ಜಗತ್ತಿಗೇ ಅನ್ನದ ಬಟ್ಟಲಾದ ಭಾರತ: ವಿಶ್ವದ ಅತಿ ದೊಡ್ಡ ಅಕ್ಕಿ ರಫ್ತುದಾರ ದೇಶ
ಇಂದು ಜಗತ್ತಿಗೇ ಅನ್ನದ ಬಟ್ಟಲಾಗಿದೆ ನಮ್ಮ ಭಾರತ. ವಿಶ್ವದ ಎರಡನೇ ಅತಿದೊಡ್ಡ ಅಕ್ಕಿ ಉತ್ಪಾದಿತ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಈಗ ಅಕ್ಕಿ ರಫ್ತಿನಲ್ಲೂ "ಜಾಗತಿಕ ನಾಯಕ"ನಾಗಿ ಹೊರ ಹೊಮ್ಮುತ್ತಿದೆ. ಒಂದು ದಶಕದಿಂದಲೂ ಅಕ್ಕಿ ರಫ್ತು ಉದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸುತ್ತ ಬಂದಿದೆ.
ನಮ್ಮ ವಿದೇಶಿ ಕಾರ್ಯಾಚರಣೆ, ಲಾಜಿಸ್ಟಿಕ್ಸ್‌ನ ಸಂಘಟಿತ ಅಭಿವೃದ್ಧಿ ಮತ್ತು ಗುಣಮಟ್ಟದ ಉತ್ಪನ್ನಗಳಿಂದಾಗಿ ಭಾರತದ ಅಕ್ಕಿ ರಫ್ತು ಆಶಾದಾಯಕವಾಗಿದೆ. ಹತ್ತು ವರ್ಷಗಳಿಂದ ಅಕ್ಕಿ ರಫ್ತು ಉದ್ಯಮದಲ್ಲಿ ಭಾರತ ಅಮೂಲಾಗ್ರ ಬದಲಾವಣೆ ಕಾಣುತ್ತ ಅಗ್ರ ಪಂಕ್ತಿಯಲ್ಲಿದೆ. 2025ರಲ್ಲಿ ಭಾರತದ ಅಕ್ಕಿ ಮಾರುಕಟ್ಟೆ ಗಾತ್ರ USD 54.09 ಶತಕೋಟಿ ಎಂಬ ಅಂದಾಜಿದ್ದು, 2030ರ ವೇಳೆಗೆ 2.4% CAGR ನಲ್ಲಿ USD 60.90 ಶತಕೋಟಿ ತಲುಪುವ ನಿರೀಕ್ಷೆಯಿದೆ.

ಭಾರತದ ಒಟ್ಟು ಅಕ್ಕಿ ರಫ್ತು ಜನವರಿ 2024ರಲ್ಲಿ $0.95 ಶತಕೋಟಿ ಇದ್ದದ್ದು, 2025ರ ಹೊತ್ತಿಗೆ ಕೇವಲ ಒಂದೇ ವರ್ಷದಲ್ಲಿ $1.37 ಶತಕೋಟಿಗೆ ಅಂದರೆ ಶೇ.44.61ರಷ್ಟು ಏರಿಕೆ ದಾಖಲಿಸಿದೆ. ಭಾರತೀಯ ಸಂಪ್ರದಾಯದಂತೆ ವಿದೇಶಿಗರಲ್ಲೂ ಶ್ರೇಷ್ಠತೆ, ಗುಣಮಟ್ಟ ಕಾಯ್ದುಕೊಂಡ ಪರಿಣಾಮ ರಫ್ತು ವಲಯದಲ್ಲಿ ಅಗ್ರ ಸ್ಥಾನ ಪಡೆದಿದೆ.
ಭಾರತದಿಂದ ಅಕ್ಕಿ ರಫ್ತಿನ ಬೇಡಿಕೆ ಪ್ರತಿ ದಿನ ಹೊಸ ಎತ್ತರಕ್ಕೆ ಏರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರದ ಗರಡಿಯಲ್ಲಿ ಭಾರತ ಇಂದು ವಿಯೆಟ್ನಾಂ, ಥೈಲ್ಯಾಂಡ್ , ಪಾಕಿಸ್ತಾನದಂತಹ ಪ್ರತಿಸ್ಪರ್ಧಿಗಳೆದುರು "ಪ್ರಮುಖ ರಫ್ತುದಾರ" ದೇಶವಾಗುತ್ತಿದೆ.
ಹಿಮಾಲಯ ಪ್ರದೇಶದಲ್ಲಿ ಬೆಳೆಯುವ ಬಿರಿಯಾನಿ ಚವಲ್ ಎಂದೇ ಪ್ರಸಿದ್ಧಿಯಾದ ಬಾಸ್ಮತಿ 1509, 1121, 1401, PUSA (DB), 1718 ಪ್ರಭೇದದ ಅಕ್ಕಿ ಹಾಗೂ ವಿವಿಧ ತಳಿಯ ಬಾಸ್ಮತಿಯೇತರ ತಳಿಗಳಲ್ಲಿ ಚಿನಿಗುರ, ಪೊನ್ನಿ, ಇಡ್ಲಿ, ಸೋನಾ ಮಸೂರಿ, PR-11, IR-64, ಜಯ, ಸೂರ್ತಿ ಕೋಲಂ, ಜೀರಾಕ್ಷಲಾ ಮುಂತಾದ ಅಕ್ಕಿ ವಿದೇಶಿಗರಲ್ಲಿ ರುಚಿ ಹೆಚ್ಚಿಸಿ ಹಸಿವು ನೀಗಿಸಿದೆ.
ಜಗತ್ತಿನೆಲ್ಲೆಡೆ ಭಾರತದ ಬಾಸ್ಮತಿ ಮತ್ತು ಕೆಂಪಕ್ಕಿ ಪರಿಮಳ: ವಿಶ್ವದಾದ್ಯಂತ ಇಂದು ಭಾರತದ ಬಾಸ್ಮತಿ ಅಕ್ಕಿಯ ಪರಿಮಳ ಹರಡಿದೆ. ಜತೆಗೆ ಆರೋಗ್ಯ ಶ್ರೇಷ್ಠವಾಗಿ "ಬಾವೊ-ಧಾನ್" ಎಂದು ಕರೆಯಲ್ಪಡುವ ಕೆಂಪಕ್ಕಿ ಸಹ ಇತ್ತೀಚಿನ ವರ್ಷಗಳಲ್ಲಿ ಬಹು ಬೇಡಿಕೆ ಕಂಡುಕೊಳ್ಳುತ್ತಿದೆ. ರಫ್ತು ವಲಯದಲ್ಲಿ ಬಾಸ್ಮತಿ ಮತ್ತು ಬಾಸ್ಮತಿಯೇತರ ಎರಡೂ ವಿಶಿಷ್ಠ ತಳಿಗಳ ಅಕ್ಕಿ ಗುಣಮಟ್ಟ, ನಾವೀನ್ಯತೆಯಿಂದಾಗಿ ವಿಶ್ವದ ಮಾರುಕಟ್ಟೆಗಳಲ್ಲಿ ಸುಸ್ಥಿರ ನೆಲೆ ಕಂಡುಕೊಂಡಿದೆ.
ಬಾಸ್ಮತಿ ಅಕ್ಕಿ ರಫ್ತು ಬೆಳವಣಿಗೆಗೆ ಪ್ರಮುಖ ಚಾಲಕವಾಗಿದೆ. ಉದ್ದನೆಯ ಧಾನ್ಯ, ಆಕರ್ಷಕ ಪಾಲಿಶ್, ಸುವಾಸನೆ ಮತ್ತು ರುಚಿಗೆ ಮಾರು ಹೋಗಿದ್ದಾರೆ ವಿದೇಶಿಗರು. ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಹಿತದ ಪಾಲಿಶ್ ಲೆಸ್ ಕೆಂಪಕ್ಕಿ ಸಹ ವಿಶ್ವದ ಮನೆಮಾತಾಗುತ್ತಿದೆ. ವಿಶ್ವದ ಒಟ್ಟು ಅಕ್ಕಿ ರಫ್ತಿನಲ್ಲಿ ಸುಮಾರು ಶೇ.40ಕ್ಕೂ ಹೆಚ್ಚು ಪಾಲನ್ನು ಹೊಂದಿದೆ.
ಅಕ್ಕಿ ರಫ್ತು ಮಾಡುವತ್ತ ದಾಪುಗಾಲು: ಭಾರತದ ಬಾಸ್ಮತಿಯೇತರ ಅಕ್ಕಿ 2013-14ರಲ್ಲಿ USD 2925 ಮಿಲಿಯನ್ ಇತ್ತು. 2021-22ರಲ್ಲಿ ಅದರ ಎರಡುಪಟ್ಟು ಅಂದರೆ USD 6115 ಮಿಲಿಯನ್ ತಲುಪಿದ್ದು, ಇದೀಗ ಶೇ.120ಕ್ಕಿಂತ ಹೆಚ್ಚು ರಫ್ತು ದಾಖಲಿಸಿದೆ. ಜಾಗತಿಕ ಅಕ್ಕಿ ವ್ಯಾಪಾರದಲ್ಲಿ ಅತಿ ದೊಡ್ಡ ಪಾಲನ್ನು ಹೊಂದಿರುವ ಭಾರತ, ಆಫ್ರಿಕಾ, ಏಷ್ಯಾ ಮತ್ತು ಯುರೋಪಿಯನ್ ಒಕ್ಕೂಟದಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸಿ ಓಟ ಮುಂದುವರಿಸಿದೆ. ವಿಶ್ವದ 100ಕ್ಕೂ ಅಧಿಕ ದೇಶಗಳಿಗೆ ಅಕ್ಕಿ ರಫ್ತು ಮಾಡುತ್ತಿದೆ.
ಭಾರತದ ಕೃಷಿ ಸರಕುಗಳ ಪೈಕಿ ಬಾಸ್ಮತಿ ಮತ್ತು ಬಾಸ್ಮತಿಯೇತರ ಅಕ್ಕಿ ರಫ್ತು ಅತಿ ಹೆಚ್ಚು ವಿದೇಶೀ ವಿನಿಮಯ ಗಳಿಸುವ ಮೂಲವಾಗಿದೆ. ಪಶ್ಚಿಮ ಆಫ್ರಿಕಾದ ಬೆನಿನ್ ಭಾರತದಿಂದ ಬಾಸ್ಮತಿಯೇತರ ಅಕ್ಕಿಯನ್ನು ಆಮದು ಮಾಡಿಕೊಳ್ಳುವ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ನೇಪಾಳ, ಬಾಂಗ್ಲಾದೇಶ, ಚೀನಾ, ಕೋಟ್ ಡಿ'ಐವೊಯಿರ್, ಟೋಗೊ, ಸೆನೆಗಲ್, ಗಿನಿಯಾ, ವಿಯೆಟ್ನಾಂ, ಜಿಬೌಟಿ, ಮಡಗಾಸ್ಕರ್, ಕ್ಯಾಮರೂನ್ ಸೊಮಾಲಿಯಾ, ಮಲೇಷ್ಯಾ, ಲೈಬೀರಿಯಾ ಯುಎಇ ಇತ್ಯಾದಿ ರಾಷ್ಟ್ರಗಳಿಗೂ ಭಾರತೀಯ ಅಕ್ಕಿ ಅತಿ ಹೆಚ್ಚು ರಫ್ತಾಗುತ್ತಿದೆ.
ಭಾರತದಲ್ಲಿ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಪಂಜಾಬ್, ತಮಿಳುನಾಡು, ಬಿಹಾರ, ಛತ್ತೀಸ್‌ಗಢ, ಒಡಿಶಾ, ಅಸ್ಸಾಂ ಮತ್ತು ಹರಿಯಾಣ, ಕರ್ನಾಟಕ ಹೆಚ್ಚು ಅಕ್ಕಿ ಉತ್ಪಾದಿತ ರಾಜ್ಯಗಳಾಗಿದ್ದು, ವಿದೇಶಗಳಿಗೆ ಅಕ್ಕಿ ರಫ್ತು ಮಾಡುವಲ್ಲಿ ಪ್ರಮುಖ ಕೊಡುಗೆ ನೀಡುತ್ತಿವೆ.
ಭಾರತೀಯ ಅಕ್ಕಿಗೆ ಜಾಗತಿಕ ಬೇಡಿಕೆ ಹೆಚ್ಚಿದ ಪರಿಣಾಮ ಸುಮಾರು 76 ದೇಶಗಳಿಗೆ ಭಾರತ ಒಂದು ಮಿಲಿಯನ್ USD ಗಿಂತ ಹೆಚ್ಚು ಅಕ್ಕಿ ರಫ್ತು ಮಾಡಿದೆ ಎಂಬ ಮಾಹಿತಿಯಿದೆ. ಬಾಸ್ಮತಿ ಅಕ್ಕಿ ರಫ್ತು 2023-24ರಲ್ಲಿ 5.24 ಮಿಲಿಯನ್ ಟನ್ ಮೀರಿದೆ. ವರ್ಷದಿಂದ ವರ್ಷಕ್ಕೆ ಶೇ.15ರಷ್ಟು ರಫ್ತು ಹೆಚ್ಚಳ ಕಂಡಿದ್ದು, ರಫ್ತು ಮೌಲ್ಯದಲ್ಲೂ ಶೇ.24ರಷ್ಟು ಹೆಚ್ಚಾಗಿದೆ. ಅಲ್ಲದೇ ಅಕ್ಕಿ ರಫ್ತಿನಲ್ಲಿ ಭಾರತ ತನ್ನ ಪ್ರತಿಸ್ಪರ್ಧಿ ರಾಷ್ಟ್ರಗಳಾದ ಪಾಕಿಸ್ತಾನ, ಥೈಲ್ಯಾಂಡ್‌ಗಿಂತ ಹೆಚ್ಚಿನ ಮುನ್ನಡೆ ಸಾಧಿಸಿದೆ. ಅದರಂತೆ ಅಕ್ಕಿ ಉತ್ಪಾದನೆಯಲ್ಲೂ ಅಗಾಧ ಬೆಳವಣಿಗೆ ಕಂಡಿದೆ.
ರಫ್ತು ಹೆಚ್ಚಳಕ್ಕೆ ಗುಣಮಟ್ಟವೇ ಉತ್ತೇಜನ: ಭಾರತೀಯ ಅಕ್ಕಿ ರಫ್ತು ಹೆಚ್ಚಳಕ್ಕೆ ಪ್ರಮಾಣೀಕೃತ ಗುಣಮಟ್ಟವೇ ಪ್ರಮುಖ ಕಾರಣ. ಜಾಗತಿಕ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಭಾರತೀಯ ರಫ್ತು ವಲಯ ಕಾರ್ಯ ನಿರ್ವಹಿಸುತ್ತಿದೆ. ISO 22000 ಮತ್ತು HACCP ಯಂತಹ ಪ್ರಮಾಣೀಕರಣ ನಮ್ಮ ರಫ್ತು ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ವಿದೇಶಿ ಗ್ರಾಹಕರ ಅಭಿರುಚಿ, ಆದ್ಯತೆಗಳನ್ನು ಅರಿತು ರಫ್ತುದಾರರು ವಿಭಿನ್ನ ಮಾರ್ಕೆಟಿಂಗ್ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಪರಿಸರ ಸ್ನೇಹಿ ಪ್ಯಾಕೇಜಿಂಗ್, ಸಾವಯವ ಪ್ರಭೇದಗಳು ಮತ್ತು ಕೀಟನಾಶಕ-ಮುಕ್ತ ಅಕ್ಕಿ ಪೂರೈಸಿ ಆಕರ್ಷಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ವಿದೇಶಿ ವ್ಯಾಪಾರ ಒಪ್ಪಂದ ಮತ್ತು ನೀತಿಗಳೂ ಇದಕ್ಕೆ ಬೆಂಬಲ ನೀಡುತ್ತಿವೆ.
ಡಿಜಿಟಲ್ ಮಾರ್ಕೆಟಿಂಗ್ ಪ್ರಭಾವ: ಭಾರತ ಅಕ್ಕಿ ರಫ್ತು ವಲಯದಲ್ಲಿ ಜಾಗತಿಕ ನಾಯಕತ್ವ ಮಟ್ಟಕ್ಕೆ ಬೆಳೆಯಲು ಪ್ರಧಾನಿ ಮೋದಿ ಅವರ ಡಿಜಿಟಲ್ ಮಾರ್ಕೆಟಿಂಗ್ ಬೆಂಬಲ ಮತ್ತು ಇ-ಕಾಮರ್ಸ್ ಉತ್ತೇಜನ ಮತ್ತೊಂದು ಪ್ರಮುಖ ಕಾರಣ. ರಫ್ತುದಾರರು ಸಾಂಪ್ರದಾಯಿಕ ವಿತರಣಾ ಮಾರ್ಗದ ಬದಲು ಸ್ಪರ್ಧಾತ್ಮಕ ಬೆಲೆಯೊಂದಿಗೆ ನೇರವಾಗಿ ವಿದೇಶಿ ಗ್ರಾಹಕರನ್ನು ತಲುಪಲು, ಡಿಜಿಟಲ್, ಆನ್‌ಲೈನ್ ಮಾರ್ಕೆಟಿಂಗ್ ಪ್ರಭಾವ ಬೀರಿದೆ. ಜತೆಗೆ ಭಾರತದ ಅಕ್ಕಿ ರಫ್ತು ಉದ್ಯಮ ದೇಶದ ಸುಸ್ಥಿರ ಕೃಷಿ ವಲಯಕ್ಕೂ ಶಕ್ತಿ ತುಂಬಿದೆ.
-
Adani: ಕೈಗಾರಿಕಾ ವಲಯಕ್ಕೆ ಗುಡ್ನ್ಯೂಸ್: ಅದಾನಿ ಟೋಟಲ್ ಗ್ಯಾಸ್ನಿಂದ ನೈಸರ್ಗಿಕ ಅನಿಲ ದರದಲ್ಲಿ ಭಾರಿ ಇಳಿಕೆ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ












Click it and Unblock the Notifications