ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

HP Layoffs : ಕಂಪ್ಯೂಟರ್‌ ಬೇಡಿಕೆ ಕುಸಿತ ಹಿನ್ನೆಲೆ: 6,000 ಉದ್ಯೋಗ ಕಡಿತಕ್ಕೆ ಎಚ್‌ಪಿ ಚಿಂತನೆ

|
Google Oneindia Kannada News

ನವದೆಹಲಿ, ನವೆಂಬರ್‌ 23: ಕಂಪ್ಯೂಟರ್ ತಯಾರಕ ಕಂಪನಿ ಎಚ್‌ಪಿ ಮುಂದಿನ ಮೂರು ವರ್ಷಗಳಲ್ಲಿ ಬರೋಬ್ಬರಿ 6,000 ಮಂದಿಯನ್ನು ಮನೆಗೆ ಕಳುಹಿಸಲು ಮುಂದಾಗಿದೆ. ದಿನೇ ದಿನೇ ವೈಯುಕ್ತಿಕ ಕಂಪ್ಯೂಟರ್‌ ಮಾರಾಟ ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಕಂಪೆನಿ ಮುಂದಾಗಿದೆ.

ಕಂಪ್ಯೂಟರ್‌ ಮಾರಾಟ ಕುಸಿತ ಕಾಣುತ್ತಿದ್ದು ಬೇಡಿಕೆ ನಿರಂತವಾಗಿ ಕುಸಿತಗೊಳ್ಳುತ್ತಿದೆ. ಕೆಲವು ವಸ್ತುಗಳನ್ನು ಹೊರತುಪಡಿಸಿ ಅಕ್ಟೋಬರ್‌ 2023ರಲ್ಲಿ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಒಂದು ಷೇರಿಗೆ 3.20 ಡಾಲರ್‌ನಿಂದ 3.60 ಮಾತ್ರವೇ ಆಗಿರುತ್ತದೆ ಎಂದು ಎಚ್‌ಪಿ ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಬ್ಲೂಮ್‌ಬರ್ಗ್‌ ಸಂಗ್ರಹಿಸಿದ ಮಾಹಿಯ ಪ್ರಕಾರ ಪ್ರತಿ ಷೇರಿಗೆ ಸರಾಸರಿ 3.61 ಡಾಲರ್‌ಗೆ ನಿಲ್ಲುತ್ತದೆ. ನಗದು ಹರಿವು ಕೂಡ 3.25 ಡಾಲರ್ ಶತಕೋಟಿ ಆಗಿರುತ್ತದೆ. ಆದರೆ ಇದು ಅಂದಾಜು ನಿರೀಕ್ಷೆಗಳಿಗಂತ ಕಡಿಯಾಗಿರುತ್ತದೆ ಎಂದು ಹೇಳಿದೆ.

ಗೂಗಲ್‌ ಮಾತೃಸಂಸ್ಥೆ ಆಲ್ಫಾಬೆಟ್‌ನಿಂದ 10,000 ಉದ್ಯೋಗಿ ವಜಾಕ್ಕೆ ಚಿಂತನೆಗೂಗಲ್‌ ಮಾತೃಸಂಸ್ಥೆ ಆಲ್ಫಾಬೆಟ್‌ನಿಂದ 10,000 ಉದ್ಯೋಗಿ ವಜಾಕ್ಕೆ ಚಿಂತನೆ

ಮುಂದಿನ ಆರ್ಥಿಕ ವರ್ಷದ ಮಾರಾಟದಲ್ಲಿ ಶೇ 10ರಷ್ಟು ಕುಸಿತ ಕಂಡುಬರುತ್ತದೆ. ನಾವು ಸವಾಲಿನ ವಾತಾವರಣವನ್ನು ಎದುರಿಸುತ್ತೇವೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್ರಿಕ್ ಲೋರೆಸ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಕಂಪ್ಯೂಟರ್‌ಗಳ ಮಾರಾಟದಿಂದ ಹೆಚ್ಚು ಹಣವನ್ನು ಗಳಿಸುವ ಎಚ್‌ಪಿ ಕಂಪೆನಿ ವೈಯುಕ್ತಿಕ ಕಂಪ್ಯೂಟರ್‌ಗಳ ಬೇಡಿಕೆಯಲ್ಲಿ ನಿರಂತರ ಕುಸಿತವನ್ನು ಕಾಣುತ್ತಿದೆ. ಕಳಪೆ ಮಟ್ಟದ ಗ್ರಾಹಕ ಉತ್ಪನ್ನಗಳಿಂದ ಈ ಕುಸಿತ ಆರಂಭವಾಗಿದ್ದು, ಉದ್ಯೋಗಿಗಳ ವಜಾಗಳು ಹಾಗೂ ತಂತ್ರಜ್ಞಾನದ ಮೇಲಿನ ಹೂಡಿಕೆ ಹಿಂತೆಗೆತಗಳಿಂದ ಈ ಪ್ರಕ್ರಿಯೆ ಆರಂಭವಾಯಿತು ಎಂದು ಎನ್ರಿಕ್‌ ಲೋರೆಸ್‌ ಹೇಳಿದರು.

Largest Layoffs of 2022 : ಈ ವರ್ಷ ಉದ್ಯೋಗಿಗಳನ್ನು ವಜಾ ಮಾಡಿದ ಪ್ರಮುಖ ಕಂಪನಿಗಳಿವುLargest Layoffs of 2022 : ಈ ವರ್ಷ ಉದ್ಯೋಗಿಗಳನ್ನು ವಜಾ ಮಾಡಿದ ಪ್ರಮುಖ ಕಂಪನಿಗಳಿವು

3ನೇ ತ್ರೈಮಾಸಿಕದಲ್ಲಿ ಲಾಭ ಕುಸಿತ

3ನೇ ತ್ರೈಮಾಸಿಕದಲ್ಲಿ ಲಾಭ ಕುಸಿತ

ಈ ಬಗ್ಗೆ ಉದ್ಯಮದ ವಿಶ್ಲೇಷಕ ಗಾರ್ಟ್ನರ್‌ ಎಚ್‌ಪಿ ಮೂರನೇ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಕಂಪ್ಯೂಟರ್‌ ಮಾರಾಟವು ಸುಮಾರು ಶೇ. 20ರಷ್ಟು ಕುಸಿತ ಕಂಡು ಬಂದಿತು. ವೈಯುಕ್ತಿಕ ಕಂಪ್ಯೂಟರ್‌ ಮಾರಾಟದಿಂದ ಶೇ. 55 ರಷ್ಟು ಆದಾಯ ಗಳಿಸುವ ಡೆಲ್‌ ಟೆಕ್ನಾಲಜಿಸ್‌ ಕೂಡ ಸೋಮವಾರ ತನ್ನ ಮೂರನೇ ತ್ರೈಮಾಸಿಕದಲ್ಲಿ ಲಾಭದಲ್ಲಿ ಕುಸಿತ ಕಂಡುಬಂದಿತು. ಪಿಸಿ ಖರೀದಿಸುವ ಗ್ರಾಹಕರ ಸಂಖ್ಯೆ ಕ್ಷೀಣಗೊಂಡ ಪರಿಣಾಮ ಆದಾಯ ಕೂಡ ಕುಸಿತ ಕಂಡುಬಂದಿತು.

2023ಕ್ಕೆ 1 ಶತಕೋಟಿ ಡಾಲರ್‌ ನಿರ್ವಹಣಾ ವೆಚ್ಚ

2023ಕ್ಕೆ 1 ಶತಕೋಟಿ ಡಾಲರ್‌ ನಿರ್ವಹಣಾ ವೆಚ್ಚ

ಕಂಪೆನಿಯ ದುಬಾರಿ ವೆಚ್ಚವನ್ನು ನಿರ್ವಹಿಸಲು ಮುಂದಿನ ಮೂರು ವರ್ಷಗಳಲ್ಲಿ 61,000 ಉದ್ಯೋಗಿಗಳ ಜಾಗತಿಕ ಕಾರ್ಯಪಡೆಯಲ್ಲಿ ಶೇ. 10ರಷ್ಟು ಕಡಿತಗೊಳಿಸಲಿದೆ. ಇದೇ ತಿಂಗಳು ಪ್ರಾರಂಭವಾದ 2023ರ ಆರ್ಥಿಕ ವರ್ಷದಲ್ಲಿ ಸುಮಾರು 60%ನಷ್ಟು ವಿವಿಧ ಶುಲ್ಕ ಪಾವತಿ ಮಾಡಬೇಕಿರುವುದರಿಂದ ಕಂಪೆನಿ ಇದಕ್ಕಾಗಿ 1 ಶತಕೋಟಿ ಡಾಲರ್‌ನಷ್ಟು ಭರಿಸಬೇಕಿದೆ ಎಂದು ಲೋರೆಸ್‌ ತಿಳಿಸಿದ್ದಾರೆ.

ಟ್ವಿಟ್ಟರ್‌ನಿಂದ ಕೂಡ 7,500 ಮಂದಿ ವಜಾ

ಟ್ವಿಟ್ಟರ್‌ನಿಂದ ಕೂಡ 7,500 ಮಂದಿ ವಜಾ

ಎಚ್‌ಪಿ ಮಾತ್ರವಲ್ಲದೆ ಹಲವಾರು ಟೆಕ್‌ ದೈತ್ಯ ಕಂಪೆನಿಗಳು ಕೂಡ ಉದ್ಯೋಗಿಗಳನ್ನು ಕಡಿತ ಮಾಡುತ್ತಿವೆ. ಇದರಲ್ಲಿ ಫೇಸ್‌ಬುಕ್‌ ಮಾತ್ರಸಂಸ್ಥೆ ಮೆಟಾ ಹಾಗೂ ಅಮೆಜಾನ್‌ ತಲಾ 10,000 ಉದ್ಯೋಗಿಗಳನ್ನು ವಜಾ ಮಾಡಲು ಪ್ರಾರಂಭಿಸಿದೆ. ಟ್ವಿಟ್ಟರ್‌ ಕೂಡ 7,500 ಮಂದಿಯನ್ನು ಮನೆಗೆ ಕಳುಹಿಸಿತು. ಅಲ್ಲದೆ ಸೀಗೇಜ್‌ ಟೆಕ್ನಾಲಜಿ ಹೋಲ್ಡಿಂಗ್ಸ್‌ ಕೂಡ 3,000 ಮಂದಿಯನ್ನು ವಜಾ ಮಾಡಿತು. ಇದರ ಜೊತೆ ಸಿಸ್ಕೋ ಸಿಸ್ಟಮ್‌ ಕೂಡ ಹಲವಾರು ಉದ್ಯೋಗಿಗಳನ್ನು ಹಾಗೂ ಕಚೇರಿಗಳನ್ನು ಕಡಿಮೆ ಮಾಡಿತು.

ಇತರ ಉತ್ಪನ್ನಗಳ ತಯಾರಿಕೆ ಯೋಜನೆ

ಇತರ ಉತ್ಪನ್ನಗಳ ತಯಾರಿಕೆ ಯೋಜನೆ

ಪ್ರಿಂಟರ್‌ಗಳನ್ನು ಸಹ ತಯಾರಿಸುವ ಎಚ್‌ಪಿ ಚಂದಾದಾರಿಕೆ ಸೇವೆಗಳಂತ ವ್ಯಾಪಾರದ ನೂತನ ಮಾರ್ಗದಲ್ಲಿ ಹೂಡಿಕೆ ಮಾಡಲು ಈಗ ನೋಡುತ್ತಿದೆ. ಕ್ಯಾಲಿಪೋರ್ನಿಯಾ ಮೂಲದ ಕಂಪೆನಿ ಪಾಲೊ ಆಲ್ಟೊ ಈಗಾಗಲೇ ಚಂದಾದಾರಿಕೆಗಳನ್ನು ನೀಡಲು ಶುರು ಮಾಡಿದೆ. ಇದು ಈಗ ಪ್ರಿಂಟರ್‌ ಪೇಪರ್‌ ಮತ್ತು ಕಂಪ್ಯೂಟರ್‌ಗಳಂತಹ ಇತರ ಉತ್ಪನ್ನಗಳ ತಯಾರಿಕೆ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ ಎಂದು ಎನ್ರಿಕ್‌ ಲೋರೆಸ್‌ ತಿಳಿಸಿದ್ದಾರೆ.

English summary
Computer maker HP plans to lay off 6,000 jobs over the next three years. The company has taken this step in view of the decline in personal computer sales day by day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X