಶಾದ್ಯಂತ ಹಾಗೂ ಕರುನಾಡಿನ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಯಾವುದೇ ಬದಲಾವಣೆ ಕಾಣದೆ ಸ್ಥಿರತೆಯನ್ನು ಕಾಯ್ದುಕೊಂಡಿವೆ.
ಮುಂಬೈ ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ ಮಾರುಕಟ್ಟೆಯ ವಹಿವಾಟಿನ ಸೂಚ್ಯಂಕ ಹಾಗೂ ಜಾಗತಿಕ ವಿದೇಹೀ ವಿನಿಮಯ ದರಗಳ ಆಧಾರದ ಮೇಲೆ ಎಂಸಿಎಕ್ಸ್ ಮಾರುಕಟ್ಟೆ ಧೋರಣೆಯಂತೆ ಚಿನ್ನ ಮತ್ತು ಬೆಳ್ಳಿ ದರಗಳು ನಿಗದಿಯಾಗಿವೆ. ಗ್ರಾಹಕರು ಆಭರಣ ಖರೀದಿ ಮಾಡುವ ಮುನ್ನ ಮಾರುಕಟ್ಟೆಯ ಇಂದಿನ ನಿಖರ ದರಗಳ ಬಗ್ಗೆ ತಿಳಿದುಕೊಳ್ಳುವುದು ತುಂಬ ಮುಖ್ಯ.

ಕಳೆದ ವಾರಾಂತ್ಯದಲ್ಲಿ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದ್ದ ಬೆಲೆಗಳು ಇಂದು ವಾರದ ರಜೆ ಹಿನ್ನೆಲೆಯಲ್ಲಿ ಸ್ಥಿರಗೊಂಡಿವೆ. ನಿನ್ನೆಯ ದಿನಕ್ಕೆ ಹೋಲಿಸಿದರೆ ಇಂದು ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ನಿನ್ನೆ ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಪ್ರಮುಖ ಮಾರುಕಟ್ಟೆಗಳಲ್ಲಿ ಯಾವ ಮಟ್ಟದಲ್ಲಿತ್ತೋ, ಅದೇ ಬೆಲೆ ಇಂದು ಕೂಡ ಮುಂದುವರಿದಿದೆ.
ಅದೇ ರೀತಿ ಬೆಳ್ಳಿ ಬೆಲೆಯು ಕೂಡ ಸ್ಥಿರವಾಗಿದ್ದು, ಪ್ರತಿ ಕೆಜಿ ಬೆಳ್ಳಿಯು ನಿನ್ನೆಯ ಮಾರುಕಟ್ಟೆ ದರದಲ್ಲೇ ಮಾರಾಟವಾಗುತ್ತಿದೆ.
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ಪಟ್ಟಿ
ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ದರವು ಈ ಕೆಳಗಿನಂತಿದೆ:
1. ಬೆಂಗಳೂರು: ₹14,950
2. ದೆಹಲಿ: ₹14,965
3. ಚೆನ್ನೈ: ₹14,950
4. ಮುಂಬೈ: ₹14,950
5. ಹೈದರಾಬಾದ್: ₹14,950
6. ಅಹಮದಾಬಾದ್: ₹14,950
7. ಪುಣೆ: ₹14,950
8. ಕೋಲ್ಕತ್ತಾ: ₹14,950
ಗ್ರಾಹಕರಿಗೆ ಸಲಹೆ
ಆಗಸ್ಟ್ 23ರಂದು ಚಿನ್ನ ಮತ್ತು ಬೆಳ್ಳಿ ಪ್ರಿಯರಿಗೆ ಮಾರುಕಟ್ಟೆಯಲ್ಲಿ ದರಗಳು ಏರಿಕೆಯಾಗದೆ ಒಂದೇ ಮಟ್ಟದಲ್ಲಿರುವುದು ಸ್ವಲ್ಪ ಮಟ್ಟಿನ ಸಮಾಧಾನಕರ ಸಂಗತಿಯಾಗಿದೆ. ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಶುಭ ಸಮಾರಂಭಗಳಿಗಾಗಿ ಚಿನ್ನಾಭರಣಗಳನ್ನು ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಸಕಾಲವಾಗಿದೆ.
ಗಮನಿಸಿ: ಆಭರಣ ಖರೀದಿಸಿದ ನಂತರ ಜ್ಯುವೆಲ್ಲರಿ ಶಾಪ್‌ಗಳಲ್ಲಿ ಜಿಎಸ್‌ಟಿ ಮತ್ತು ಮೇಕಿಂಗ್ ಚಾರ್ಜ್‌ಗಳನ್ನ ಸೇರಿಸುತ್ತಾರೆ.


Click it and Unblock the Notifications
