ರಿಲಯನ್ಸ್ ಜಿಯೋ ''2020 ಹ್ಯಾಪಿ ನ್ಯೂ ಇಯರ್ ಆಫರ್''

ಬೆಂಗಳೂರು, ಡಿಸೆಂಬರ್ 24: ರಿಲಯನ್ಸ್ ಜಿಯೋ "2020 ಹ್ಯಾಪಿ ನ್ಯೂ ಇಯರ್ ಆಫರ್'' ಅನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಹೊಸ ಯೋಜನೆಯಡಿ ರಿಲಯನ್ಸ್ ಜಿಯೋ ಗ್ರಾಹಕರು 2,020 ರೂಗಳನ್ನು ಪಾವತಿಸಿ ಒಂದು ವರ್ಷದವರೆಗೆ ''ಅನಿಯಮಿತ'' ಸೇವೆಗಳನ್ನು ಪಡೆಯಬಹುದಾಗಿದೆ. ರಿಲಯನ್ಸ್ ಜಿಯೋ ನೀಡಿರುವ ಹೊಸ ಯೋಜನೆ ಡಿಸೆಂಬರ್ 24, 2019 ರಿಂದ ಲಭ್ಯವಿರುತ್ತದೆ.

ರಿಲಯನ್ಸ್ ಜಿಯೋ ಪ್ರಾರಂಭಿಸಲಿರುವ ''2020 ಹ್ಯಾಪಿ ನ್ಯೂ ಇಯರ್ ಆಫರ್" ಸ್ಮಾರ್ಟ್‌ಫೋನ್ ಮತ್ತು ಜಿಯೋಫೋನ್ ಗ್ರಾಹಕರಿಗೆ ಲಭ್ಯವಿದೆ. ಸ್ಮಾರ್ಟ್‌ಫೋನ್ ಬಳಕೆದಾರರು ರಿಲಯನ್ಸ್ ಜಿಯೋ ಅನಿಯಮಿತ ಕರೆ, 1.5 ಜಿಬಿ ದೈನಂದಿನ ಡೇಟಾ, ಎಸ್‌ಎಂಎಸ್ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದಾಗಿದೆ. ಯೋಜನೆಯು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

Jio announces 2020 Happy New Year offer with 12 months of unlimited usage

ನೂತನ ಗ್ರಾಹಕರು 2,020 ರೂ ಪಾವತಿಸಿ ಹೊಸ ಜಿಯೋಫೋನ್ ಪಡೆಯಬಹುದಾಗಿದ್ದು, ಇದರೊಂದಿಗೆ 12 ತಿಂಗಳ ಸೇವೆಯನ್ನು ಪಡೆಯಬಹುದು ಎಂದು ರಿಲಯನ್ಸ್ ಜಿಯೋ ಹೇಳಿದೆ. ಯೋಜನೆಯಡಿಯಲ್ಲಿ ಜಿಯೋ ಪೋನ್ ಬಳಕೆದಾರರಿಗೆ ಅನಿಯಮಿತ ಕರೆ ಮಾಡುವ ಅವಕಾಶ, ದಿನಕ್ಕೆ 0.5 ಜಿಬಿ ಡೇಟಾ, ಎಸ್‌ಎಂಎಸ್ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದಾಗಿದೆ. ಜಿಯೋಫೋನ್ ಬಳಕೆದಾರರಿಗೆ ಯೋಜನೆಯು 12 ತಿಂಗಳು ವ್ಯಾಲಿಡಿಟಿಯನ್ನು ಹೊಂದಿರಲಿದೆ.

ನೂತನ "ಹ್ಯಾಪಿ ನ್ಯೂ ಇಯರ್ ಆಫರ್" ಅಡಿಯಲ್ಲಿ ಜಿಯೋ ಅಲ್ಲದೆ ಬೇರೆ ಕಂಪನಿಗಳಿಗೆ ಮಾಡುವ ಕರೆಗಳಿಗೆ ಎಫ್‌ಯುಪಿ ಅನ್ವಯಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+