ಇಂಡಿಗೋ ಏರ್ ಲೈನ್ಸ್ ಟಿಕೆಟ್ ರದ್ದು, ಬದಲಾವಣೆ ವೆಚ್ಚ ಹೆಚ್ಚಳ
ನವದೆಹಲಿ, ಜೂನ್ 30: ಮುಂದಿನ ಬಾರಿ ಇಂಡಿಗೋ ಏರ್ ಲೈನ್ಸ್ ಟಿಕೆಟ್ ಬುಕ್ ಮಾಡಬೇಕಾದರೆ, ಹೊಸದಾಗಿ ಜಾರಿಗೆ ಬಂದಿರುವ ಟಿಕೆಟ್ ರದ್ದು ವೆಚ್ಚವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.
ಪ್ರಯಾಣದ ದಿನಕ್ಕೂ ಮೂರು ದಿನಕ್ಕೂ ಮುನ್ನ ಟಿಕೆಟ್ ಕ್ಯಾನ್ಸಲ್ ಮಾಡಿದರೆ 500 ರು ತನಕ ಶುಲ್ಕ ಕಡಿತಗೊಳ್ಳಲಿದೆ. ಟಿಕೆಟ್ ರದ್ದು ಮಾಡುವ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಹೀಗಾಗಿ, ದೇಶಿ ವಿಮಾನಯಾನ ಟಿಕೆಟ್ ರದ್ದುಪಡಿಸಿದರೆ 3 ರಿಂದ 3,500 ರು ತನಕ ತಗುಲಲಿದೆ.

ಇಂಡಿಗೋ ಕ್ಯಾನ್ಸಲೆಷನ್ ಹಾಗೂ ಬದಲಾವಣೆ ವೆಚ್ಚ:
* ಯಾವುದೇ ಬಗೆಯ ಕ್ಯಾನ್ಸಲೇಷನ್ ಹಾಗೂ ಬದಲಾವಣೆ ವೆಚ್ಚ ಪ್ರಯಾಣಿಕರಿಗೆ 3,000 ರು ಹಾಗೂ 2,500 ರು ಆಗಲಿದೆ. ಭಾರತ ಉಪ ಖಂಡದ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಇದು ಅನ್ವಯ.
* ಆಗ್ನೇಯ, ಮಧ್ಯಪ್ರಾಚ್ಯ ಹಾಗೂ ಏಷ್ಯಾದ ಇತರೆ ಭಾಗದಲ್ಲಿ ಪ್ರಯಾಣಿಸಲು ಟಿಕೆಟ್ ಮಾಡಿ, ಪ್ರಯಾಣ ದಿನಕ್ಕಿಂತ 3 ದಿನ ಮುಂಚಿತವಾಗಿ ಟಿಕೆಟ್ ರದ್ದು ಪಡಿಸಿದರೆ 5,000ರು ತನಕ ಶುಲ್ಕ ವಿಧಿಸಲಾಗುತ್ತದೆ.
* ಇಂಡಿಗೋ ದೆಹಲಿ- ಇಸ್ತಾನ್ ಬುಲ್ ವಿಮಾನದ ಕ್ಯಾನ್ಸಲೆಷನ್ ಹಾಗೂ ಬದಲಾವಣೆ ವೆಚ್ಚ 6,500 ರು ಹಾಗೂ 5,000 ರು ಆಗಿದೆ. ಇದು ಕೂಡಾ ಪ್ರಯಾಣಕ್ಕೂ 3 ದಿನದ ಅವಧಿಯನ್ನು ಒಳಗೊಂಡಿದೆ.
* ಯುರೋಪಿಯನ್ ವಿಭಾಗದ ವಿಮಾನಯಾನ ಕ್ಯಾನಲೇಷನ್ ಶುಲ್ಕವು 6,500 ರು ಹಾಗೂ 5,000 ರು ರಷ್ಟಾಗಲಿದೆ.












Click it and Unblock the Notifications